/newsfirstlive-kannada/media/post_attachments/wp-content/uploads/2024/01/Kempegowda-Bngaluru.jpg)
ಬೆಂಗಳೂರಿನ 2ನೇ ಏರ್ ಪೋರ್ಟ್ ಸ್ಥಳದ ಬಗ್ಗೆ 2-3 ದಿನದಲ್ಲಿ ನಿರ್ಧಾರ
ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಎಲ್ಲಿ ನಿರ್ಮಿಸಬೇಕು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ(ಎಎಐ ) ಅಧಿಕಾರಿಗಳು ಈ ವರ್ಷದ ಏಪ್ರಿಲ್ ತಿಂಗಳಲ್ಲೇ ಬೆಂಗಳೂರಿಗೆ ಬಂದು ಕನಕಪುರ ರಸ್ತೆಯ 2 ಸ್ಥಳ ಹಾಗೂ ನೆಲಮಂಗಲ ಬಳಿಯ ಒಂದು ಸ್ಥಳದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೂರೂ ಕಡೆಗಳಲ್ಲೂ ತಲಾ 5 ಸಾವಿರ ಎಕರೆ ಭೂಮಿಯನ್ನು ಹೊಸ ಏರ್ ಪೋರ್ಟ್ ನಿರ್ಮಿಸಲು ನೀಡುವುದಾಗಿ ರಾಜ್ಯ ಸರ್ಕಾರ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಆದರೇ, ಯಾವ ಸ್ಥಳದಲ್ಲಿ ಹೊಸ ಏರ್ ಪೋರ್ಟ್ ನಿರ್ಮಿಸುವುದು ಸೂಕ್ತ ಎಂಬ ಬಗ್ಗೆ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳು ಇನ್ನೂ ತಮ್ಮ ಅಭಿಪ್ರಾಯ, ನಿಲುವು ಏನು ಎಂಬುದನ್ನು ತಿಳಿಸಿಲ್ಲ. ಹೀಗಾಗಿ ಇನ್ನೂ ರಾಜ್ಯ ಸರ್ಕಾರಕ್ಕೆ 2ನೇ ಏರ್ ಪೋರ್ಟ್ ಅನ್ನು ಎಲ್ಲಿ ನಿರ್ಮಿಸಬೇಕೆಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಆದರೇ, ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಇನ್ನೂ ಎರಡು ಮೂರು ದಿನಗಳಲ್ಲಿ ಬೆಂಗಳೂರಿನ 2ನೇ ಏರ್ ಪೋರ್ಟ್ ಅನ್ನು ಯಾವ ಸ್ಥಳದಲ್ಲಿ ನಿರ್ಮಿಸಿದರೇ, ಸೂಕ್ತ ಎಂಬ ಬಗ್ಗೆ ತಮ್ಮ ವರದಿಯನ್ನು ನೀಡಲಿದ್ದಾರೆ. ಎಎಐ ನೀಡುವ ವರದಿ ಆಧಾರದ ಮೇಲೆ ಈ ಸ್ಥಳದ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ಫಿಸಿಬಲಿಟಿ ರಿಪೋರ್ಟ್ ನೀಡಲು ಕಂಪನಿಯೊಂದಕ್ಕೆ ಜವಾಬ್ದಾರಿ ವಹಿಸಲಿದೆ. ಆ ಫಿಸಿಬಲಿಟಿ ವರದಿಯನ್ನು ರಾಜ್ಯದ ಕ್ಯಾಬಿನೆಟ್ ನಲ್ಲಿ ವಿಸ್ತೃತವಾಗಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತೆ ಎಂದು ರಾಜ್ಯದ ಕೈಗಾರಿಕೆ ಮತ್ತು ಮೂಲಸೌಕರ್ಯ ಖಾತೆ ಸಚಿವ ಎಂ.ಬಿ.ಪಾಟೀಲ್ ಇಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.
ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- ಕೆಲವೇ ದಿನಗಳಲ್ಲಿ ಎಎಐ ವರದಿ ಲಭ್ಯ
— M B Patil (@MBPatil) October 23, 2025
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ #ನಮ್ಮಸರಕಾರ ಗುರುತಿಸಿರುವ 3 ಸ್ಥಳಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (#AAI)ದ ಉನ್ನತ ಮಟ್ಟದ ತಂಡ ಪರಿಶೀಲನೆ ನಡೆಸಿದ್ದು, ಕೆಲವೇ ದಿನಗಳಲ್ಲಿ ವರದಿಯನ್ನು… pic.twitter.com/wuTXkb08j1
ಹೊಸ ಏರ್ ಪೋರ್ಟ್ ಗೆ ಮೂಲಸೌಕರ್ಯ ನೀಡಿಕೆ
ಕನಕಪುರ ರಸ್ತೆಯ ಭಾಗದಲ್ಲಿ ಏರ್ ಪೋರ್ಟ್ ನಿರ್ಮಾಣವಾದರೇ, ಆ ಭಾಗದಲ್ಲಿ ರಸ್ತೆ, ಹೆದ್ದಾರಿ, ಮೆಟ್ರೋ ಸೇರಿದಂತೆ ಎಲ್ಲ ಸೌಕರ್ಯ ನಿರ್ಮಿಸಬೇಕಾಗುತ್ತೆ . ನೆಲಮಂಗಲ ಭಾಗದಲ್ಲಿ ಈಗಾಗಲೇ ಹೆದ್ದಾರಿ, ರೈಲ್ವೇ ಮಾರ್ಗ ಇದೆ. ಏನಿದ್ದರೂ, ನೆಲಮಂಗಲ ಹಾಗೂ ಹೊಸ ಏರ್ ಪೋರ್ಟ್ ಸ್ಥಳಕ್ಕೆ ಮೆಟ್ರೋ ಸಂಪರ್ಕ ನೀಡಬೇಕಾಗುತ್ತೆ.
/filters:format(webp)/newsfirstlive-kannada/media/post_attachments/wp-content/uploads/2024/09/Nelamangala-Airport-1.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us