/newsfirstlive-kannada/media/media_files/2025/08/11/namma-metro-1-2025-08-11-23-15-28.jpg)
ನಮ್ಮ ಮೆಟ್ರೋ
ನಮ್ಮ ಮೆಟ್ರೋ ಅಂದ್ರೆ ಬೆಂಗಳೂರಿಗರ ಪಾಲಿಗೆ ಹೆಮ್ಮೆಯ ಸಂಗತಿ.. ಆದ್ರೆ ಈ ಮೆಟ್ರೋ ಎಂಬ ಧನದಾಹಿ ಸಂಸ್ಥೆ ಆ ಗೌರವವನ್ನು ಉಳಿಸಿಕೊಂಡು ಬಂದಿಲ್ಲ. ಇತ್ತೀಚೆಗಷ್ಟೇ ಪ್ರಯಾಣ ದರ ಏರಿಸಿ ಶಾಕ್ ಕೊಟ್ಟಿದ್ದ ಬಿಎಂಆರ್​ಸಿಎಲ್​ ಈಗ ಮತ್ತೆ 5 ಶೇಕಡ ದರ ಏರಿಸಿದೆ. ಇದರಿಂದ ಕೆರಳಿರುವ ಪ್ರಯಾಣಿಕರು ಬಹಿಷ್ಕಾರದ ಕಹಳೆ ಮೊಳಗಿಸಿದ್ದಾರೆ. ಮೆಟ್ರೋಗೆ ಪ್ರತಿಯಾಗಿ ಬೈಕ್ ಮೊರೆ ಹೋಗಿದ್ದಾರೆ.
ನಮ್ಮ ಮೆಟ್ರೋ.. ಬೆಂಗಳೂರಿನ ಜೀವನಾಡಿ, ನರನಾಡಿ ಅಂತೆಲ್ಲ ಬಿರುದು ಬಾವಲಿಗಳಿಂದ ಕರೆಸಿಕೊಳ್ಳುತ್ತೆ. ಆದ್ರೆ ಇಲ್ಲಿ ಹೆಸರಲ್ಲಷ್ಟೇ ನಮ್ಮ ಮೆಟ್ರೋ ಅಂತ ಇರೋದು.. ಜನರೇ ಖುದ್ದಾಗಿ ಇದು ನಮ್ಮ ಮೆಟ್ರೋ ಅಂತ ಹೆಮ್ಮೆಯಿಂದ ಹೇಳುವಂತ ಕೆಲಸ ಮಾಡಿಲ್ಲ. ಬದಲಾಗಿ ಮೇಲಿಂದ ಮೇಲೆ ಗ್ರಾಹಕರ ಜೇಬಿಗೆ ಕೈ ಹಾಕುವ ಕೆಲಸ ಮಾಡ್ತಿದೆ. ಈಗ ಇದೆ ವಿರುದ್ಧ ಸಾರ್ವಜನಿಕರು ರೊಚ್ಚಿಗೆದ್ದು ಬಹಿಷ್ಕಾರಕ್ಕೆ ಕರೆ ಕೊಟ್ಟಿದ್ದಾರೆ.
5%ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆಗೆ ಸಿಡಿದ ಪ್ರಯಾಣಿಕರು
ಬಹಿಷ್ಕಾರ.. ಬೈಕ್​ನಲ್ಲಿ ಹೋಗುತ್ತೇವೆಂಬ ಅಭಿಯಾನಕ್ಕೆ ಕಿಕ್​ ಸ್ಟಾರ್ಟ್​!
ಹೇ ಟ್ರಾಫಿಕ್ ತಲೆ ಬಿಸಿ ಬೇಡ.. ಆರಾಮಾಗಿ ಎಸಿಯಲ್ಲಿ ಕೂತ್ಕೊಂಡು ಜಮ್ ಅಂತ ಬೆಂಗಳೂರಲ್ಲಿ ಓಡಾಡೋಕೆ ಅಂತಾನೇ ಜನರು ಹೆಚ್ಚೆಚ್ಚು ನಮ್ಮೆ ಮೆಟ್ರೋ ಬಳಸ್ತಾರೆ.. ಆದ್ರೆ ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಗೋಗಿದೆ. ಅದ್ಯಾಕೋ ಸಾಲ ಕೊಟ್ಟು ವಸೂಲಿ ಮಾಡುವವನಂತೆ ಗ್ರಾಹಕರ ಜೊತೆ ನಮ್ಮ ಮೆಟ್ರೋ ವರ್ತಿಸ್ತಿದೆ. ಮತ್ತೆ ಮತ್ತೆ ಗ್ರಾಹಕರ ಜೇಬಿಗೆ ಕೈ ಹಾಕ್ತಾನೇ ಇದೆ. ಕಳೆದ ವರ್ಷ ಫೆಬ್ರವರಿ 9ರಂದು ಮೆಟ್ರೋ ಟಿಕೆಟ್ ದರವನ್ನು ಶೇ101.5ರಷ್ಟು ಏರಿಸಲಾಗಿತ್ತು. ಇದಕ್ಕೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ದರವನ್ನು ಶೇ.71.5ಕ್ಕೆ ಇಳಿಸಲಾಗಿತ್ತು. ಈಗ ಮತ್ತೆ 5 ಶೇಕಡಾ ಟಿಕೆಟ್ ದರ ಏರಿಸಿರುವ ಬಿಎಂಆರ್​ಸಿಎಲ್ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ.
ಬಾಯ್ಕಾಟ್​ ನಮ್ಮ ಮೆಟ್ರೋ!
ಮೆಟ್ರೋ ಪ್ರಯಾಣ ದರ ಏರಿಕೆಗೆ ಸಿಡಿದೆದ್ದ ಪ್ರಯಾಣಿಕರು
ಜಾಲತಾಣಗಳ್ಲಿ ಮೆಟ್ರೋ ಬಾಯ್ಕಾಟ್ ಅಭಿಯಾನ ಶುರು
ಶೇ.5ರಷ್ಟು ಪ್ರಯಾಣ ದರ ಏರಿಕೆ ಮಾಡಿದ್ದಕ್ಕೆ ಅಸಮಾಧಾನ
ಮೆಟ್ರೋ ಬಹಿಷ್ಕರಿಸಿ ಬೈಕ್​ನಲ್ಲಿ ಹೋಗ್ತೆವೆಂದು ಪೋಸ್ಟ್
ಜಾಲತಾಣಗಳಲ್ಲಿ ಮೆಟ್ರೋ ಬಾಯ್ಕಾಟ್​ ಅಭಿಯಾನ ಜೋರು
(ಮೆಟ್ರೋ ಪ್ರಯಾಣ ದರ ಏರಿಕೆಗೆ ಪ್ರಯಾಣಿಕರು ಸಿಡಿದೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೆಟ್ರೋ ಬಾಯ್ಕಾಟ್ ಅಭಿಯಾನ ಶುರು ಮಾಡಿದ್ದಾರೆ. ಶೇಕಡಾ 5ರಷ್ಟು ಪ್ರಯಾಣ ದರ ಏರಿಕೆ ಮಾಡಿದ್ದಕ್ಕೆ ಅಸಮಾಧಾನಗೊಂಡಿರುವ ಗ್ರಾಹಕರು ಬಹಿಷ್ಕಾರದ ಮೊರೆ ಹೋಗಿದ್ದಾರೆ. ಮೆಟ್ರೋ ಬಹಿಷ್ಕರಿಸಿ ಬೈಕ್​ನಲ್ಲಿ ಹೋಗ್ತೆವೆಂದು ಪೋಸ್ಟ್ ಹಾಕ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮೆಟ್ರೋ ಬಾಯ್ಕಾಟ್​ ಅಭಿಯಾನ ಜೋರಾಗಿದೆ.)
ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಅಪಖ್ಯಾತಿ
ಇನ್ನು ನಮ್ಮ ಮೆಟ್ರೋ 5 ಶೇಕಡಾ ದರ ಹೆಚ್ಚಿಸುವ ಮೂಲಕ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಕುಖ್ಯಾತಿಗೆ ಬೆಂಗಳೂರು ಮೆಟ್ರೋ ಪಾತ್ರವಾಗಿದೆ. ದೆಹಲಿ, ಚೆನ್ನೈ, ಮುಂಬೈ ಸೇರಿ ಪ್ರಮುಖ ನಗರಗಳ ಮೆಟ್ರೋ ವ್ಯವಸ್ಥೆಗಳಿಗೆ ಹೋಲಿಸಿದರೆ ಬೆಂಗಳೂರಿನ ಮೆಟ್ರೋ ಟಿಕೆಟ್ ದರ ಆಗಸಕ್ಕೆ ಏಣಿ ಹಾಕಿದ್ರೆ ಜನರ ಜೇಬಿಗೆ ಕನ್ನ ಹಾಕಿದೆ. ಯಾವ್ಯಾವ ನಗರಗಳಲ್ಲಿ ಎಷ್ಟಿದೆ ಅಂತ ನೋಡೋದಾದ್ರೆ..
ಬಲು ದುಬಾರಿ ‘ನಮ್ಮ ಮೆಟ್ರೋ’
1. ಬೆಂಗಳೂರು (96 ಕಿ.ಮೀ)
ಕನಿಷ್ಠ ದರ - ₹11 (2 ಕಿ.ಮೀ ವರೆಗೆ)
ಗರಿಷ್ಠ ದರ - ₹95 ( 25 ಕಿ.ಮೀ ನಂತರ )
2. ದೆಹಲಿ (394 ಕಿ.ಮೀ)
ಕನಿಷ್ಠ ದರ - ₹11 ( 2 ಕಿ.ಮೀ ವರೆಗೆ)
ಗರಿಷ್ಠ ದರ - ₹64 ( 32 ಕಿ.ಮೀ ನಂತರ )
3. ಹೈದರಾಬಾದ್ (69 ಕಿ.ಮೀ)
ಕನಿಷ್ಠ ದರ- ₹10 (2 ಕಿ.ಮೀ ವರೆಗೆ )
ಗರಿಷ್ಠ ದರ- 69 ( 24 ಕಿ.ಮೀ ನಂತರ )
4. ಚೆನ್ನೈ ( 54 ಕಿ.ಮೀ )
ಕನಿಷ್ಠ ದರ - ₹10 ( 2 ಕಿ.ಮೀ ವರೆಗೆ)
ಗರಿಷ್ಠ ದರ- ₹50 ( 32 ಕಿ.ಮೀ ನಂತರ )
5. ಮುಂಬೈ ( 80 ಕಿ.ಮೀ )
ಕನಿಷ್ಠ ದರ - ₹10 ( 3 ಕಿ.ಮೀ ವರೆಗೆ )
ಗರಿಷ್ಠ ದರ - ₹80 ( 42 ಕಿ.ಮೀ ನಂತರ )
ಒಟ್ಟಾರೆ ನಮ್ಮೆ ಮೆಟ್ರೋ ಗ್ರಾಹಕರ ಪಾಲಿಗೆ ನಮ್ಮದಲ್ಲ ಎನ್ನುವಂತಾಗಿದೆ. ಇದು ಕೇವಲ ಹಣಕ್ಕಾಗಿ ಇರುವ, ಧನಧಾಹಿ ಸಂಸ್ಥೆ ಅನ್ನೋ ಹಣೆಪಟ್ಟಿ ಕಟ್ಟಿಕೊಂಡ ಕಂಪೆನಿ ಅಂತ ಜನಮಾನಸದಲ್ಲಿ ಕುಖ್ಯಾತಿ ಈಗಾಗಲೇ ಗಳಿಸಿಕೊಂಡಿದೆ. ಸದ್ಯ ಜನರು ಬಾಯ್ಕಾಟ್ ಅಭಿಯಾನ ಶುರುವಾಗಿದೆ. ಈಗಲಾದ್ರೂ ಬಿಎಂಆರ್​ಸಿಎಲ್ ಎಚ್ಚೆತ್ತುಕೊಳ್ಳಬೇಕಿದೆ.
ಸವಿತಾ, ನ್ಯೂಸ್​ ಫಸ್ಟ್​, ಬೆಂಗಳೂರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us