/newsfirstlive-kannada/media/media_files/2025/11/19/7-crore-robberry-in-bangalore-2025-11-19-15-29-04.jpg)
ಬೆಂಗಳೂರಿನಲ್ಲಿ 7 ಕೋಟಿ ರೂ ಹಣ ದರೋಡೆ!
ಬೆಂಗಳೂರು ಮಹಾ ನಗರದಲ್ಲಿ ಹಾಡ ಹಗಲೇ ಕೋಟಿ ಕೋಟಿ ಹಣ ರಾಬರಿಯಾಗಿದೆ. ಎಟಿಎಂ ಹಣ ತುಂಬುವ ವಾಹನದಿಂದ ಕೋಟಿ ಕೋಟಿ ರೂಪಾಯಿ ಹಣವನ್ನು ದರೋಡೆ ಮಾಡಲಾಗಿದೆ. ಬೆಂಗಳೂರಿನ ಜಯನಗರದ ಅಶೋಕ ಪಿಲ್ಲರ್ ಬಳಿ ಹಾಡ ಹಗಲೇ ದರೋಡೆ ನಡೆದಿದೆ. ಸಿಎಂಎಸ್ ಕಂಪನಿಗೆ ಸೇರಿದ ವಾಹನದಿಂದ ಹಣವನ್ನು ದರೋಡೆ ಮಾಡಿಕೊಂಡು ಖದೀಮರು ಎಸ್ಕೇಪ್ ಆಗಿದ್ದಾರೆ.
ಜೆ.ಪಿ. ನಗರ ಹೆಚ್ ಡಿ ಎಫ್ ಸಿ ಬ್ಯಾಂಕ್ ನಿಂದ ಸಿಎಂಎಸ್ ವಾಹನ ಹಣವನ್ನು ತೆಗೆದುಕೊಂಡು ಹೋಗುತ್ತಿತ್ತು. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರು, ಸಿಎಂಎಸ್ ಕಂಪನಿಯ ಕಾರು ಅನ್ನು ಅಡ್ಡಗಟ್ಟಿದ್ದಾರೆ. ಇನ್ನೋವಾ ಕಾರುನಲ್ಲಿದ್ದ ದರೋಡೆಕೋರರು, ನಾವು ಸೆಂಟ್ರಲ್ ಟ್ಯಾಕ್ಸ್ ಆಫೀಸರ್ಸ್ . ಹಣದ ಡಾಕ್ಯುಮೆಂಟ್ ವೆರಿಫೈ ಮಾಡಬೇಕು ಎಂದು ಹೇಳಿದ್ದಾರೆ. ಈ ವೇಳೆ ಹಣದ ಸಮೇತ ಸಿಬ್ಬಂದಿಯನ್ನ ಇನ್ನೋವಾ ಕಾರಿನಲ್ಲಿ ಕೂರಿಸಿ ಕೊಂಡು ದರೋಡೆಕೋರರು ಬೆಂಗಳೂರಿನ ಡೈರಿ ಸರ್ಕಲ್ ಬಳಿ ಕರೆದೊಯ್ದಿದ್ದಾರೆ. ಬಳಿಕ ಸಿಎಂಎಸ್ ವಾಹನದ ಸಿಬ್ಬಂದಿಯನ್ನು ವಾಹನದಿಂದ ಕೆಳಗಿಳಿಸಿ, ಹಣದ ಸಮೇತ ದರೋಡೆಕೋರರು ಇನ್ನೋವಾ ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ.
ಸಿಎಂಎಸ್ ವಾಹನದಲ್ಲಿ 7 ಕೋಟಿ ರೂಪಾಯಿ ಹಣ ಇತ್ತು. ಎಲ್ಲ 7 ಕೋಟಿ ರೂಪಾಯಿ ಹಣವನ್ನು ದರೋಡೆಕೋರರು ಹೊತ್ತೊಯ್ದಿದ್ದಾರೆ.
ಸಿಎಂಎಸ್ ವಾಹನದ ಹಣದ ಸಮೇತ ದರೋಡೆಕೋರರು ಎಸ್ಕೇಪ್ ಆಗಿರುವ ಮಾಹಿತಿ ಪೊಲೀಸರಿಗೆ ಸಿಗುತ್ತಿದ್ದಂತೆ, ಬೆಂಗಳೂರಿನ ಎಂಟ್ರಿ, ಎಕ್ಸಿಟ್ ರಸ್ತೆಗಳಲ್ಲಿ ನಾಕಾಬಂಧಿ ಹಾಕಿ ವಾಹನಗಳ ತಪಾಸಣೆ ಶುರು ಮಾಡಿದ್ದಾರೆ. ಜೊತೆಗೆ ಬೆಂಗಳೂರಿನ ಡೈರಿ ಸರ್ಕಲ್ ನಿಂದ ಹೊಸೂರು ರಸ್ತೆ ಹಾಗೂ ಕೋಲಾರ ರಸ್ತೆ ಕಡೆಗೆ ಹೋಗುವ ರಸ್ತೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ದರೋಡೆಕೋರರಿಗಾಗಿ ಬಲೆ ಬೀಸಿದ್ದಾರೆ.
ಹಣ ತೆಗೆದುಕೊಂಡು ಹೋಗುತ್ತಿದ್ದ ಸಿಎಂಎಸ್ ವಾಹನದ ಚಾಲಕ, ಗನ್ ಮ್ಯಾನ್ ಸೇರಿದಂತೆ ಸಿಬ್ಬಂದಿಯ ಮೇಲೂ ಪೊಲೀಸರಿಗೆ ಅನುಮಾನ ಇದೆ. ಎಲ್ಲರನ್ನೂ ವಿಚಾರಣೆಗೊಳಪಡಿಸುತ್ತಿದ್ದಾರೆ.
/filters:format(webp)/newsfirstlive-kannada/media/media_files/2025/11/19/7-crore-robberry-in-bangalore02-2025-11-19-15-30-31.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us