ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಲಂಚ ಪಡೆದು ಬಡ್ತಿ ನೀಡಿದ ಆರೋಪ- ಸ್ನೇಹಮಯಿ ಕೃಷ್ಣರಿಂದ ಐಟಿ, ಇ.ಡಿ.ಗೆ ದೂರು

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಮುಡಾ ಮಾಜಿ ಆಯುಕ್ತ ನಟೇಶ್ ಅವರಿಂದ ಲಂಚದ ಹಣ ಪಡೆದು ಅವರಿಗೆ ಬಡ್ತಿ ನೀಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪ ಮಾಡಿ ಐ.ಟಿ, ಇ.ಡಿ.ಗೆ ದೂರು ನೀಡಿದ್ದಾರೆ.

author-image
Chandramohan
snehamayi krishna complaiants agianst CS SHALINI (1)

ಸಿಎಸ್ ಶಾಲಿನಿ ರಜನೀಶ್ ವಿರುದ್ಧ ಸ್ನೇಹಮಯಿ ಕೃಷ್ಣರಿಂದ ದೂರು

Advertisment
  • ಸಿಎಸ್ ಶಾಲಿನಿ ರಜನೀಶ್ ವಿರುದ್ಧ ಸ್ನೇಹಮಯಿ ಕೃಷ್ಣರಿಂದ ದೂರು
  • ಲಂಚದ ಹಣ ಪಡೆದು ಡಿ.ಬಿ.ನಟೇಶ್‌ ಗೆ ಹುದ್ದೆಯಲ್ಲಿ ಬಡ್ತಿ ನೀಡಿದ ಆರೋಪ
  • ಇಟಿಯೋಸ್ ಕಾರಿನಲ್ಲಿ ಲಂಚದ ಹಣ ಸಾಗಾಟ ಎಂದು ದೂರು
  • ಐ.ಟಿ ಹಾಗೂ ಇ.ಡಿ. ಯಿಂದ ತನಿಖೆಗೆ ದೂರು ಸಲ್ಲಿಕೆ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಮುಡಾ ಕೇಸ್ ನಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮಾಜಿ ಆಯುಕ್ತ ನಟೇಶ್ ರಿಂದ ಲಂಚದ ಹಣ ಪಡೆದು ಹುದ್ದೆಯಲ್ಲಿ ಬಡ್ತಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮುಡಾ ಆಕ್ರಮ ಸೈಟ್ ಹಂಚಿಕೆ ಕೇಸ್ ನಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ , ಈಗ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. 
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಲಂಚದ ಹಣ ಪಡೆದ ಆರೋಪ ಮಾಡಿ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗೆ ಸ್ನೇಹಮಯಿ ಕೃಷ್ಣ ಲಿಖಿತ ದೂರು ನೀಡಿದ್ದಾರೆ. 

ಕೆಎ 41 ಸಿ 6723 ನಂಬರ್‌ನ ಇಟೀಯೋಸ್ ಕಾರಿನಲ್ಲಿ 5 ಬ್ಯಾಗ್ ಗಳಲ್ಲಿ ಹಣ ತರಲಾಗಿತ್ತು. ಆ ಹಣವನ್ನು ಶಾಲಿನಿ ರಜನೀಶ್ ಕಡೆಯವರಿಗೆ ನೀಡಲಾಗಿದೆ. ಕೆಎ 41 ಸಿ 6723 ನಂಬರ್ ನ ಕಾರ್ ಸದ್ಯ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯಗ ಸಂಸ್ಥೆಗೆ ಸೇರಿದೆ. ಪ್ರಸ್ತುತ ನಟೇಶ್ ಅಲ್ಲೇ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ವಿಸ್ತೃತ ತನಿಖೆಯಾಗಬೇಕೆಂದು ಸ್ನೇಹಮಯಿ ಕೃಷ್ಣ ತಾವು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಾರಿನಲ್ಲಿ ಬಂದ ನಿಖಿಲ್, ಜಸ್ವಂತ್, ನಟೇಶ್ ಹಾಗೂ ಶಾಲಿನಿ ರಜನೀಶ್ ಪೋನ್ ಕರೆಗಳನ್ನು ಪರಿಶೀಲನೆ ನಡೆಸಿದರೇ, ಸತ್ಯಾಂಶ ಹೊರಬರಲಿದೆ ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

snehamayi krishna complaiants agianst CS SHALINI (2)


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BRIBE IN BANGALORE Bribe allegation against Chief secretary Shalini Rajaneesh
Advertisment