/newsfirstlive-kannada/media/post_attachments/wp-content/uploads/2023/09/kempegowda_Airport_1.jpg)
ಬೆಂಗಳೂರು ದಕ್ಷಿಣ ಭಾಗದಲ್ಲಿ 2ನೇ ಏರ್ ಪೋರ್ಟ್ ನಿರ್ಮಾಣ ಎಂದ ಡಿಕೆಶಿ
ಬೆಂಗಳೂರಿನ ಎರಡನೇ ಏರ್ ಪೋರ್ಟ್ ಯಾವ ಸ್ಥಳದಲ್ಲಿ ನಿರ್ಮಾಣವಾಗುತ್ತೆ ಎಂಬ ಸುಳಿವು ಅನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದಾರೆ. ಬೆಂಗಳೂರಿನ ಎರಡನೇ ಏರ್ ಪೋರ್ಟ್ ಅನ್ನು ದಕ್ಷಿಣ ಭಾಗದ ಕನಕಪುರ ರಸ್ತೆಯ ಬಳಿ ನಿರ್ಮಿಸಲಾಗುತ್ತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್ ನಲ್ಲಿ ಭಾಗವಹಿಸಿ ಮಾತನಾಡುವಾಗ ಡಿಸಿಎಂ ಡಿ.ಕೆ.ಶಿವಕುಮಾರ್ , ಬೆಂಗಳೂರಿನ ದಕ್ಷಿಣ ಭಾಗದಲ್ಲಿ 2ನೇ ಏರ್ ಪೋರ್ಟ್ ನಿರ್ಮಿಸಲಾಗುತ್ತೆ ಎಂದಿದ್ದಾರೆ.
ಕನಕಪುರ ರಸ್ತೆಯ ಬಳಿ ಕಗ್ಗಲೀಪುರ ಹಾಗೂ ಹಾರೋಹಳ್ಳಿ ಬಳಿ ಎರಡು ಸ್ಥಳಗಳನ್ನು 2ನೇ ಏರ್ ಪೋರ್ಟ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಗುರುತಿಸಿದೆ. ಈ ಎರಡೂ ಸ್ಥಳಗಳಲ್ಲೂ 5 ಸಾವಿರ ಎಕರೆ ಜಾಗ ಏರ್ ಪೋರ್ಟ್ ಗೆ ಲಭ್ಯವಾಗುವಂತೆ ಮಾಡುವುದಾಗಿ ರಾಜ್ಯ ಸರ್ಕಾರ, ಈಗಾಗಲೇ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳು ಈ ವರ್ಷದ ಏಪ್ರಿಲ್ ನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲ್ಲಿಸಿದ್ದಾರೆ. ಆದರೇ, ಕನಕಪುರ ರಸ್ತೆಯ 2 ಸ್ಥಳಗಳಲ್ಲೂ ಬೆಟ್ಟಗುಡ್ಡಗಳಿವೆ. ಇವುಗಳನ್ನು ಕಡಿದು ಸಮತಟ್ಟು ಮಾಡಲು ಹೆಚ್ಚು ಹಣ ಖರ್ಚಾಗುತ್ತೆ. ಜೊತೆಗೆ ಹತ್ತಿರದಲ್ಲೇ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಅರಣ್ಯ ಪ್ರದೇಶ ಇರೋದು ಅಡ್ಡಿಯಾಗುತ್ತೆ. ಜೊತೆಗೆ ಎಚ್‌ಎಎಲ್ ವಾಯು ಪ್ರದೇಶ ಕೂಡ ಇದೆ. ಇವೆಲ್ಲವೂ 2ನೇ ಏರ್ ಪೋರ್ಟ್ ನಿರ್ಮಾಣಕ್ಕೆ ಇರುವ ತೊಂದರೆಗಳು ಎಂದು ವರದಿ ನೀಡಿದೆ. ಈ ಸಮಸ್ಯೆಗಳನ್ನು ಪರಿಹರಿಸುವತ್ತ ರಾಜ್ಯ ಸರ್ಕಾರ ಗಮನ ಹರಿಸಿದೆ. ಆದರೇ, 2ನೇ ಏರ್ ಪೋರ್ಟ್ ನಿರ್ಮಾಣಕ್ಕೆ ಬಂಡವಾಳ ಹೂಡುವ ಹೂಡಿಕೆದಾರರು ಕೂಡ ಬೇಕು. 5 ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ 5 ಸಾವಿರ ಕೋಟಿ ರೂಪಾಯಿ ಬೇಕಾಗಬಹುದು. ಬಳಿಕ ಏರ್ ಪೋರ್ಟ್ ನಿರ್ಮಾಣಕ್ಕೂ ಹಣ ವೆಚ್ಚವಾಗುತ್ತೆ.
ರಾಜ್ಯ ಸರ್ಕಾರವು ನೆಲಮಂಗಲದ ಕುಣಿಗಲ್ ರಸ್ತೆಯ ಬಳಿಯೂ 2ನೇ ಏರ್ ಪೋರ್ಟ್ ನಿರ್ಮಾಣಕ್ಕೆ ಜಾಗ ಗುರುತಿಸಿತ್ತು. ಆದರೇ, ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ತವರು ಕನಕಪುರ ಕ್ಷೇತ್ರದತ್ತ 2ನೇ ಏರ್ ಪೋರ್ಟ್ ನಿರ್ಮಾಣಕ್ಕೆ ಒಲವು ತೋರಿದ್ದಾರೆ.
/filters:format(webp)/newsfirstlive-kannada/media/media_files/2025/11/19/banagalore-2nd-airport02-2025-11-19-12-36-24.jpg)
ಕನಕಪುರ ತಾಲ್ಲೂಕಿನ ಭೂಮಿ ಬೆಲೆ ಗಗನಕ್ಕೇರುವುದು ನಿಶ್ಚಿತ
ಹೀಗಾಗಿ ಕನಕಪುರ ರಸ್ತೆಯಲ್ಲೇ 2ನೇ ಏರ್ ಪೋರ್ಟ್ ನಿರ್ಮಾಣ ಮಾಡಬೇಕೆಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು ನಿಶ್ಚಿತವಾಗಿದೆ . ಇದರಿಂದ ಕನಕಪುರ ಕ್ಷೇತ್ರದ ಒಟ್ಟಾರೆ ಭೂಮಿಯ ಬೆಲೆ ಕೂಡ ಗಗನಕ್ಕೇರುತ್ತೆ. ಈ ಹಿಂದೆಯೇ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಕ್ಷೇತ್ರದ ಜನರ ಭೂಮಿ ಬೆಲೆ ಹೆಚ್ಚಳವಾಗುವಂತೆ ಮಾಡುತ್ತೇನೆ ಎಂದು ಬಹಿರಂಗ ವೇದಿಕೆಗಳಲ್ಲಿ ಭರವಸೆ ನೀಡಿದ್ದಾರೆ. ಮೊದಲ ಹೆಜ್ಜೆಯಾಗಿ ಜಿಲ್ಲೆಯ ಹೆಸರು ಅನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದ್ದಾರೆ. ಈಗ ಬೆಂಗಳೂರಿನ 2ನೇ ಏರ್ ಪೋರ್ಟ್ ಅನ್ನು ಕೂಡ ಕನಕಪುರ ರಸ್ತೆಯಲ್ಲೇ ನಿರ್ಮಾಣ ಮಾಡಿದರೇ, ಕನಕಪುರ ವಿಧಾನಸಭಾ ಕ್ಷೇತ್ರದ ಭೂಮಿಗಳ ಬೆಲೆ ಗಗನಕ್ಕೇರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಏರ್ ಪೋರ್ಟ್ ಸುತ್ತಮುತ್ತಲೇ ಖಾಸಗಿ ಕಂಪನಿಗಳು ತಮ್ಮ ಕಂಪನಿ, ಕೈಗಾರಿಕೆ ತೆರೆಯಲು ಆಸಕ್ತಿ ತೋರುತ್ತಾವೆ. ಹೀಗಾಗಿ ಕೆಐಎಡಿಬಿ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತೆ. ಆ ಭೂಮಿಗೆ ಕೋಟಿಗಟ್ಟಲೇ ಬೆಲೆಯನ್ನು ನೀಡಬೇಕಾಗುತ್ತೆ. ಈಗಾಗಲೇ ಹಾರೋಹಳ್ಳಿ, ಕನಕಪುರ ತಾಲ್ಲೂಕಿನಲ್ಲಿ ಎಕರೆ ಭೂಮಿಗೆ ಕೋಟಿಗಟ್ಟಲೇ ಬೆಲೆ ಇದೆ. ಅದು ಮತ್ತಷ್ಟು ಕೋಟಿ ಹೆಚ್ಚಾಗುತ್ತೆ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us