/newsfirstlive-kannada/media/media_files/2025/11/28/cm-and-dcm-breakfast-meeting-2025-11-28-20-34-52.jpg)
ನಾಳೆ ಸಿಎಂ ನಿವಾಸದಲ್ಲಿ ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ನಿಗದಿ
ಕರ್ನಾಟಕದಲ್ಲಿ ಈಗ ಸಿಎಂ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಸಿಎಂ ಸ್ಥಾನವನ್ನು ಈಗ ತಮಗೆ ನೀಡಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಆದರೇ, ಬಾಕಿ ಉಳಿದ ಎರಡೂವರೆ ವರ್ಷಗಳ ಅವಧಿಗೂ ತಾವೇ ಸಿಎಂ ಆಗಿ ಮುಂದುವರಿದು ಅವಧಿ ಪೂರ್ಣಗೊಳಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಕೂಡ ಪಟ್ಟು ಹಿಡಿದಿದ್ದಾರೆ. ಇದು ಕಾಂಗ್ರೆಸ್ ಹೈಕಮ್ಯಾಂಡ್‌ಗೂ ದೊಡ್ಡ ತಲೆನೋವಾಗಿದೆ.
ಹೀಗಾಗಿ ಈಗ ಹೈಕಮ್ಯಾಂಡ್ ನಾಯಕರು, ಡಿಸಿಎಂ ಡಿಕೆಶಿ ಅವರನ್ನು ತಮ್ಮ ನಿವಾಸಕ್ಕೆ ಕರೆದು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸುವಂತೆ ಸಿಎಂ ಸಿದ್ದರಾಮಯ್ಯಗೆ ಸೂಚಿಸಿದ್ದಾರೆ. ಈ ಸೂಚನೆಯ ಹಿನ್ನಲೆಯಲ್ಲಿ ನಾಳೆ( ಶನಿವಾರ, ನವಂಬರ್ 29) ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿ ಅವರನ್ನು ತಮ್ಮ ಕಾವೇರಿ ನಿವಾಸಕ್ಕೆ ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಕರೆದಿದ್ದಾರೆ. ನಾಳೆ ಬೆಳಿಗ್ಗೆ 9.30 ಕ್ಕೆ ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ- ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಭಾಗಿಯಾಗುವರು. ಬೆಳ್ಳಂ ಬೆಳಿಗ್ಗೆ ತಿಂಡಿ ತಿನ್ನುತ್ತಾ ಸಿಎಂ ಸ್ಥಾನದ ಬಗ್ಗೆ ಇಬ್ಬರೂ ನಾಯಕರು ಚರ್ಚೆ ನಡೆಸುವರು. ಈ ಸಭೆಯಲ್ಲಿ ಏನಾಗುತ್ತೆ ಎಂಬ ಕುತೂಹಲ ಸೃಷ್ಟಿಯಾಗಿದೆ.
ಈ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನ ಬಿಟ್ಟುಕೊಡುವಂತೆ ಡಿಕೆ ಶಿವಕುಮಾರ್ ಮನವೊಲಿಸುತ್ತಾರಾ ಇಲ್ಲವೇ ತಮಗೆ ಬಾಕಿ ಉಳಿದ ಎರಡೂವರೆ ವರ್ಷ ಪೂರ್ಣಗೊಳಿಸಲು ಬಿಡುವಂತೆ ಡಿಕೆಶಿ ಅನ್ನು ಸಿದ್ದರಾಮಯ್ಯನೇ ಮನವೊಲಿಸುತ್ತಾರಾ ಎಂಬ ಕುತೂಹಲ ಸೃಷ್ಟಿಯಾಗಿದೆ.
ಸಿಎಂ ಸ್ಥಾನದ ಕಿತ್ತಾಟವನ್ನು ಸಿಎಂ, ಡಿಸಿಎಂ ಇಬ್ಬರೇ ಮಾತನಾಡಿ ಬಗೆಹರಿಸಿಕೊಳ್ಳಲು ಈ ಮೂಲಕ ಕಾಂಗ್ರೆಸ್ ಹೈಕಮ್ಯಾಂಡ್ ವೇದಿಕೆ ಸೃಷ್ಟಿಸಿದೆ.
/filters:format(webp)/newsfirstlive-kannada/media/media_files/2025/11/28/cm-and-dcm-breakfast-meeting02-2025-11-28-20-42-52.jpg)
ಹೀಗಾಗಿ ನಾಳೆಯ ಮಾತುಕತೆಯಲ್ಲಿ ಯಾರು ಯಾರು ಅನ್ನು ಮನವೊಲಿಸುತ್ತಾರೆ ಎಂಬುದು ಈಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈ ಕ್ಷಣದವರೆಗೂ ಸಿಎಂ ಸಿದ್ದರಾಮಯ್ಯ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಡಿಸಿಎಂ ಡಿಕೆಶಿ ಕೂಡ ತಮ್ಮ ಪಟ್ಟು ಸಡಿಲಿಸುತ್ತಿಲ್ಲ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us