/newsfirstlive-kannada/media/media_files/2025/12/30/kogilu-layout-1-2025-12-30-07-26-22.jpg)
ಕೋಗಿಲು ಲೇಔಟ್‌ನ 26 ಮಂದಿಗೆ ಮನೆ ಭಾಗ್ಯ
ರಾಜ್ಯದಿಂದ ರಾಷ್ಟ್ರ ರಾಜಕೀಯದವರೆಗೂ ಸದ್ದು ಮಾಡಿದ್ದ ಕೋಗಿಲು ಲೇಔಟ್​ ಮನೆಗಳ ತೆರವು ವಿವಾದ ಸದ್ಯ ತಣ್ಣಗಾಗಿದೆ.. ನೀ ಕೊಡೆ ನಾ ಬಿಡೆ ಅಂತ ಸೂರಿಗಾಗಿ ಚಾತಕ ಪಕ್ಷಿಗಳಂತೆ ಕಾದಿದ್ದ 26 ಕುಟುಂಬಗಳಿಗೆ ವಸತಿ ಸಚಿವರು ಗುಡ್​ ನ್ಯೂಸ್​ವೊಂದನ್ನ​ ಕೊಟ್ಟಿದ್ದಾರೆ.. ಈ ಮಧ್ಯೆ ಉಂಡು ಹೋದ ಕೊಂಡು ಹೋದ ಅಂತ ಬಡವರನ್ನ ಯಾಮಾರಿಸಿ ಹಣ ನುಂಗಿದ್ದ ಖದೀಮರು ಕಂಬಿ ಹಿಂದೆ ಸೇರಿದ್ದಾರೆ.
ಕೋಗಿಲು ಲೇಔಟ್​ನಲ್ಲಿ ಜೆಸಿಬಿಗಳ ಡಿಚ್ಚಿಗೆ ನೆಲಕಚ್ಚಿದ ಮನೆಗಳನ್ನ ಕಂಡು ಮರುಗಿದ್ದ ಮನಸ್ಸುಗಳು ಇಂದಿಗೂ ಕಣ್ಣೀರಿಡುತ್ತಲೇ ಇವೆ.. ಅದು ಎಲ್ಲಿಂದಲೋ ಬಂದು ಪುಟ್ಟು ಗೂಡು ಕಟ್ಟಿಕೊಂಡು ಬದುಕು ನಡೆಸ್ತಿದ್ದವರು ಬೀದಿಗೆ ಬಿದ್ದು ಕಂಗಾಲಾಗಿದ್ದಾರೆ.. ಹೊಸ ಜೀವನ ಕಟ್ಟಿಕೊಳ್ಳಲು ಸುಭದ್ರ ಮನೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಜನರಿಗೆ ಇಂದು ವಸತಿ ಸಚಿವರು ಸಹಿ ಸುದ್ದಿಯೊಂದನ್ನ ನೀಡಿದ್ದಾರೆ.
ಕೋಗಿಲು ಲೇಔಟ್​ ನಿರಾಶ್ರಿತರಿಗೆ ಕೊನೆಗೂ ಸಿಕ್ತು ‘ಗೃಹ ಭಾಗ್ಯ’!
26 ಜನರ ದಾಖಲೆಗಳು ಕ್ಲಿಯರ್​.. ಶೀಘ್ರದಲ್ಲೇ ಮನೆ ಹಂಚಿಕೆ!
ಅಕ್ರಮ ಒತ್ತುವರಿ ತೆರವಿನಿಂದ ಕೋಗಿಲು ಲೇಔಟ್​ನಲ್ಲಿ ಮನೆ ಕಳೆದುಕೊಂಡಿದ್ದ 26 ಕುಟುಂಬಗಳಿಗೆ ವಸತಿ ಸಚಿವ ಜಮೀರ್ ಅಹ್ಮದ್​ ಗುಡ್ ನ್ಯೂಸ್​ ನೀಡಿದ್ದಾರೆ.. ಲೇಔಟ್​ನಲ್ಲಿ ತೆರವುಗೊಂಡಿರೋ 161 ಮನೆಗಳ ಪೈಕಿ 26 ಜನರ ದಾಖಲೆಗಳು ಕ್ಲಿಯರ್​ ಆಗಿದ್ದು ಅವರಿಗೆ ಶೀಘ್ರದಲ್ಲೇ ಮನೆ ನೀಡೋದಾಗಿ ಸಚಿವ ಜಮೀರ್​ ಅಹ್ಮದ್ ಮಾಹಿತಿ​ ನೀಡಿದ್ದಾರೆ.. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ ಬಳಿಕ ಜಮೀರ್​ ಅಹ್ಮದ್​ ಈ ಮಾಹಿತಿ ನೀಡಿದ್ದು 26 ಕುಟುಂಬಗಳು ನಿಟ್ಟುಸಿರುಬಿಟ್ಟಿವೆ.
/filters:format(webp)/newsfirstlive-kannada/media/post_attachments/wp-content/uploads/2024/04/zameer1.jpg)
ಸರ್ಕಾರಿ ಜಾಗವನ್ನ ಮಾರಾಟ ಮಾಡಿದ್ದ ಚಾಲಾಕಿಗಳು ಅರೆಸ್ಟ್​!
ವಾಸಿಂ & ವಿಜಯ್ ಕುಮಾರ್​ಗೆ ಪೊಲೀಸರ ವಿಚಾರಣೆ ಬಿಸಿ
ಕೋಗಿಲು ಲೇಔಟ್​ನ ಸರ್ಕಾರಿ ಸರ್ಕಾರಿ ಜಾಗ ಕಬಳಿಕೆ ಆರೋಪದಡಿ ಇಂಜಿನಿಯರ್ ಸಂತೋಷ್ ಕುಮಾರ್ ಕಡಾಡಿ ನೀಡಿದ್ದ ದೂರಿನ ಹಿನ್ನೆಲೆ ಯಲಹಂಕ ಠಾಣೆಯಲ್ಲಿ ನಾಲ್ವರ ವಿರುದ್ಧ FIR ದಾಖಲಾಗಿತ್ತು.. ಈ ಹಿನ್ನೆಲೆ A1 ವಾಸಿಂ ಬೇಗ್, A2 ವಿಜಯ್ ಕುಮಾರ್​ನ ವಶಕ್ಕೆ ಪಡೆದು ಕಳೆದೆರೆಡು ದಿನದಿಂದ ಖುದ್ದು ಹಿರಿಯ ಅಧಿಕಾರಿಗಳೇ ವಿಚಾರಣೆ ನಡೆಸಿದ್ರು.. ಇಂದು ಇಬ್ಬರನ್ನೂ ಬಂಧಿಸಿದ ಪೊಲೀಸರು ನ್ಯಾಯಾಲಯ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.. ಇನ್ನೂ ತಲೆಮರೆಸಿಕೊಂಡಿರೋ A3 ಮುನಿಯಂಜನಪ್ಪ ಹಾಗೂ A4 ರಾಬೀನ್​ಗಾಗಿ ಪೊಲೀಸರು ಶೋಧ ನಡೆಸ್ತಿದ್ದಾರೆ.
ಒಟ್ನಲ್ಲಿ ಬೆರಳು ಕೊಟ್ಟರೆ ಹಸ್ತನೇ ನುಂಗಿದ್ರೂ ಅನ್ನೋ ಹಾಗೆ ಸರ್ಕಾರಿ ಜಾಗವನ್ನೇ ನುಂಗಿ ನೀರು ಕುಡಿದಿದ್ದ ಚಾಲಾಕಿಗಳಿಗೆ ಸದ್ಯ ಪೊಲೀಸರು ಬೆಂಡೆತ್ತೋ ಕೆಲಸ ಶುರುಮಾಡಿದ್ದಾರೆ.. ಇನ್ನೂ ಅದ್ಯಾರರನ್ನ ಯಾಮಾರಿಸಿ ಈ ಚಾಲಾಕಿಗಳು ಹಣ ಪೀಕಿದ್ದಾರೆ ಅನ್ನೋದು ತನಿಖೆ ಬಳಿಕವಷ್ಟೇ ಗೊತ್ತಾಗಬೇಕಿದೆ.
ಅಂಕಿತಾ, ಕ್ರೈಂ ಬ್ಯೂರೋ ನ್ಯೂಸ್ ಫಸ್ಟ್​.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us