/newsfirstlive-kannada/media/media_files/2025/10/06/actor-darshan-in-jail-2025-10-06-16-30-23.jpg)
ನಟ ದರ್ಶನ್ ಇರುವ ಜೈಲು ಬ್ಯಾರಕ್‌ಗೆ ಟಿ.ವಿ. ನೀಡಲು ಕೋರ್ಟ್ ಆದೇಶ
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಸಂಗಡಿಗರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್ ನಲ್ಲಿ ಟಿ.ವಿ ನೀಡಲು ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಜೈಲಿನಲ್ಲಿ ತಲೆ ಕೆಡುತ್ತಿದೆ. ಇರಲು ಆಗುತ್ತಿಲ್ಲ. ದಯವಿಟ್ಟು ಟಿ.ವಿ ಕೊಡಿಸಿ ಎಂದು ಆರೋಪಿಗಳಲ್ಲಿ ಒಬ್ಬನಾದ ನಾಗರಾಜ್ ಇಂದು ವಿಡಿಯೋ ಕಾನ್ಪರೆನ್ಸ್ ವಿಚಾರಣೆ ವೇಳೆ ಕೋರ್ಟ್ ಜಡ್ಜ್ ಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಕೋರ್ಟ್ ಜಡ್ಜ್, ಆರೋಪಿ ದರ್ಶನ್ ಇರುವ ಬ್ಯಾರಕ್‌ಗೆ ಟಿ.ವಿ ನೀಡುವಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಇಂದು ಮಧ್ಯಾಹ್ನ 64 ನೇ ಸೆಷನ್ಸ್ ಕೋರ್ಟ್ ನಲ್ಲಿ ಕೊಲೆ ಕೇಸ್ ನ ಬಗ್ಗೆ ವಿಚಾರಣೆ ಮುಂದುವರಿಯಿತು. ಈ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು, ಪ್ರತ್ಯಕ್ಷ ಸಾಕ್ಷಿಗಳು, ಎಫ್.ಎಸ್.ಎಲ್. ರಿಪೋರ್ಟ್ ಗಳು, ತಾಂತ್ರಿಕ ಸಾಕ್ಷ್ಯಗಳು, ಸಾಕ್ಷಿಗಳ ಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಸಿದ್ದರು. ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ವಿಚಾರಣೆಗೆ ಕರೆಯಲು ಸಮನ್ಸ್ ನೀಡಬೇಕೆಂದು ಕೋರ್ಟ್ ಗೆ ಪ್ರಾಸಿಕ್ಯೂಷನ್ ಪರ ವಕೀಲ ಎಸ್‌ಪಿಸಿ ಸಚಿನ್ ಮನವಿ ಮಾಡಿಕೊಂಡರು.
ಈ ವಿಡಿಯೋ ಕಾನ್ಪರೆನ್ಸ್ ವಿಚಾರಣೆ ವೇಳೆ ನಟ ದರ್ಶನ್ ಜೈಲಿನಿಂದಲೇ ಕೈಕಟ್ಟಿ ನಿಂತಿದ್ದರು. ಸಪ್ಪೆ ಮುಖ ಮಾಡಿಕೊಂಡಿದ್ದ ನಟ ದರ್ಶನ್, ವಕೀಲರ ವಾದವನ್ನು ಕೇಳುತ್ತಿದ್ದರು.
/filters:format(webp)/newsfirstlive-kannada/media/media_files/2025/10/24/bangalore-city-civil-court-2025-10-24-15-45-48.jpg)
ಪ್ರಾಸಿಕ್ಯೂಷನ್ ಪರ ವಕೀಲ ಎಸ್‌ಪಿಪಿ ಸಚಿನ್ ಮನವಿ ಮೇರೆಗೆ ಕೋರ್ಟ್ ಸಾಕ್ಷಿ ನಂಬರ್ 7 ಮತ್ತು 8 ಕ್ಕೆ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿ ಮಾಡಿತ್ತು. ಸಾಕ್ಷಿ ನಂಬರ್ 7 ಮತ್ತು 8 ಅಂದರೇ, ಹತ್ಯೆಯಾದ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಹಾಗೂ ತಾಯಿ. ಇಬ್ಬರಿಗೂ ವಿಚಾರಣೆಗೆ ಹಾಜರಾಗಲು ಕೋರ್ಟ್ ಸಮನ್ಸ್ ನೀಡಿದೆ. ರೇಣುಕಾಸ್ವಾಮಿ ತಂದೆ, ತಾಯಿಯನ್ನೇ ಮೊದಲಿಗರಾಗಿ ಸಾಕ್ಷಿ ಹೇಳಲು ಕೋರ್ಟ್ ಕರೆಯಲಾಗುತ್ತಿದೆ. ರೇಣುಕಾಸ್ವಾಮಿ ತಂದೆ ಕಾಶೀನಾಥ್ ಹಾಗೂ ತಾಯಿ ಈಗಾಗಲೇ ಮಗನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಈಗ ತಮ್ಮ ಮಗನನ್ನು ಕೊಂದವರಿಗೆ ತಕ್ಕ ಪಾಠ ಕಲಿಸಲು ಕಠಿಣ ಶಿಕ್ಷೆ ನೀಡುವಂತೆ ಕೋರ್ಟ್ ಜಡ್ಜ್ ಅವರನ್ನು ಮನವಿ ಮಾಡಿಕೊಳ್ಳಬಹುದು. ಕೇಸ್ ಗೆ ಸಂಬಂಧಿಸಿದಂತೆ ಸಾಕ್ಷಿಯನ್ನು ನುಡಿಯಲು ಅವಕಾಶ ನೀಡಲಾಗುತ್ತಿದೆ.
ಸಾಕ್ಷಿ ನಂಬರ್ 7 ಮತ್ತು 8 ಕ್ಕೆ ಸಮನ್ಸ್ ನೀಡಿದ್ದಕ್ಕೆ ನಟ ದರ್ಶನ್ ಪರ ವಕೀಲರು ಆಕ್ಷೇಪಿಸಿದ್ದರು. ಪಟ್ಟಿಯ ಪ್ರಕಾರವೇ ಸಾಕ್ಷಿಗಳನ್ನ ವಿಚಾರಣೆಗೆ ಕರೆಯಬೇಕು ಎಂದು ವಾದಿಸಿದ್ದರು.
ಆರೋಪಿಗಳಾದ ಅನುಕುಮಾರ್ ಹಾಗೂ ಜಗದೀಶ್ ಮತ್ತೆ ತಮ್ಮನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಚಿತ್ರದುರ್ಗಕ್ಕೆ ಶಿಫ್ಟ್ ಮಾಡಲು ಮನವಿ ಮಾಡಿಕೊಂಡರು. ನಿಮ್ಮ ಅರ್ಜಿ ವಜಾ ಆಗಿದೆ ಎಂದು ಕೋರ್ಟ್ ಜಡ್ಜ್ ಆರೋಪಿಗಳಿಗೆ ತಿಳಿಸಿದ್ದರು.
ಇಂದು ಎಲ್ಲ 272 ಸಾಕ್ಷಿಗಳ ಪಟ್ಟಿಯನ್ನು ಪ್ರಾಸಿಕ್ಯೂಷನ್ ಪರ ವಕೀಲ ಎಸ್‌ಪಿಪಿ ಸಚಿನ್ ಕೋರ್ಟ್ ಗೆ ನೀಡಿದ್ದರು. ಇನ್ನೂ ಮುಂದೆ ಕೋರ್ಟ್, ಎಲ್ಲ ಸಾಕ್ಷಿಗಳಿಗೂ ಸಮನ್ಸ್ ಜಾರಿ ಮಾಡಿ, ಹೇಳಿಕೆಯನ್ನು ದಾಖಲಿಸಿಕೊಳ್ಳಲಿದೆ. ಇನ್ನೂ ಕೋರ್ಟ್ ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ಮುಂದೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us