/newsfirstlive-kannada/media/media_files/2025/10/16/doctor-photo-2025-10-16-14-18-08.jpg)
ವೈದ್ಯೆ ಕೃತಿಕಾ ರೆಡ್ಡಿ (Kritika Reddy) ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗ್ತಿದೆ. ಆತನ ಅನೈತಿಕ ಸಂಬಧ ಹಾಗು ಕುಟುಂಬದ ಕ್ರಿಮಿನಲ್ ಕೃತ್ಯಗಳ ಹಿನ್ನಲೆ ಹೀಗೆ ಸಾಲು ಸಾಲು ಆರೋಪಗಳು ಒಂದೊಂದಾಗಿ ಹೊರಬರ್ತಿವೆ. ಈಗಾಗಲೆ ಮಾರತ್​ಹಳ್ಳಿ ಪೊಲೀಸರಿಂದ ಬಂಧನವಾಗಿರುವ ಆರೋಪಿ ಡಾ.ಮಹೇಂದ್ರ ಪೊಲೀಸರ ಬಲೆಗೆ ಬಿದ್ದಿದ್ದಾದ್ರೂ ಹೇಗೆ ಎಂಬ ಮಾಹಿತಿ ಇಲ್ಲಿದೆ.
ಹೇಗೆ ಬಲೆಗೆ ಬಿದ್ದ ಆರೋಪಿ ಮಹೇಂದ್ರ..?
ವೈದ್ಯೆ ಕೃತಿಕಾ ರೆಡ್ಡಿ ಹ* ನಂತರ ಆರೋಪಿ ಮಹೇಂದ್ರ, ಏನು ಗೊತ್ತಿಲ್ಲದಂತೆ ಪತ್ನಿಯ ಮೃತದೇಹದ ಮುಂದೆ ಡ್ರಾಮಾ ಮಾಡಿದ್ದ. ನನ್ನ ಪತ್ನಿಯ ದೇಹವನ್ನ ಪೋಸ್ಟ್ ಮಾರ್ಟಂ ಮಾಡೋದು ನೋಡಲಿಕ್ಕೆ ಆಗಲ್ಲ ಎಂದು ತನಗೇನು ಗೊತ್ತಿಲ್ಲದಂತೆ ನಾಟಕವಾಡಿದ್ದ. ಕೃತಿಕಾ ಕುಟುಂಬಸ್ಥರಿಗೂ ಅಳಿಯನ ಮೇಲೆ ಯಾವುದೇ ಅನುಮಾನವಿರಲಿಲ್ಲ. ಸಂಬಂಧಿಕರ ಒತ್ತಾಯದ ಮೇರೆಗೆ ಕೃತಿಕಾ ಕುಟುಂಬ ಅನುಮಾನಾಸ್ಪದ ಸಾವು ಅಂತ ಮಾತ್ರ ದೂರು ದಾಖಲಿಸಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಧೃಢವಾದ ಅನುಮಾನ..!
ಹೌದು.. ಅದ್ಯಾವಾಗ ಮರಣೋತ್ತರ ಪರೀಕ್ಷೆಯಲ್ಲಿ ಅನಸ್ತೇಷಿಯಾ ಔಷಧದಿಂದ ಕೃತಿಕಾ ಸಾವನ್ನಪ್ಪಿರುವುದು ಧೃಢವಾಯ್ತೋ, ವರದಿ ನಂತರ ಕೃತಿಕಾ ಪೋಷಕರನ್ನು ಪೊಲೀಸರು ಸಂಪರ್ಕಿಸಿದ್ದರು. ಕೃತಿಕಾ ಸಾವಿನ ಹಿಂದಿನ ದಿನ ಅಳಿಯ ಮಹೇಂದ್ರ ಮಗಳಿಗೆ ಇಂಜೆಕ್ಷನ್ ನೀಡಿದ್ದ ಅನ್ನೊದನ್ನ ಪೋಷಕರು ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಆ್ಯಕ್ಟೀವ್ ಆದ ಮಾರತ್​ಹಳ್ಳಿ ಪೊಲೀಸರು, ಉಡುಪಿಯ ಮಣಿಪಾಲ್​ನಲ್ಲಿ ಆರೋಪಿ ಮಹೇಂದ್ರನ ಬಂಧಿಸಿದ್ದಾರೆ.