ನಾಳೆ ಡಿಕೆಶಿ ಮನೆಗೆ ಬ್ರೇಕ್ ಫಾಸ್ಟ್ ಮೀಟಿಂಗ್‌ಗೆ ತೆರಳುವ ಸಿಎಂ: ಸಿದ್ದರಾಮಯ್ಯಗೆ ಇಷ್ಟವಾದ ನಾಟಿ ಕೋಳಿ ಸಾರು ರೆಡಿ ಮಾಡಲು ಡಿಕೆಶಿ ನಿರ್ಧಾರ

ನಾಳೆ ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್ ಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮನೆಗೆ ತೆರಳುವರು. ಸಿಎಂ ಸಿದ್ದರಾಮಯ್ಯ ಅವರಿಗೆ ಬ್ರೇಕ್ ಫಾಸ್ಟ್ ತಿಂಡಿಗಳ ಜೊತೆಗೆ ನಾಟಿ ಕೋಳಿ ಸಾರು ತಯಾರಿಸಲು ಡಿಸಿಎಂ ಡಿಕೆಶಿ ಕುಟುಂಬ ವರ್ಗ ನಿರ್ಧರಿಸಿದೆ.

author-image
Chandramohan
DK Shivakumar Siddaramaiah (1)

ನಾಳೆ ಡಿಸಿಎಂ ಮನೆಗೆ ಬ್ರೇಕ್ ಫಾಸ್ಟ್ ಗೆ ತೆರಳುವ ಸಿಎಂ ಸಿದ್ದರಾಮಯ್ಯ

Advertisment
  • ನಾಳೆ ಡಿಸಿಎಂ ಮನೆಗೆ ಬ್ರೇಕ್ ಫಾಸ್ಟ್ ಗೆ ತೆರಳುವ ಸಿಎಂ ಸಿದ್ದರಾಮಯ್ಯ
  • ಸಿದ್ದರಾಮಯ್ಯಗೆ ನಾಟಿ ಕೋಳಿ ಸಾರು ಸಿದ್ದಪಡಿಸಲು ಡಿಕೆಶಿ ಕುಟುಂಬ ನಿರ್ಧಾರ
  • ಬ್ರೇಕ್ ಫಾಸ್ಟ್ ಮೀಟಿಂಗ್ ಮೂಲಕ ನಮ್ಮ ನಡುವೆ ಬಿಕ್ಕಟ್ಟಿಲ್ಲ ಎಂಬ ಸಂದೇಶ ರವಾನೆ


ನಾಳೆ( ಡಿಸೆಂಬರ್‌ 2, ಮಂಗಳವಾರ)  ಸಿಎಂ ಸಿದ್ದರಾಮಯ್ಯ ಅವರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಮನೆಗೆ ಬ್ರೇಕ್ ಫಾಸ್ಟ್ ಗೆ ಆಹ್ವಾನಿಸಿದ್ದಾರೆ.  ಸಿಎಂ ಸಿದ್ದರಾಮಯ್ಯ ಪಕ್ಕಾ ಹಳ್ಳಿ ಸೊಗಡಿನ ನಾಯಕ. ಸಿದ್ದರಾಮಯ್ಯ ಅವರಿಗೆ ನಾಟಿ ಕೋಳಿ ಸಾರು ಅಂದರೇ, ಭಾರಿ ಇಷ್ಟ.  ಹೀಗಾಗಿ ನಾಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಇಷ್ಟವಾದ ನಾಟಿ ಕೋಳಿ ಸಾರು ಅನ್ನು ಸಿದ್ದಪಡಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಕುಟುಂಬ ನಿರ್ಧರಿಸಿದೆ. 
ಬೆಳಗಿನ ಬ್ರೇಕ್ ಫಾಸ್ಟ್ ತಿಂಡಿಗಳ ಜೊತೆಗೆ ನಾಟಿ ಕೋಳಿ ಸಾರು ಕೂಡ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಸಿದ್ದವಾಗಲಿದೆ. ವಿಶೇಷ ಅಂದರೇ, ಈಗ ಡಿ.ಕೆ.ಶಿವಕುಮಾರ್ ನಾನ್ ವೆಜ್ ಊಟ ಸೇವಿಸುತ್ತಿಲ್ಲ. ತುಮಕೂರಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗಳ ಸಲಹೆ ಮೇರೆಗೆ ಡಿಕೆಶಿ ನಾನ್ ವೆಜ್ ಸೇವನೆಯನ್ನು ನಿಲ್ಲಿಸಿದ್ದಾರೆ. ಆದರೇ, ತಮ್ಮ ಮನೆಗೆ ನಾಳೆ ಅತಿಥಿಯಾಗಿ ಬರುವ ಸಿಎಂ ಸಿದ್ದರಾಮಯ್ಯ ಅವರಿಗೆ ಅವರ ಇಷ್ಟದ ನಾನ್ ವೆಜ್ ಕೋಳಿ ಸಾರು ಅನ್ನು ಉಣಬಡಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ಈಗ ಬ್ರೇಕ್ ಫಾಸ್ಟ್ ಪಾಲಿಟಿಕ್ಸ್ ನಡೆಯುತ್ತಿದೆ. ಕಳೆದ ಶನಿವಾರ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ ನೀಡಿ ಉಪ್ಪಿಟ್ಟು, ಇಡ್ಲಿ ಸೇವಿಸಿದ್ದರು. ಈಗ ಸಿಎಂ ಸಿದ್ದರಾಮಯ್ಯ ಅವರಿಗಾಗಿ ನಾಟಿ ಕೋಳಿ ಸಾರು ತಯಾರಾಗೋದು ವಿಶೇಷ. ಕಳೆದ 2-3  ವರ್ಷದಲ್ಲಿ 2ನೇ ಭಾರಿಗೆ  ಡಿ.ಕೆ.ಶಿವಕುಮಾರ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಾರೆ. 2023ರ ಅಸೆಂಬ್ಲಿ ಚುನಾವಣೆ ವೇಳೆ ಕೂಡ ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ನೀಡಿದ್ದರು. ಆದಾದ ಬಳಿಕ ಈಗ ತಮ್ಮ ಡೆಪ್ಯುಟಿಯಾಗಿರುವ ಶಿವಕುಮಾರ್ ಮನೆಗೆ  ಬ್ರೇಕ್ ಫಾಸ್ಟ್ ಗಾಗಿ ಹೋಗುತ್ತಿದ್ದಾರೆ.

ಕಾಂಗ್ರೆಸ್ ಹೈಕಮ್ಯಾಂಡ್ ಪಾರ್ಲಿಮೆಂಟ್ ಅಧಿವೇಶನದ ವೇಳೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಬಿಕ್ಕಟ್ಟು ರಾಷ್ಟ್ರೀಯ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗದಂತೆ ತಡೆಯಲು ಈ ಬ್ರೇಕ್ ಫಾಸ್ಟ್ ಮೀಟಿಂಗ್ ಐಡಿಯಾ ಮಾಡಿ ಜಾರಿಗೊಳಿಸಿದೆ. ಸಿಎಂ, ಡಿಸಿಎಂ ಇಬ್ಬರಿಗೂ ತಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಮಾಧ್ಯಮಗಳ ಮುಂದೆ ಜೊತೆಯಾಗಿ ಹೇಳುವಂತೆ ಸೂಚನೆ ಕೊಟ್ಟಿದೆ. ಹೀಗಾಗಿ ಮತ್ತೆ ಸಿಎಂ, ಡಿಸಿಎಂ ಇಬ್ಬರೂ ಜೋಡೆತ್ತುಗಳ ರೀತಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ನಮ್ಮ ನಡುವೆ ಏನಿಲ್ಲ, ಏನಿಲ್ಲ ಅಂತ ಹಾಡು ಹಾಡುತ್ತಿದ್ದಾರೆ.  ಆದರೇ, ಮಾರ್ಚ್,  ಏಪ್ರಿಲ್ ತಿಂಗಳಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರದಲ್ಲಿ ಏನಾಗುತ್ತೆ ಎಂಬ ಬಗ್ಗೆ ಕುತೂಹಲ ಇದೆ.

CM AND DCM BREAKFAST MEETING02


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM AND DCM BREAKFAST MEETING CURIOSITY
Advertisment