ಏರ್ ಪೋರ್ಟ್ ನಿಂದ ಸಿಟಿ ಪ್ರವೇಶಕ್ಕೆ ಹೆಬ್ಬಾಳ ಪ್ಲೈ ಓವರ್ ನಲ್ಲಿ ಮತ್ತೊಂದು ಲೂಪ್ ರಸ್ತೆ ನಿರ್ಮಾಣ: ಇಂದು ರಾತ್ರಿಯಿಂದಲೇ ವಾಹನ ಸಂಚಾರ

ಬೆಂಗಳೂರಿನ ಹೆಬ್ಬಾಳ ಪ್ಲೈ ಓವರ್ ನಲ್ಲಿ ಮತ್ತೊಂದು ಲೂಪ್ ರಸ್ತೆ ನಿರ್ಮಾಣ ಕಾಮಗಾರಿ ಮುಕ್ತಾಯವಾಗಿದೆ. ಬೆಂಗಳೂರು ಏರ್ ಪೋರ್ಟ್, ಯಲಹಂಕ ಕಡೆಯಿಂದ ಸಿಟಿ ಪ್ರವೇಶ ಮಾಡುವವರು ಹೊಸ ಲೂಪ್ ರಸ್ತೆಯ ಮೂಲಕ ಮೇಖ್ರಿ ಸರ್ಕಲ್ ನತ್ತ ಸಂಚರಿಸಬಹುದು. ಇದರಿಂದ ಟ್ರಾಫಿಕ್ ಜಾಮ್ ಕಡಿಮೆಯಾಗುವ ನಿರೀಕ್ಷೆ ಇದೆ.

author-image
Chandramohan
HEBBAL FLYOVER NEW LOOP ROAD OPEN TODAY

ಹೆಬ್ಬಾಳ ಪ್ಲೈ ಓವರ್ ನಲ್ಲಿ ಹೊಸ ಲೂಪ್ ರಸ್ತೆ ನಿರ್ಮಾಣ ಪೂರ್ಣ

Advertisment
  • ಹೆಬ್ಬಾಳ ಪ್ಲೈ ಓವರ್ ನಲ್ಲಿ ಹೊಸ ಲೂಪ್ ರಸ್ತೆ ನಿರ್ಮಾಣ ಪೂರ್ಣ
  • ಇಂದು ರಾತ್ರಿಯಿಂದಲೇ ವಾಹನಗಳ ಪ್ರಾಯೋಗಿಕ ಸಂಚಾರ ಆರಂಭ
  • ಏರ್ ಪೋರ್ಟ್ ಕಡೆಯಿಂದ ಸಿಟಿ ಪ್ರವೇಶಕ್ಕೆ ಹೊಸ ಲೂಪ್ ರಸ್ತೆಯಿಂದ ಅನುಕೂಲ


ಬೆಂಗಳೂರಿನಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ಸ್ಥಳವೆಂದರೇ, ಹೆಬ್ಬಾಳ ಪ್ಲೈ ಓವರ್. ಹೆಬ್ಬಾಳ ಪ್ಲೈ ಓವರ್ ಮೇಲಿನ ಟ್ರಾಫಿಕ್ ಜಾಮ್ ನಿವಾರಣೆಗಾಗಿ ಬಿಡಿಎ ಹೊಸ ಲೂಪ್ ರಸ್ತೆಗಳನ್ನು ನಿರ್ಮಿಸುತ್ತಿದೆ. ಒಂದೆರೆಡು ತಿಂಗಳುಗಳ ಹಿಂದೆ ನಾಗವಾರ ಕಡೆಯಿಂದ ಮೇಖ್ರಿ ಸರ್ಕಲ್ ಕಡೆಗೆ ಬರುವವರಿಗಾಗಿ ಪ್ರತೇಕವಾದ ಲೂಪ್ ರಸ್ತೆಯೊಂದನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿತ್ತು. ಖುದ್ದಾಗಿ ಸಿಎಂ ಸಿದ್ದರಾಮಯ್ಯ ಹೆಬ್ಬಾಳ ಪ್ಲೈ ಓವರ್‌ ನ ಹೊಸ ಲೂಪ್ ರಸ್ತೆಯನ್ನು ಉದ್ಘಾಟನೆ ಮಾಡಿದ್ದರು. 
ಈಗ ಮತ್ತೊಂದು ಲೂಪ್ ರಸ್ತೆಯನ್ನು ಏರ್ ಪೋರ್ಟ್ ಕಡೆಯಿಂದ ಮೇಖ್ರಿ ಸರ್ಕಲ್, ಬೆಂಗಳೂರು ಸಿಟಿ ಕಡೆಗೆ ಬರುವ ವಾಹನಗಳ ಸಂಚಾರಕ್ಕಾಗಿ ನಿರ್ಮಾಣ ಮಾಡಲಾಗುತ್ತಿತ್ತು. ಇಂದು ಹೊಸ ಲೂಪ್ ರಸ್ತೆ ನಿರ್ಮಾಣದ ಕಾಮಗಾರಿ ಮುಗಿದಿದೆ ಎಂಬ ಗುಡ್ ನ್ಯೂಸ್ ಅನ್ನು ಇಂದು ಸಂಜೆ ಬಿಡಿಎ ನೀಡಿದೆ. 
ಹೆಬ್ಬಾಳ‌ ಮೇಲ್ಸೇತುವೆಯ ಹೊಸ ಲೂಪ್ ಕಾಮಗಾರಿ ಮುಕ್ತಾಯವಾಗಿದ್ದು, ಇಂದು ರಾತ್ರಿಯಿಂದಲೇ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಇಂದು ಸಂಜೆ ಟ್ವೀಟ್ ಮೂಲಕ ನಾಗರಿಕರಿಗೆ ಮಾಹಿತಿ ನೀಡಿದೆ. 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗಿರುವ ಈ ಹೊಸ ಲೂಪ್ ಉತ್ತರ ಬೆಂಗಳೂರಿನಿಂದ ಹೆಬ್ಬಾಳ ಮೇಲ್ಸೇತುವೆಯ ಮೂಲಕ ನಗರ ಪ್ರವೇಶಿಸಲು ನೆರವಾಗಲಿದೆ. ಯಲಹಂಕ, ಜಕ್ಕೂರು, ಸಹಕಾರ ಕಡೆಯಿಂದ ಮೆಖ್ರಿ ಸರ್ಕಲ್ ವರೆಗೆ ತಡೆರಹಿತವಾಗಿ ಸಂಚರಿಸಬಹುದಾಗಿದೆ.
ಈ ಹೊಸ ಲೂಪ್ ರಸ್ತೆಯಿಂದ ಏರ್ ಪೋರ್ಟ್ ಕಡೆಯಿಂದ ಬೆಂಗಳೂರು ಸಿಟಿಗೆ ಪ್ರವೇಶಿಸುವವರು ಹೆಬ್ಬಾಳ ಪ್ಲೈ ಓವರ್ ಮೇಲೆ ಟ್ರಾಫಿಕ್ ಜಾಮ್ ಇಲ್ಲದೇ ಸುಸಲಲಿತವಾಗಿ ಬರಬಹುದು. 

HEBBAL FLYOVER NEW LOOP ROAD OPEN TODAY (1)




ಈಗ ಏಕಕಾಲಕ್ಕೆ ನಾಗವಾರ, ಕೆ.ಆರ್. ಪುರಂ ಕಡೆಯಿಂದ ಬರುವ ವಾಹನಗಳಿಗೆ ಪ್ರತೇಕವಾದ ಲೂಪ್ ರಸ್ತೆಯೂ ಇದೆ. ಏರ್ ಪೋರ್ಟ್ ನಿಂದ ಮೇಖ್ರಿ ಸರ್ಕಲ್ ಕಡೆಗೆ ಬರುವ ವಾಹನಗಳಿಗೂ ಪ್ರತೇಕ ಹೊಸ ಲೂಪ್ ರಸ್ತೆಯನ್ನು ನಿರ್ಮಿಸಿದಂತೆ ಆಗಿದೆ. 
ಈಗಾಗಲೇ ಬೆಂಗಳೂರಿನಿಂದ ಮೇಖ್ರಿ ಸರ್ಕಲ್ ನಿಂದ ಹೆಬ್ಬಾಳ ಪ್ಲೈ ಓವರ್ ಮೂಲಕ ಏರ್ ಪೋರ್ಟ್ ಕಡೆಗೆ ಹೋಗಲು ಹೆಚ್ಚಿನ ಟ್ರಾಫಿಕ್ ಜಾಮ್ ಆಗುತ್ತಿರಲಿಲ್ಲ. ಏನಿದ್ದರೂ, ಏರ್ ಪೋರ್ಟ್ , ಯಲಹಂಕ ಕಡೆಯಿಂದ ಸಿಟಿಗೆ ಬರುವ ವಾಹನಗಳೇ ಪ್ಲೈ ಓವರ್ ಮೇಲೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕುತ್ತಿದ್ದವು. ಈಗ ಈ ಸಮಸ್ಯೆ ಪರಿಹಾರಕ್ಕೆ ಎರಡು ಮೂರು ತಿಂಗಳುಗಳಲ್ಲೇ ಎರಡೆೆರಡು ಲೂಪ್ ರಸ್ತೆಗಳನ್ನು ನಿರ್ಮಿಸಿ ಬಿಡಿಎ ಜನರಿಗೆ ಅರ್ಪಿಸಿದೆ.  ನಾಳೆಯಿಂದ ಹೆಬ್ಬಾಳ ಪ್ಲೈ ಓವರ್ ಟ್ರಾಫಿಕ್ ಜಾಮ್ ಸಮಸ್ಯೆ ಪರಿಹಾರವಾಗುತ್ತೆ ಇಲ್ಲವೋ ಅನ್ನೋದನ್ನು ನೋಡೋಣ.  




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

HEBBALA FLYOVER NEW LOOP ROAD CONSTRUCTION is over
Advertisment