/newsfirstlive-kannada/media/media_files/2026/01/30/confident-group-owner-cj-roy-suicide-2026-01-30-17-47-19.jpg)
ಕಾನ್ಪಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ.ರಾಯ್ ಆತ್ಮಹತ್ಯೆ
ಬೆಂಗಳೂರಿನ ಪ್ರಸಿದ್ದ ಕಾನ್ಪಿಡೆಂಟ್ ಗ್ರೂಪ್ ಚೇರ್ ಮೆನ್ ಅಧ್ಯಕ್ಷ ಸಿ.ಜೆ.ರಾಯ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಇರುವ ಕಾನ್ಪಿಡೆಂಟ್ ಗ್ರೂಪ್ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿ.ಜೆ.ರಾಯ್ ಅವರು ಹತ್ತಾರು ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಆದರೇ, ಇತ್ತೀಚೆಗೆ ಕಾನ್ಪಿಡೆಂಟ್ ಗ್ರೂಪ್ ಹಾಗೂ ಸಿ.ಜೆ.ರಾಯ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಈ ದಾಳಿಯಿಂದ ಸಿ.ಜೆ.ರಾಯ್ ಕಂಗಾಲಾಗಿದ್ದರು. ಆದಾಯ ತೆರಿಗೆ ವಂಚನೆಯ ಹಿನ್ನಲೆಯಲ್ಲಿ ಐ.ಟಿ. ದಾಳಿ ನಡೆದಿತ್ತು. ಇಂದು ಕೂಡ ಸಿ.ಜೆ.ರಾಯ್ ಹಾಗೂ ಕಾನ್ಪಿಡೆಂಟ್ ಗ್ರೂಪ್ ಮೇಲೆ ಐ.ಟಿ. ದಾಳಿ ನಡೆದಿತ್ತು.
ಕಾನ್ಪಿಡೆಂಟ್ ಗ್ರೂಪ್ ರಿಯಲ್ ಎಸ್ಟೇಟ್ ಲೇಔಟ್, ಹೋಟೇಲ್, ರೆಸಾರ್ಟ್, ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಿ.ಜೆ.ರಾಯ್ ಬಂಡವಾಳ ಹೂಡಿಕೆ ಮಾಡಿ ಯಶಸ್ವಿಯಾಗಿ ಉದ್ಯಮವನ್ನು ನಡೆಸುತ್ತಿದ್ದರು.
ಸಿ.ಜೆ.ರಾಯ್ ಸಾವಿರಾರು ಕೋಟಿ ಒಡೆಯರಾಗಿದ್ದರು. ಬಡವರಿಗೆ ದಾನ- ಧರ್ಮ ಕೂಡ ಮಾಡುತ್ತಿದ್ದರು. ಇತ್ತೀಚೆಗೆ 201 ವಿದ್ಯಾರ್ಥಿಗಳಿಗೆ ಎಜುಕೇಷನ್ ಸ್ಕಾಲರ್ ಶಿಪ್ ನೀಡಿದ್ದರು.
ಸಿ.ಜೆ.ರಾಯ್ 12 ರೋಲ್ಸ್ ರಾಯ್ಸ್ ಕಾರ್ ಗಳನ್ನು ಹೊಂದಿದ್ದಾರೆ. ಹತ್ತು ಕೋಟಿ ರೂಪಾಯಿ ಬೆಲೆಬಾಳುವ ಫ್ಯಾಂಟೋನ್-8 ಕಾರ್ ಅನ್ನು 10 ಕೋಟಿ ರೂಪಾಯಿ ನೀಡಿ ಖರೀದಿಸಿದ್ದರು.
ಇಂಥ ಲಕ್ಷುರಿ, ಐಷಾರಾಮಿ ಜೀವನ ನಡೆಸುತ್ತಿದ್ದ ಉದ್ಯಮಿ ಸಿ.ಜೆ.ರಾಯ್ ಧೀಡೀರನೇ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಶಾಕಿಂಗ್.
ಬಿಗ್ ಬಾಸ್ ವಿನ್ನರ್ ಗಳಿಗೆ 50 ಲಕ್ಷ ರೂಪಾಯಿ ಹಣವನ್ನು ಸಿ.ಜೆ.ರಾಯ್ ಪ್ರಾಯೋಕತ್ವ ಮಾಡುತ್ತಿದ್ದರು.
ಸಿ.ಜೆ.ರಾಯ್ ಆದಾಯ ತೆರಿಗೆ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us