/newsfirstlive-kannada/media/media_files/2025/12/12/hh-revanna-2025-12-12-11-35-33.jpg)
ಬೆಂಗಳೂರು: ನನ್ನ ಮಗ ಗಾಡಿ ಓಡಿಸಿಲ್ಲ, ಚಾಲಕ ಇದ್ದ. ಅಪಘಾತ ಆಗಿದೆ, ನನಗೂ ಅನುಕಂಪವಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ H.M.ರೇವಣ್ಣ ಹೇಳಿದ್ದಾರೆ.
ಹೆಚ್​.ಎಂ.ರೇವಣ್ಣ ಅವರ ಪುತ್ರನ ಕಾರು ಅಪಘಾತದಲ್ಲಿ ಬಿ.ಜಿ.ರಾಜೇಶ್​ ಎಂಬ 23 ವರ್ಷದ ಯುವಕನ ಜೀವ ಕಳೆದುಕೊಂಡಿದ್ದಾನೆ. ಇದೇ ವಿಚಾರಕ್ಕೆ ನ್ಯೂಸ್​ಫಸ್ಟ್ ಜೊತೆ ಮಾತನ್ನಾಡಿರುವ ಹೆಚ್.ಎಂ.ರೇವಣ್ಣ, ನಿನ್ನೆ ರಾತ್ರಿ ಗುಡೇಮಾರನಹಳ್ಳಿ ಟೋಲ್ ಬಳಿ ಅಪಘಾತ ಆಗಿದೆ. ಪೂಜೆ ಮುಗಿಸಿ ಬರುವಾಗ ಘಟನೆ ಆಗಿದೆ.
ಅಪಘಾತ ಬಳಿಕ ಅಲ್ಲಿ ಗಲಾಟೆ ಆಗುತ್ತೆ ಅಂತ ಮುಂದೆ ಬಂದಿದ್ದಾರೆ. ಕಾರನನ್ನ ನನ್ನ ಪುತ್ರ ಶಶಾಂಕ್ ಓಡಿಸುತ್ತಿರಲಿಲ್ಲ. ಬದಲಿಗೆ ಡ್ರೈವರ್ ಇದ್ದ. ಹಾಗೆಯೇ ಕಾರಿನಲ್ಲಿ ಮಗು, ಪತ್ನಿ ಇದ್ದರು. ಗಲಾಟೆಯ ಭಯದಿಂದ ಮುಂದೆ ಬಂದಿದ್ದಾರೆ. ಘಟನೆ ಆಗಿದ್ದಕ್ಕೆ ಕ್ಷಮೆ ಇರಲಿ. ಸಂತ್ರಸ್ತ ಕುಟುಂಬ ಭೇಟಿಯಾಗಲು ಹೋಗ್ತಿದ್ದೇನೆ. ಸಂತ್ರಸ್ತ ಕುಟುಂಬದವರಿಗೆ ಸಹಾಯ ಮಾಡುತ್ತೇನೆ. 2 ಬೈಕ್​ಗಳಿಂದಾಗಿ ಅಪಘಾತ ಆಯ್ತು ಅಂತಾರೆ ಎಂದಿದ್ದಾರೆ.
ಇದನ್ನೂ ಓದಿ:HM ರೇವಣ್ಣ ಪುತ್ರನಿಂದ ಕಾರು ಅಪಘಾತ; 23 ವರ್ಷದ ಯುವಕ ಬಲಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us