/newsfirstlive-kannada/media/media_files/2026/02/12/hm-janardhan-lokayukuta-raid-2026-02-12-19-28-49.jpg)
ಕಳೆದ ವಾರ ಲೋಕಾಯುಕ್ತ ಕರ್ನಾಟಕದಲ್ಲಿ ನಾಲ್ವರು ಸರ್ಕಾರಿ ಅಧಿಕಾರಿಗಳು ಆದಾಯ ಮೀರಿದ ಆಸ್ತಿ ಗಳಿಸಿದ್ದಾರೆಂಬ ದೂರಿನ ಮೇಲೆ ಅವರ ಆಸ್ತಿಪಾಸ್ತಿ, ಕಚೇರಿ, ಮನೆಗಳ ಮೇಲೆ ದಾಳಿ ನಡೆಸಿತ್ತು. ನಾಲ್ವರು ಅಧಿಕಾರಿಗಳ ಪೈಕಿ ಕರ್ನಾಟಕ ರೆಸಿಡೆನ್ಷಿಯಲ್ ಎಜುಕೇಷನಲ್ ಇನ್ಸಿಟಿಟ್ಯೂಟ್ ಸೊಸೈಟಿಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿರುವ ಎಚ್.ಎಂ.ಜನಾರ್ಧನ ಪ್ರಮುಖ. ಈತನ ಮನೆ, ಕಚೇರಿ, ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳೇ ಈತನ ಬ್ರಹ್ಮಾಂಡ ಭ್ರಷ್ಟಾಚಾರ ಕಂಡು ದಂಗಾಗಿದ್ದಾರೆ.
- ಲೋಕಾಯುಕ್ತ ದಾಳಿ ಬಳಿಕ ಹೆಚ್​​.ಎಂ. ಜನಾರ್ಧನನ ಮತ್ತಷ್ಟು ಅಕ್ರಮಗಳು ಬೆಳಕಿಗೆ..!
- ಹೋದಲ್ಲೆಲ್ಲಾ ಸಾಲು ಸಾಲು ಅಕ್ರಮಗಳನ್ನು ನಡೆಸಿರುವ ಜನಾರ್ಧನ..!
- AE (asistant Engineer) ಯಿಂದ SE (Superintendent) ವರೆಗೆ ಈತ ನಡೆಸಿರೊ ಅಕ್ರಮಗಳು ಲೆಕ್ಕಕ್ಕಿಲ್ಲ
- ಹೋದಲ್ಲೆಲ್ಲಾ ಅಕ್ರಮ, ಭ್ರಷ್ಟಾಚಾರ, ಲೂಟಿ ಮಾಡೋದೆ ಈತನ ಕಾಯಕ
- ಈತನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾದ ಸಚಿವರು ಸೈಲೆಂಟ್​
- ದೊಡ್ಡವರ ಕೃಪಕಟಾಕ್ಷದಿಂದ ಉನ್ನತ ಹುದ್ದೆಗಳನ್ನು ಅಲಂಕರಿಸಿ ಭ್ರಷ್ಟಾಚಾರದಲ್ಲಿ ಭಾಗಿ
- ಸದ್ಯ ಕರ್ನಾಟಕ ರೆಸಿಡೆನ್ಷಿಯಲ್ ಎಜುಕೇಶನ್ ಇನ್ಸ್ಟಿಟ್ಯೂಟ್ ಸೊಸೈಟಿಯ (KREIS) ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿರುವ ಜನಾರ್ಧನ
- ಜನಾರ್ಧನನ ಅಸಲಿಯತ್ತನ್ನು ಬಯಲು ಮಾಡ್ತಿದೆ ನ್ಯೂಸ್​ಫಸ್ಟ್​
- ಈತನ ಅಕ್ರಮಗಳ ಬಗ್ಗೆ ವರದಿ ಪ್ರಸಾರ ಮಾಡ್ತಿದ್ದಂತೆ ಈತನ ವಿರುದ್ಧ ಸಾಲು ಸಾಲು ಕರೆಗಳು
- ಜನಾರ್ಧನ ನಡೆಸಿರೊ ಭ್ರಷ್ಟಾಚಾರ, ಅಕ್ರಮಗಳನ್ನು ಬಿಚ್ಚಿಡ್ತಿದ್ದಾರೆ ನೊಂದವರು
- ಇಷ್ಟಾದ್ರು ಈತನ ವಿರುದ್ಧ ಕ್ರಮ ಯಾಕಿಲ್ಲ..? ಸಚಿವರೇ ಉತ್ತರಿಸಿ..!
- ಲೋಕಾಯುಕ್ತ ದಾಳಿ ವೇಳೆ ಆದಾಯ ಮೀರಿದ ಆಸ್ತಿ ಗಳಿಕೆ ಪತ್ತೆ
- ಕೋಟ್ಯಾಂತರ ರೂಪಾಯಿ ಅಕ್ರಮ ಆಸ್ತಿ ಗಳಿಸಿರೋದು ಪತ್ತೆ
-------------------------------
ಹೆಚ್​​.ಎಂ ಜನಾರ್ಧನನ ನೇಮಕಾತಿಯೇ ಅಕ್ರಮ..!
- ಜನಾರ್ಧನನ ಸರ್ಕಾರಿ ಹುದ್ದೆಯೇ ಅನರ್ಹ..!
- ಸರ್ಕಾರಿ ಇಲಾಖೆಯಲ್ಲಿ ಆರಂಭದಿಂದಲೇ ಜನಾರ್ಧನನ ಅಕ್ರಮಗಳು ಬೆಳಕಿಗೆ
- ಆರಂಭದಲ್ಲಿ ಕರ್ನಾಟಕ ಭೂಸೇನಾ ನಿಗಮ ನಿಯಮಿತದಲ್ಲಿ ನೇಮಕ
- ಕಾರ್ಯದಳಪತಿ ಗ್ರೇಡ್​​-1 ಹುದೆಯಲ್ಲಿ ನೇಮಕ
- ಬಳಿಕ ಇಲಾಖಾ ಪರೀಕ್ಷೆ ಬರೆದು ಜಲಸಂಪನ್ಮೂಲ ಇಲಾಖೆಗೆ AE ಆಗಿ ಆಯ್ಕೆ
- ಜೂನ್ 5,​​​ 2003ರಂದು ಜಲಸಂಪನ್ಮೂಲ ಇಲಾಖೆಗೆ ಸಹಾಯಕ ಇಂಜಿನಿಯರ್​ ಆಗಿ ನೇಮಕ
- ಆದ್ರೆ ಈತ ಹಿಂದೆ ಕಾರ್ಯ ನಿರ್ವಹಿಸ್ತಿದ್ದ ಇಲಾಖೆಗೆ ರಾಜಿನಾಮೆ ನೀಡಿರೋದು ಏಪ್ರಿಲ್​​ 29, 2004ರಲ್ಲಿ
- ಅದ್ಹೇಗೆ ಎರಡೆರಡು ಸರ್ಕಾರಿ ಹುದ್ದೆಯಲ್ಲಿ ಈತ ಮುಂದುವರೆದಿದ್ದ
- ಹಲವು ತಿಂಗಳುಗಳ ಕಾಲ ಎರಡೆರಡು ಸರ್ಕಾರಿ ಹುದ್ದೆಗಳಲ್ಲಿ ಮುಂದುವರೆದಿರುವ ಜನಾರ್ಧನ
- ಕರ್ನಾಟಕ ಭೂಸೇನಾ ನಿಗಮ ನಿಯಮಿತಕ್ಕೆ ರಾಜೀನಾಮೆ ನೀಡದೆಯೇ PWD ಇಲಾಖೆಯಲ್ಲಿ ಸೇವೆ
- ಈ ಬಗ್ಗೆ ಸೂಕ್ತ ತನಿಖೆ ನಡೆದ್ರೆ ಈತನ ಹುದ್ದೆಯೇ ಅನರ್ಹವಾಗುವ ಸಾಧ್ಯತೆ
----------------------------
124 ಮಂದಿ ಇಂಜಿನಿಯರ್​​ಗಳಿಗೆ ಹಿಂಬಡ್ತಿ ನೀಡಿ ಕಿರುಕುಳ..!
- ಅರ್ಹತೆ ಆಧಾರದ ಮೇಲೆ ಆಯ್ಕೆಯಾದ ಇಂಜಿನಿರ್​ಗಳಿಗೆ ಕಿರುಕುಳ..!
- ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿರುವ ಹೆಚ್​.ಎಂ ಜನಾರ್ಧನ
- 124 ಮಂದಿ ಇಂಜಿನಿಯರ್​ಗಳಿಗೆ ಡಿ-ಪ್ರಮೋಟ್​​​ ಮಾಡಿ ಕಿರುಕುಳ
- 2003 -2004 ಅಂದಿನ ಸರ್ಕಾರವು ಸುಮಾರು 800 ಜನ ಸಹಾಯಕ ಇಂಜಿನಿಯರ್ ಹಾಗೂ ಜೂನಿಯರ್ ಇಂಜಿನಿಯರ್​​ಗಳ ನೇಮಕ
- ವಯೋಮಿತಿ ಆಧಾರದ ಮೇಲೆ ಮೂರು ಶ್ರೇಣಿಗಳಲ್ಲಿ ನೇಮಕ
- 35 ರಿಂದ 40, 29ರಿಂದ 35 ಹಾಗೂ 18 ರಿಂದ 29 ವಯೋಮಿತಿಯಲ್ಲಿ ಮೂರು ಶ್ರೇಣಿಗಳಲ್ಲಿ ನೇಮಕ
- ಗುತ್ತಿಗೆ ಆಧಾರದಲ್ಲಿ 800 ಮಂದಿ ಸಹಾಯಕ ಇಂಜಿನಿಯರ್​ಗಳ ನೇಮಕ
- ನಂತರ 2005ರಲ್ಲಿ ಅಂದಿನ ಸರ್ಕಾರ ಇವರ ಸೇವೆಯನ್ನು ಕಾಯಂ ಮಾಡಿತು
- ಇದನ್ನು ಪ್ರಶ್ನಿಸಿ ಮೂರು ಶ್ರೇಣಿಯ ವಯೋಮಿತಿ ಆಧಾರದಲ್ಲಿ ನೇಮಕ ಮಾಡಬಾರದೆಂದು ಸುಪ್ರೀಂಕೋರ್ಟಿಯಲ್ಲಿ ಮನವಿ
- ಈ ಮನವಿಯನ್ನು ಪುರಸ್ಕರಿಸಿ ಸುಪ್ರೀಂ ಕೋರ್ಟ್2015 ರಲ್ಲಿ ಆದೇಶ ಹೊರಡಿಸಿತು
- ಎರಡು ಶ್ರೇಣಿಯ ವಯೋಮಿತಿ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ಆದೇಶ
- 18 ರಿಂದ 29 ಹಾಗೂ 29 ರಿಂದ 40 ವರ್ಷದೊಳಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರಕ್ಕೆ ಸೂಚನೆ
- ಅದರಂತೆ ಕರ್ನಾಟಕ ಲೋಕಸೇವಾ ಆಯೋಗದಿಂದ 2015ರಲ್ಲಿ ಅಧಿಸೂಚನೆ ಹೊರಡಿಸಲಾಯಿತು
- ಸದ್ಯ ಕಾರ್ಯನಿರ್ವಹಿಸುತ್ತಿದ್ದ 124 ಸಹಾಯಕ ಇಂಜಿನಿಯರಿಗಳಿಗೆ 2014ರಲ್ಲಿ ಮುಂಬಡ್ತಿ ನೀಡಿ ಸಹಾಯಕ ಕಾರ್ಯ ಪಾಲಕ ಇಂಜಿನಿಯರಾಗಿ ಆದೇಶ ಹೊರಡಿಸಿದ್ದ ಸರ್ಕಾರ
- ಅದರಂತೆ ಸುಪ್ರೀಂಕೋರ್ಟ್ ಆದೇಶವನ್ನು 2017ರ ಜುಲೈನಲ್ಲಿ ಪಾಲಿಸಿದ್ದ ಸರ್ಕಾರ
- ಆಗ 124 ಸಹಾಯಕ ಕಾರ್ಯಪಾಲಕ ಅಭಿಯಂತರಾಗಿ ಕಾರ್ಯನಿರ್ವಹಿಸುತ್ತಿದ್ದ ಇಂಜಿನಿಯರ್ ಗಳು ವಿನಾಕಾರಣ ಟಾರ್ಗೆಟ್​
- ಕೋರ್ಟ್​ ಆದೇಶಕ್ಕೆ ವ್ಯತಿರಿಕ್ತವಾಗಿ 124 ಮಂದಿಗೆ ಹಿಂಬಡ್ತಿ ನೀಡಿ ಆದೇಶ
- 124 ಮಂದಿಗೆ ಹಿಂಬಡ್ತಿ ನೀಡುವಲ್ಲಿ ಹೆಚ್​​.ಎಂ ಜನಾರ್ಧನನ ಕೈವಾಡ
- ಹಿಂಬಡ್ತಿ ನೀಡಿದಾಗ PWD ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಜನಾರ್ಧನ
- ಸಚಿವರಿಗೆ ತಪ್ಪು ಮಾಹಿತಿ ನೀಡಿ ಹಿಂಬಡ್ತಿ ಕೊಡಿಸಿರುವ ಆರೋಪ ಜನಾರ್ಧನ ಮೇಲಿದೆ.
- ಅರ್ಹತೆ ಇದ್ದರೂ ಕೂಡ ಸುಪ್ರೀಂ ಕೋರ್ಟ್ ನ ಆದೇಶದಲ್ಲಿ ಯಾವುದೇ ತರಹದ ಹಿಂಬಡ್ತಿ ಬಗ್ಗೆ ಆದೇಶ ಇಲ್ಲದಿದ್ದರೂ ವ್ಯತಿರಿಕ್ತ ಕ್ರಮ
- ಆಗ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಮಹದೇವಪ್ಪ ರವರಿಗೆ ಓ ಎಸ್ ಡಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಜನಾರ್ಧನ್
- ಬೇಕಂತಲೇ ದಲಿತ ಇಂಜಿನಿಯರ್ ಗಳನ್ನು ತುಳಿಯುವ ಉದ್ದೇಶದಿಂದ 124 ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ಹಿಂಬಡ್ತಿ ನೀಡಿರುವ ಆರೋಪ
- 2019 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರ ರಚಿಸಿದ ನಂತರ ಎಚ್ ಎಮ್ ಜನಾರ್ಧನ್ ವಿರುದ್ಧ ತನಿಖೆಗೆ ಆದೇಶ
- ದೊಡ್ಡವರು ಬೆಂಬಲದಿಂದ ತನಿಖೆ ನಡೆಯದಂತೆ ಪ್ರಭಾವ ಬಳಸಿ ಎಸ್ಕೇಪ್​ ಆಗಿದ್ದ ಜನಾರ್ಧನ
- ಈತನ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಕೂಡ ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿರುವ ಮಹದೇವಪ್ಪ ಸುಮ್ಮನೆ ಕುಳಿತಿದ್ದಾರೆ
- 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹದೇವಪ್ಪ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾರೆ
- ಸಚಿವರಾದ ಬಳಿಕ ಎಚ್ಎಂ ಜನಾರ್ದನ್ ಅಧೀಕ್ಷಕ ಅಭಿಯಂತರಾಗಿ KRIES ಗೆ ನೇಮಕ
- ಕ್ರೈಸ್​ನಲ್ಲಿ ಎಚ್ಎಂ ಜನಾರ್ದನ್ ಟೆಂಡರ್ ಗಳನ್ನು ತಮಗೆ ಬೇಕಾದವರಿಗೆ ಕೊಡಿಸಿ ಅಕ್ರಮ
- ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೋರಿ ಬಹುದೊಡ್ಡ ಭ್ರಷ್ಟಾಚಾರದಲ್ಲಿ ಭಾಗಿ
- ಹೆಚ್.ಎಮ್ ಜನಾರ್ಧನ್ ಸರ್ಕಾರಿ ಸೇವೆಗೆ ನೇಮಕಗೊಂಡಿರುವ ಬಗ್ಗೆ ಸೂಕ್ತ ತನಿಕೆ ನಡೆದರೇ ನೇಮಕಾತಿಯೇ ರದ್ದುಗೊಳ್ಳಲಿದೆ
- ಇಂತಹ ಭ್ರಷ್ಟ ಅಧಿಕಾರಿಗೆ ಬೆನ್ನೆಲುಬಾಗಿ ನಿಂತಿರುವ ಸಚಿವ ಹೆಚ್​​.ಸಿ. ಮಹದೇವಪ್ಪ
-----------------------
ಜನಾರ್ಧನ್​​ ಮೇಲಿರುವ ಆರೋಪಗಳೇನು..?
- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಟ್ಟಡಗಳ ನಿರ್ಮಾಣಕ್ಕೆ ನಿಯಮ ಬಾಹಿರ ಟೆಂಡರ್​​
- ಕಾನೂನುಬಾಹಿರ ಟೆಂಡರ್​​ ಕರೆದು ನೂರಾರು ಕೋಟಿ ಅಕ್ರಮ ನಡೆಸಿರುವ ಮಾಹಿತಿ
- 500 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆಸಿರುವ ಬಗ್ಗೆ ಸೂಪರಿಂಟೆಂಡೆಂಟ್ ಇಂಜಿನಿಯರ್ ಜನಾರ್ಧನ್​​ ವಿರುದ್ಧ ದೂರು ದಾಖಲು
- ಕ್ರೈಸ್​ ಕಚೇರಿಯ ತಾಂತ್ರಿಕ ವಿಭಾಗದಲ್ಲಿ ನಡೆದಿರುವ ಗೋಲ್ಮಾನ್​​ ರೂವಾರಿ ಈ ಜನಾರ್ಧನ್​​
- ರಾತ್ರೋರಾತ್ರಿ 18 ಟೆಂಡರ್​​ಗಳನ್ನು ಫೈನಲ್​​ ಮಾಡಿ ಕಿಕ್​​ ಬ್ಯಾಕ್​ ಪಡೆದಿರುವ ಆರೋಪ
- ನಿಯಮಗಳನ್ನು ಗಾಳಿಗೆ ತೂರಿ ಆಯ್ದ ಗುತ್ತಿಗೆದಾರರಿಗೆ ಟೆಂಡರ್​​ ಹಂಚಿಕೆ
- ಟೆಂಡರ್​ ಹಂಚಿಕೆ ಮಾಡಿ 18% ಕಮಿಷನ್​​ ವಸೂಲಿ ಮಾಡಿರುವ ಆರೋಪ
- ಅರ್ಹ ಗುತ್ತಿಗೆದಾರರನ್ನು ಕಡೆಗಣಿಸಿ ಅನರ್ಹರಿಗೆ ಗುತ್ತಿಗೆ ನೀಡಿರುವ ಆರೋಪ
- ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೂ ತರದೆ ವಸೂಲಿ ಮಾಡಿದ್ದ ಎಂಬ ಆರೋಪ
- ಅರ್ಹತೆಯೇ ಇಲ್ಲದ ಕಂಪನಿಗಳಿಗೆ ಟೆಂಡರ್​ ನೀಡಿ ಕಾನೂನು ಗಾಳಿಗೆ ತೂರಿದ್ದ ಜನಾರ್ಧನ್​​
- ತಲಕಾಡು ಕ್ಷೇತ್ರದ ಪಂಚಲಿಂಗ ದರ್ಶನಕ್ಕಾಗಿ ನೀಡಿದ್ದ 400 ಕೋಟಿ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಆರೋಪ
- ಟಿ. ನರಸೀಪುರದಲ್ಲಿ AEE ಆಗಿದ್ದ ವೇಳೆ 400 ಕೋಟಿ ಗೋಲ್ಮಾಲ್​ ನಡೆಸಿರುವ ಆರೋಪ
-------------------------
ಲೋಕಾಯುಕ್ತ ದಾಳಿ ವೇಳೆ ಜನಾರ್ಧನನ ಮನೆಯಲ್ಲಿ ಸಿಕ್ಕಿದ್ದೇನು..?
- ಮೂಲತಃ ನಾಗಮಂಗಲ ತಾಲೂಕಿನವನಾಗಿರುವ ಹೆಚ್​​.ಎಂ. ಜನಾರ್ಧನ
- ಲೋಕಾಯುಕ್ತ ದಾಳಿ ವೇಳೆ ಅಪಾರ ಆಸ್ತಿ ಮಾಡಿರೋದು ಬೆಳಕಿಗೆ
- ಲೆಕ್ಕಕ್ಕೆ ಸಿಗದ ಆಸ್ತಿ ಮಾಡಿ ತಗ್ಲಾಕೊಂಡಿರವ ಜನಾರ್ಧನ
- ಆದಾಯ ಮೀರಿದ ಆಸ್ತಿ ಗಳಿಕೆ ಲೋಕಾಯುಕ್ತ ಪರಿಶೀಲನೆಯಲ್ಲಿ ಬಹಿರಂಗ
- ನಾಗಮಂಗಲ ತಾಲೂಕಿನ ಹೊನಕರೆಯಲ್ಲಿ - 7.38 ಎಕರೆ ಕೃಷಿ ಜಮೀನು
- ಸೋಮನಹಳ್ಳಿ 1.04 ಎಕರೆ ಕೃಷಿ ಜಮೀನು
- ಚಿತ್ರದುರ್ಗದ ಚಳ್ಳಕೆರೆ ಮತ್ತು ಹಿರಿಯೂರು ತಾಲೂಕಿನಲ್ಲಿ 25 ಎಕರೆ ಕೃಷಿ ಜಮೀನು
- ಮಂಡ್ಯದ ಸ್ವರ್ಣಸಂದ್ರದಲ್ಲಿ 1 ಮನೆ
- ನಾಗಮಂಗಲ ಹೊನಕೆರೆ ಗ್ರಾಮದಲ್ಲಿ 1 ಮನೆ
- ಮೈಸೂರು ಸರಸ್ವತಿಪುರಂನಲ್ಲಿ 1 ಮನೆ
- ಮೈಸೂರು ಸಿದ್ದಾರ್ಥ ನಗರದಲ್ಲಿ 1 ಮನೆ
- ಮೈಸೂರು ಲಲಿತಾದ್ರಿಪುರದಲ್ಲಿ 1 ಸೈಟ್​
- ಮೈಸೂರು RTನಗರದಲ್ಲಿ 1 ಸೈಟ್​
- 1 ಇನ್ನೋವಾ ಕಾರು
- 1.7 ಕೋಟಿ ನಗದು ಪತ್ತೆ , ಮುಂದುವರಿದ ಲೋಕಾಯುಕ್ತ ತನಿಖೆ
/filters:format(webp)/newsfirstlive-kannada/media/media_files/2026/02/17/hm-janaradha-house-lokayukta-raid-2026-02-17-18-42-52.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us