ಬೇಸಿಗೆಗೂ ಮುನ್ನವೇ ಬೆಂಗಳೂರಿನಲ್ಲಿ ಏಳನೀರು ಬೆಲೆ ಏರಿಕೆ! ರೈತರಿಗೆ ಏರಿಕೆಯಾದ ಬೆಲೆಯ ಲಾಭ ಸಿಗುತ್ತಿದೆಯೇ?

ಬೆಂಗಳೂರಿನಲ್ಲಿ ಬೇಸಿಗೆಗೂ ಮುನ್ನವೇ ಬಿಸಿಲ ಧಗೆ ಫೆಬ್ರವರಿ ಅಂತ್ಯದಲ್ಲೇ ಶುರುವಾಗಿದೆ. ಜನರು ದೇಹ ತಂಪಾಗಿಸಿಕೊಳ್ಳಲು ಏಳನೀರು ಮೊರೆ ಹೋಗುತ್ತಿದ್ದಾರೆ. ಆದರೇ, ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಮುಂದಾಗಿರುವ ವ್ಯಾಪಾರಿಗಳು ಏಳನೀರು ಬೆಲೆಯನ್ನು ಸಿಕ್ಕಾಪಟ್ಟೆ ಏರಿಸಿದ್ದಾರೆ. ತೆಂಗು ಬೆಳೆದ ರೈತರಿಗೆ ಬೆಲೆ ಏರಿಕೆಯ ಲಾಭ ಸಿಗುತ್ತಿಲ್ಲ!

author-image
Chandramohan
coconut trees

ಬೇಸಿಗೆಯ ಧಗೆಗೆ ಏಳನೀರು ಮೊರೆ ಹೋದ ಜನರು

Advertisment
  • ಬೇಸಿಗೆಯ ಧಗೆಗೆ ಏಳನೀರು ಮೊರೆ ಹೋದ ಜನರು
  • ಬೆಂಗಳೂರಿನಲ್ಲಿ ಏರಿಕೆಯಾದ ಏಳನೀರು ಬೆಲೆ
  • ಏಳನೀರು ಬೆಲೆ ಏರಿಕೆಯಾದರೂ ರೈತರಿಗೆ ಲಾಭ ಸಿಗುತ್ತಿಲ್ಲ, ಏಕೆ?

ಬೇಸಿಗೆಯಲ್ಲಿ ಬಿರು ಬಿಸಿಲು ಸಹಜ, ಸಾಮಾನ್ಯ. ಆದರೇ, ಫೆಬ್ರವರಿ ತಿಂಗಳಲ್ಲಿ ಬಿಸಿಲು ಧಗೆ ಆರಂಭವಾಗಿದೆ.  ಇದರಿಂದ ಜನರು ಮೊದಲಿನಂತೆ ಕೂಲ್ ಡ್ರಿಂಕ್ಸ್ ಗಳತ್ತ ಹೆಚ್ಚು ಗಮನ ಕೊಡುತ್ತಿಲ್ಲ. ಕೂಲ್ ಡ್ರಿಂಕ್ಸ್ ಗಳಲ್ಲಿ ಕೆಮಿಕಲ್ಸ್ ಬಳಕೆಯಿಂದ ಆರೋಗ್ಯಕ್ಕೆ ಹಾನಿಕರ ಎಂಬ ಅಭಿಪ್ರಾಯದಿಂದ ಜನರು ನೈಸರ್ಗಿಕ ತಂಪು ಪಾನೀಯ ಏಳನೀರಿಗೆ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಏಳನೀರಿನ ಬೆಲೆ ಫೆಬ್ರವರಿಯಲ್ಲೇ ಗಗನಕ್ಕೇರಿದೆ.  ಬಿಸಿಲಿನ ಧಗೆಯಿಂದ ದೇಹ ತಂಪು ಮಾಡಿಕೊಳ್ಳಲು ಏಳನೀರು ಕುಡಿಯೋಣ ಅಂತ ಹೋದರೇ, ಜೇಬು ಬಿಸಿಯಾಗುವುದು ಗ್ಯಾರಂಟಿಯಾಗಿದೆ. ಬೆಂಗಳೂರಿನಲ್ಲಿ ಈ ಮೊದಲು ಏಳನೀರು ಬೆಲೆ 30 ರಿಂದ 50 ರೂಪಾಯಿವರೆಗೂ ಇತ್ತು. ಆದರೇ, ಈಗ ಫೆಬ್ರವರಿ ಅಂತ್ಯಕ್ಕೆ ಏಳು ನೀರು ಬೆಲೆ ಒಂದಕ್ಕೆ 70 ರಿಂದ 80 ರೂಪಾಯಿಗೆ ಏರಿಕೆಯಾಗಿದೆ.  ಏಪ್ರಿಲ್, ಮೇ ತಿಂಗಳಲ್ಲಿ ಏಳನೀರು ಬೆಲೆ ಮತ್ತಷ್ಟು ಹೆಚ್ಚಳವಾದರೂ ಅಚ್ಚರಿ ಇಲ್ಲ. 
ಮುಖ್ಯವಾಗಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಹೆಚ್ಚಾಗಿ ಏಳನೀರು ಮಂಡ್ಯ, ಮದ್ದೂರು ಭಾಗದಿಂದ ಪೂರೈಕೆಯಾಗುತ್ತೆ. ಮದ್ದೂರುನಲ್ಲಿ ಏಳನೀರು ಮಾರುಕಟ್ಟೆಯೇ ಇದೆ. ಮದ್ದೂರುನಲ್ಲಿ ಏಳನೀರು ಖರೀದಿಸಿ, ವ್ಯಾಪಾರಿಗಳು ಟೆಂಪೋದಲ್ಲಿ ಬೆಂಗಳೂರಿಗೆ ತಂದು ಎಲ್ಲ ಏರಿಯಾಗಳಲ್ಲೂ ಮಾರಾಟ ಮಾಡುತ್ತಾರೆ.

ಆದರೇ, ಮಂಡ್ಯ, ಮದ್ದೂರು ರೈತರಿಗೆ ಪ್ರತಿ ಏಳನೀರುಗೆ 15 ರಿಂದ 20 ರೂಪಾಯಿ ಹಣ ಸಿಗುತ್ತೆ ಅಷ್ಟೇ. ಆದರೇ, ಏಳನೀರು  ಅನ್ನು ಟೆಂಪೋದಲ್ಲಿ ಬೆಂಗಳೂರಿಗೆ ಸಾಗಿಸಿ, ಮಾರಾಟ ಮಾಡುವ ವ್ಯಾಪಾರಿಗಳಿಗೆ ಮಾತ್ರ ಭರ್ಜರಿ ಲಾಭ ಸಿಗುತ್ತೆ. 20 ರೂಪಾಯಿಗೆ ರೈತರಿಂದ ಖರೀದಿಸುವ ಏಳನೀರು ಅನ್ನು ಬೆಂಗಳೂರಿನಲ್ಲಿ 80 ರೂಪಾಯಿಗೆ ಮಾರಾಟ ಮಾಡುತ್ತಾರೆ. ಒಂದು ಏಳನೀರಿಗೆ ವ್ಯಾಪಾರಿಗಳು 50 ರಿಂದ 60 ರೂಪಾಯಿವರೆಗೂ ಲಾಭ ಪಡೆಯುತ್ತಾರೆ. ಟೆಂಪೋ ಬಾಡಿಗೆ ಖರ್ಚು, ಕಾರ್ಮಿಕರ ಕೂಲಿ ಕಳೆದರೂ, ವ್ಯಾಪಾರಿಗಳಿಗೆ ಭರ್ಜರಿ ಲಾಭ ಆಗುತ್ತಿರುವುದಂತೂ ಸತ್ಯ.

ಏಳನೀರು ಬೆಲೆ ಏರಿಕೆಯಿಂದ ತೆಂಗು ಬೆಳೆಯುವ ರೈತರಿಗೆ ಲಾಭವಾಗಬೇಕು. ಆದರೇ, ತೆಂಗು ಬೆಳೆಯುವ ರೈತರಿಗೆ ಏಳನೀರು ಬೆಲೆ ಏರಿಕೆಯಿಂದ ಲಾಭವಾಗದೇ, ಮಧ್ಯವರ್ತಿಗಳು, ವ್ಯಾಪಾರಿಗಳು, ಮಾರಾಟಗಾರರಿಗೆ ಮಾತ್ರ ಲಾಭವಾಗುತ್ತಿದೆ.  ಹೀಗಾಗಿ ದಾವಣಗೆರೆ ಜಿಲ್ಲೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ರೈತರೇ ಏಳನೀರು ಅನ್ನು ಬೆಂಗಳೂರಿನಂಥ ನಗರಗಳಿಗೆ ತಂದು ಮಾರಾಟ ಮಾಡುವ ಚರ್ಚೆಗಳು ನಡೆಯುತ್ತಿವೆ. 


ಏಳನೀರು ಬೆಲೆ ಏರಿಕೆಗೆ ಕಾರಣಗಳೇನು?

ಹವಾಮಾನ ವೈಪರೀತ್ಯದಿಂದ ಏಳನೀರು ಇಳುವರಿ ಕುಸಿತ, ಇದರಿಂದ ಬೆಲೆ ಏರಿಕೆ
ತೆಂಗಿಗೆ ನುಸಿರೋಗ, ಎಲೆಚುಕ್ಕೆ ರೋಗಗಳಿಂದ ಇಳುವರಿ ಕುಸಿತ
ಬೇಸಿಗೆ ಕಾಲದಲ್ಲಿ ಏಳನೀರು ಇಳುವರಿ ಕಡಿಮೆ, ಇದರಿಂದ ಬೆಲೆ ಏರಿಕೆ
ಹೆಚ್ಚಾದ ಸಾಗಣೆ ವೆಚ್ಚದಿಂದ ಬೆಲೆ ಏರಿಕೆ
ವ್ಯಾಪಾರಿಗಳ ಲಾಭಕೋರತನದಿಂದಾಗಿ ಬೆಲೆ ಏರಿಕೆ

coconut trees (1)


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

tender coconut price rise
Advertisment