/newsfirstlive-kannada/media/media_files/2025/12/01/congress-mla-ajay-singh-2025-12-01-18-20-25.jpg)
ಜೇವರ್ಗಿ ಕಾಂಗ್ರೆಸ್ ಶಾಸಕ ಅಜಯ ಸಿಂಗ್
ಸಿಎಂ ಖುರ್ಚಿ ಫೈಟ್ ನಡುವೆ ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಜಯ ಸಿಂಗ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಬದಲಾವಣೆ ಆಗುತ್ತದೆ, ಆಗಲೇಬೇಕಾಲ್ಲವೇ? ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಲ್ಲಿ ಆಗಬಹುದು. ಎಲ್ಲರೂ ಕುಳಿತು ಮಾತನಾಡುತ್ತಾರೆ. ಈಗ ತೊಂದರೆ ಇಲ್ಲ. ಈಗ ಸಿಎಂ, ಡಿಸಿಎಂ ಪ್ರೆಸ್ ಮೀಟ್ ಮಾಡಿದ್ದಾರೆ ಅಂದರೇ, ತೊಂದರೆ ಇದೆ ಎಂದರ್ಥ. ಇದರ ಬಗ್ಗೆ ಹೈಕಮ್ಯಾಂಡ್ ತೀರ್ಮಾನ ಮಾಡುತ್ತೆ ಎಂದು ಕಾಂಗ್ರೆಸ್ ಶಾಸಕ ಅಜಯ ಸಿಂಗ್ ಹೇಳಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿರುವ ಅಜಯ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕರು, ಸಚಿವರು, ನಾಯಕರೆಲ್ಲಾ ಬಹಿರಂಗವಾಗಿ ನಮ್ಮ ಪಕ್ಷ, ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುವಾಗ, ಅಜಯ ಸಿಂಗ್ ಮಾತ್ರ ಸಿಎಂ, ಡಿಸಿಎಂ ಜಂಟಿ ಪ್ರೆಸ್ ಮೀಟ್ ಮಾಡಿದ್ದಾರೆ ಅಂದರೇ, ತೊಂದರೆ ಇದೆ ಎಂದರ್ಥ ಎಂದಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ.
ಆದರೇ, ಶಾಸಕ ಅಜಯ ಸಿಂಗ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರೇನು ಹೈಕಮ್ಯಾಂಡ್ ಎಂದು ಸಿಎಂ ಪ್ರಶ್ನಿಸಿದ್ದಾರೆ.
/filters:format(webp)/newsfirstlive-kannada/media/media_files/2025/12/01/congress-mla-ajay-singh-02-2025-12-01-18-23-19.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us