/newsfirstlive-kannada/media/media_files/2025/11/04/darshan-and-pavitra-gowda-1-2025-11-04-18-23-54.jpg)
ನಟ ದರ್ಶನ್ ರಿಂದ ವಶಕ್ಕೆ ಪಡೆದಿದ್ದ ಹಣ ಐಟಿ ಇಲಾಖೆಗೆ ನೀಡಲು ಕೋರ್ಟ್ ಆದೇಶ
ಬೆಂಗಳೂರಿನಲ್ಲಿ ನಡೆದಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು ( ಡಿಸೆಂಬರ್ 3, 2025) ಬೆಂಗಳೂರಿನ 64 ನೇ ಸಿಸಿಎಚ್ ಕೋರ್ಟ್ ನಲ್ಲಿ ಆರಂಭವಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಆರೋಪಿ ನಂಬರ್ 2 ಆಗಿದ್ದಾರೆ. ಹೀಗಾಗಿ ಇಂದು ನಟ ದರ್ಶನ್ ಹಾಗೂ ಎ1 ಆರೋಪಿ ಪವಿತ್ರಾಗೌಡ ಸೇರಿದಂತೆ 7 ಮಂದಿ ಆರೋಪಿಗಳು ಜೈಲಿನಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು. ಇನ್ನೂಳಿದ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದು, ನೇರವಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದಾರೆ.
ವಿಡಿಯೋ ಕಾನ್ಪರೆನ್ಸ್ ವಿಚಾರಣೆ ವೇಳೆ ಪವಿತ್ರಾಗೌಡ ಕೈ ಕಟ್ಟಿಕೊಂಡು ನಿಂತಿದ್ದರು. ಆದರೇ, ಆರೋಪಿಗಳಾದ ನಿಖಿಲ್ ನಾಯ್ಕ್ , ರಾಘವೇಂದ್ರ , ಕೇಶವಮೂರ್ತಿ, ಕಾರ್ತೀಕ್ ಗೈರು ಹಾಜರಾಗಿದ್ದರು.
ಇನ್ನೂ ಆರೋಪಿ ಅನುಕುಮಾರ್, ನಮ್ಮ ತಾಯಿ ಆರೋಗ್ಯ ಸರಿಯಿಲ್ಲ. ಹೀಗಾಗಿ ನನ್ನನ್ನು ಚಿತ್ರದುರ್ಗ ಜೈಲಿಗೆ ವರ್ಗಾವಣೆ ಮಾಡಿ ಎಂದು ಮನವಿ ಮಾಡಿಕೊಂಡರು. ನಿಮ್ಮ ಅರ್ಜಿ ಇನ್ನೂ ವಿಚಾರಣೆ ಹಂತದಲ್ಲಿದೆ ಎಂದು ಜಡ್ಜ್ ಹೇಳಿದ್ದರು.
ಇನ್ನೂ ಎಸ್‌ಪಿಸಿ ಸಚಿನ್ ಅವರು, ಈ ಕೊಲೆ ಕೇಸ್ ನ ಸಾಕ್ಷಿಗಳಿಗೆ ನೋಟೀಸ್ ನೀಡಿ ವಿಚಾರಣೆಗೆ ಕರೆಸುವಂತೆ ಕೋರ್ಟ್ ಗೆ ಮನವಿ ಮಾಡಿಕೊಂಡರು.
ಯಾವ ಸಾಕ್ಷಿಗಳಿಗೆ ನೋಟೀಸ್ ನೀಡಿ ವಿಚಾರಣೆ ಕರೆಸಲಾಗುತ್ತೆ ಎಂಬುದನ್ನು ನಮಗೂ ತಿಳಿಸಿ, ಸಾಕ್ಷಿಗಳ ಪಟ್ಟಿಯನ್ನು ನೀಡುವಂತೆ ನಟ ದರ್ಶನ್ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಮೊದಲು ಕೊಲೆ ಕೇಸ್ ನ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸಬೇಕು. ಸಾಕ್ಷಿ ಸಂಖ್ಯೆ 7 ಮತ್ತು 8 ಕ್ಕೆ ಸಮನ್ಸ್ ನೀಡುವಂತೆ ಕೋರ್ಟ್ ಗೆ ಎಸ್‌ಪಿಪಿ ಸಚಿನ್ ಮನವಿ ಮಾಡಿಕೊಂಡರು.
/filters:format(webp)/newsfirstlive-kannada/media/media_files/2025/10/24/bangalore-city-civil-court-2025-10-24-15-45-48.jpg)
ಇದೇ ವೇಳೆ ಆರೋಪಿಗಳಿಗೆ ಏನಾದರೂ ಸಮಸ್ಯೆ ಇದೆಯಾ ಎಂದು ಕೋರ್ಟ್ ಜಡ್ಜ್ ಕೇಳಿದ್ದರು. ಆಗ ಆರೋಪಿ ಜಗದೀಶ್ ನಾನು ಬೆಂಗಳೂರು ಜೈಲಿನಿಂದ ಚಿತ್ರದುರ್ಗ ಜೈಲಿಗೆ ವರ್ಗಾವಣೆ ಕೇಳಿದ್ದೆ ಸ್ವಾಮಿ ಎಂದು ಹೇಳಿದ್ದರು. ನಿಮ್ಮ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಕೋರ್ಟ್ ಜಡ್ಜ್ ತಮ್ಮ ಆದೇಶ ತಿಳಿಸಿದ್ದರು. ಚಿತ್ರದುರ್ಗ ಜೈಲಿಗೆ ವರ್ಗಾವಣೆ ಕೋರಿದ್ದ ಆರೋಪಿ ಜಗದೀಶ್ ಅರ್ಜಿ ವಜಾ ಆಗಿದೆ.
ಇನ್ನೂ ಈ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಹಣವನ್ನ ಆದಾಯ ತೆರಿಗೆ ಇಲಾಖೆಗೆ ನೀಡುವಂತೆ ಕೋರ್ಟ್ ಆದೇಶ ನೀಡಿದೆ. ನಟ ದರ್ಶನ್ ನಿಂದ ಪೊಲೀಸರು 82 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದರು. ಈ ಹಣವನ್ನು ತಮ್ಮ ವಶಕ್ಕೆ ನೀಡುವಂತೆ ಐ.ಟಿ. ಇಲಾಖೆ ಮನವಿ ಮಾಡಿತ್ತು. ಐ.ಟಿ. ಇಲಾಖೆಯ ಅರ್ಜಿಯನ್ನು ಸೆಷನ್ಸ್ ಕೋರ್ಟ್ ಪುರಸ್ಕರಿಸಿದೆ. ಇದರಿಂದಾಗಿ 82 ಲಕ್ಷ ರೂಪಾಯಿ ಹಣ ಆದಾಯ ತೆರಿಗೆ ಇಲಾಖೆ ವಶಕ್ಕೆ ನೀಡಲಾಗುತ್ತೆ.
ಇನ್ನೂ ಸೆಷನ್ಸ್ ಕೋರ್ಟ್ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆಯನ್ನು ಇಂದು ಮಧ್ಯಾಹ್ನಕ್ಕೆ ಮುಂದೂಡಿದೆ.
/filters:format(webp)/newsfirstlive-kannada/media/media_files/2025/12/03/it-dept-and-session-court-2025-12-03-12-16-04.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us