ಉದ್ಯಮಿ ಸಿ.ಜೆ.ರಾಯ್‌ಗೆ ಕೊಚ್ಚಿ ಪ್ಲ್ಯಾಟ್ ಮಾರಾಟ ಮುಳುವಾಯಿತೇ? : ಡೈರಿಯಲ್ಲಿ ಏನೇನು ಬರೆದಿದ್ದಾರೆ?

ಕಾನ್ಪಿಡೆಂಟ್ ಗ್ರೂಪ್ ಚೇರ್ ಮೆನ್ ಸಿ.ಜೆ.ರಾಯ್ ಕೇರಳದ ಕೊಚ್ಚಿಯಲ್ಲಿ ಪ್ಲ್ಯಾಟ್ ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರಂತೆ. ಐ.ಟಿ. ಇಲಾಖೆಗೆ ಇದು ಗೊತ್ತಾಗಿದ್ದು, ಗ್ರಾಹಕರಿಂದ ಕಪ್ಪು ಹಣ ಪಡೆದಿದ್ದಾರಾ ಎಂದು ತನಿಖೆ ಶುರು ಮಾಡಿದ್ದರು. ಈ ಒತ್ತಡದಲ್ಲಿ ಆತ್ಮಹತ್ಯೆ ಮಾಡಿಕೊಂಡ್ರಾ ಎಂಬ ಪ್ರಶ್ನೆ ಎದ್ದಿದೆ.

author-image
Chandramohan
cj roy (3)
Advertisment

ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ರಹಸ್ಯ 4 ದಿನಗಳು ಕಳೆದ್ರೂ ಇನ್ನೂ ನಿಗೂಢ.. ಈ ಮಧ್ಯೆ ನ್ಯಾಯಾಂಗ ತನಿಖೆಗೆ ಕೋರಿ ಕೇಂದ್ರಕ್ಕೆ ಕೇರಳ ಸಿಎಂ ಪತ್ರ ಬರೆದಿದ್ದಾರೆ.. ಕೊಚ್ಚಿಯ ಆ ಫ್ಲ್ಯಾಟ್ ಮಾರಾಟವೇ ರಾಯ್​ಗೆ, ಕಂಟಕವಾಯ್ತಾ ಅನ್ನೋ ಪ್ರಶ್ನೆಯೂ ಮೂಡಿದೆ. ಜೊತೆಗೆ ಸಾವಿಗೂ ಮುನ್ನಾ ಅವರು ಬರೆದಿದ್ದಾರೆನ್ನಲಾದ ಡೆತ್‌ನೋಟ್ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ನೀಡಿದೆ.
ಅಂತದ್ದೇನಾಯ್ತು.. ಉದ್ಯಮ ಸಾಮ್ರಾಜ್ಯದ ಕೋಟೆಯನ್ನೇ ಕಟ್ಟಿದ್ದ ರಾಯ್​ಗೆ ಆ ಘಳಿಗೆಯಲ್ಲಿ ಅದೇನಾಯ್ತು.. ಎದೆ ಸೀಳಿದ ಗುಂಡು ಮೇಲ್ನೋಟಕ್ಕೆ ಐಟಿ ದಾಳಿ ಅಂತಿದೆ..  ಆದ್ರೆ, ಉದ್ಯಮ ಲೋಕದ ದಿಗ್ಗಜ ಇಷ್ಟಕ್ಕೇ ಅಂಜಿದ್ರಾ... ಬ್ಯುಸಿನೆಸ್ ಮ್ಯಾಗ್ನೆಟ್ ಸೂಸೈಡ್ ಮಿಸ್ಟ್ರಿ ಇನ್ನೂ ಸಸ್ಪೆನ್ಸ್..

ಸಿ.ಜೆ.ರಾಯ್ ಎದೆಗೆ ಸಿಡಿದ ಗುಂಡು.. ಸಾವಿನ ಸತ್ಯ ನಿಗೂಢ!
ನ್ಯಾಯಾಂಗ ತನಿಖೆಗೆ ಕೋರಿ ಕೇಂದ್ರಕ್ಕೆ ಕೇರಳ ಸಿಎಂ ಪತ್ರ
ಸಾವಿರಾರು ಕೋಟಿಗಳ ಒಡೆಯ, ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.. ಕರ್ನಾಟಕ ಸರ್ಕಾರ ಎಸ್​ಐಟಿ ತನಿಖೆ ಮಾಡಿಸ್ತಿದೆ. ಇದನ್ನು ಒಪ್ಪದ ಕೇರಳ ಸಿಎಂ ಪಿಣರಾಯ್ ವಿಜಯನ್, ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಪತ್ರ ಬರೆದಿದ್ದು  ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.. ಕಠಿಣ ಪದಗಳಲ್ಲಿ ಪತ್ರ ಬರೆದಿರುವ ವಿಜಯನ್ ಈ ಘಟನೆಯನ್ನು ದೇಶದ ತೆರಿಗೆ ಆಡಳಿತಕ್ಕೆ ಕಳಂಕ ಎಂದಿದ್ದಾರೆ.. ಐಟಿ ಅಧಿಕಾರಿಗಳ ದಾಳಿ ವೇಳೆಯೇ ಘಟನೆ ನಡೆದಿದ್ದು ಹೇಗೆ,  ನ್ಯಾಯಾಂಗ ತನಿಖೆಯಿಂದ ಮಾತ್ರ ಸಾವಿನ ಸತ್ಯ ಹೊರಬರಲಿದೆ ಅಂತ ಪತ್ರ ಬರೆದಿದ್ದಾರೆ.. ತಡಮಾಡದೇ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಹಾಗೂ ವರದಿ ಸಲ್ಲಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಅಂತ ಒತ್ತಾಯಿಸಿದ್ದಾರೆ.

 ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ ಬ್ಯುಸಿನೆಸ್‌  ಸಮುದಾಯ ಹಾಗೂ ನಾಗರಿಕ ಸಮಾಜಕ್ಕೆ ಆತಂಕ ತಂದಿದೆ.. ದೇಶದ ತೆರಿಗೆ ವ್ಯವಸ್ಥೆ ಮೇಲೂ ಕಳಂಕ ಉಂಟಾಗಿದೆ.. ಐಟಿ ಅಧಿಕಾರಿಗಳು ಪ್ರೋಟೋಕಾಲ್ ಅನುಸರಿಸಿಲ್ಲ ಎಂಬ ಅನುಮಾನ ಮೂಡಿದೆ..  ಐಟಿ ದಾಳಿ ವೇಳೆಯ ವ್ಯಕ್ತಿಯ ಮಾನಿಟರಿಂಗ್​ನಲ್ಲಿ ಇರಬೇಕು. ಬೇರೆ ರೂಮ್​ಗೆ ಹೋಗಿ ಗನ್​ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.ಎಂದು ಕೇರಳ ಸಿಎಂ ಪಿನರಾಯಿ ವಿಜಯನ್ , ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದಾರೆ. 

ಇನ್ನು ಸಿ.ಜೆ.ರಾಯ್ ಆತ್ಮಹತ್ಯೆ ಕೊಚ್ಚಿಯ ಫ್ಲ್ಯಾಟ್ ಮಾರಾಟ ಕಂಟಕವಾಯ್ತಾ ಎಂಬ ಅನುಮಾನ ಮೂಡಿದೆ.. ಮೂಲಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ತೆರಿಗೆ ವಂಚಿಸಿದ್ದರಿಂದಲೇ ಐಟಿ ಅಧಿಕಾರಿಗಳು ರಾಯ್ ಬೆನ್ನುಬಿದ್ದಿದ್ದರು ಎನ್ನಲಾಗ್ತಿದೆ.

ಕೊಚ್ಚಿಯ ಫ್ಲ್ಯಾಟ್ ಮಾರಾಟ ಕಂಟಕ?
2025ರಲ್ಲಿ ಕೊಚ್ಚಿಯಲ್ಲಿ 156 ಫ್ಲ್ಯಾಟ್​​ ಮಾರಿದ್ದ ಸಿಜೆ ರಾಯ್
ಮೂಲ ಬೆಲೆಗಿಂತ, ಅತ್ಯಂತ ಕಡಿಮೆ ಬೆಲೆಗೆ ಫ್ಲ್ಯಾಟ್ ಸೇಲ್
ಖರೀದಿದಾರರಿಂದ ನಗದು ಮೂಲಕ ಹಣ ಪಡೆದ ಆರೋಪ
ಕಡಿಮೆ ಬೆಲೆಗೆ ಆನ್​ಲೈನ್ ಟ್ರಾನ್ಸಾಕ್ಷನ್, ನಗದು ವ್ಯವಹಾರ
ತೆರಿಗೆ ವಂಚಿಸಲು ನಗದು ವ್ಯವಹಾರ ಮಾಡಿರುವ ಆರೋಪ
ದುಬೈನಲ್ಲಿ ಬಹುದೊಡ್ಡ ಪ್ರಾಜೆಕ್ಟ್ ಲೋನ್ ಇಲ್ಲದೇ ಕಂಪ್ಲೀಟ್
ಎರಡನೇ ಪ್ರಾಜೆಕ್ಟ್​ಗೂ ಕೈ ಹಾಕಿದ್ದ ಉದ್ಯಮಿ ಸಿ.ಜೆ ರಾಯ್​


( 2025ರಲ್ಲಿ ಕೊಚ್ಚಿಯಲ್ಲಿ 156 ಫ್ಲ್ಯಾಟ್​ಗಳನ್ನು ಮಾರಾಟ ಮಾಡಿದ್ದೇ ರಾಯ್​ಗೆ ಕಂಟಕ ಆಯ್ತಾ ಎನ್ನಲಾಗ್ತಿದೆ.. ಮೂಲ ಬೆಲೆಗಿಂತ, ಅತ್ಯಂತ ಕಡಿಮೆ ಬೆಲೆಗೆ ಫ್ಲ್ಯಾಟ್ ಸೇಲ್ ಮಾಡಿದ್ದು, ಖರೀದಿದಾರರಿಂದ ನಗದು ಮೂಲಕ ಹಣ ಪಡೆದ ಆರೋಪ ಕೇಳಿ ಬಂದಿದೆ.. ಇನ್ನು ಕಡಿಮೆ ಬೆಲೆಗೆ ಆನ್​ಲೈನ್ ಟ್ರಾನ್ಸಾಕ್ಷನ್ ಮಾಡಿಸಿಕೊಂಡು ನಗದು ವ್ಯವಹಾರ ಮಾಡಲಾಗಿದೆ.. ನಗದು ವ್ಯವಹಾರ ಮಾಡುವ ಮೂಲಕ ತೆರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ.. ಇನ್ನು ದುಬೈನಲ್ಲಿ ಬಹುದೊಡ್ಡ ಪ್ರಾಜೆಕ್ಟ್ ಲೋನ್ ಇಲ್ಲದೇ ಕಂಪ್ಲೀಟ್ ಮಾಡಿದ್ದ ಉದ್ಯಮಿ ಸಿ.ಜೆ.ರಾಯ್​ ಎರಡನೇ ಪ್ರಾಜೆಕ್ಟ್​ಗೂ ಕೈ ಹಾಕಿದ್ದರು ಎನ್ನಲಾಗಿದೆ. )

ಐಟಿ ಅಧಿಕಾರಿಗಳ ದಾಳಿಯನ್ನು ಪ್ರಶ್ನಿಸಿದ್ದ ಸಿ.ಜೆ. ರಾಯ್
8 ಕಂಪನಿಗಳ ಪರ ಅರ್ಜಿ ಸಲ್ಲಿಸಿ ಅರ್ಜಿ ಹಿಂಪಡೆದಿದ್ದ ರಾಯ್
ಇನ್ನು ಕೇರಳದ ಕೊಚ್ಚಿಯಲ್ಲಿ  ನವೆಂಬರ್ 27ರಂದು ನಡೆದಿದ್ದ ಐಟಿ ದಾಳಿ ಹಾಗೂ ಡಿಸೆಂಬರ್ 3ರಂದು ನಡೆದಿದ್ದ ದಾಳಿಯನ್ನು ಸಿ.ಜೆ.ರಾಯ್ ಪ್ರಶ್ನಿಸಿದ್ದರು.. ಡಿಸೆಂಬರ್ 16ರಂದು ಹೈಕೋರ್ಟ್​​​ಗೆ ರಿಟ್ ಅರ್ಜಿ ಸಲ್ಲಿಸಿ ಬಳಿಕ ಡಿಸೆಂಬರ್ 18ರಂದು ಅರ್ಜಿ ವಾಪಸ್ ಪಡೆದಿದ್ದರು.. ಐಟಿ ಇಲಾಖೆಯ ಶೋಧನೆ, ಪಂಚನಾಮೆ ಕಾನೂನುಬಾಹಿರ ಅಂತ ಅರ್ಜಿ ಸಲ್ಲಿಸಿ ಎರಡೇ ದಿನದಲ್ಲಿ ವಾಪಸ್ ಪಡೆದಿದ್ದು ಕುತೂಹಲಕ್ಕೆ ಕಾರಣ ಆಗಿದೆ.
ಇನ್ನು ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆಗೆ ಶರಣಾಗುವ ಮುನ್ನ ಕೊನೇ ಬಾರಿಗೆ ತನ್ನ ತಾಯಿಗೆ ಕರೆ ಮಾಡಿದ್ದ ಮಾತಾಡಿದ್ದರಂತೆ.. ಮಗನ ಕಟು ನಿರ್ಧಾರದಿಂದ ಶಾಕ್​ಗೆ ಒಳಗಾಗಿರೋ ತಾಯಿ ಯಾರ ಜೊತೆಗೂ ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ..
ಸಾಯುವ ಮುನ್ನ 9 ಪುಟಗಳ ಡೆತ್ ನೋಟ್ ಬರೆದಿದ್ದು, ರಾಜಕಾರಣಿ ಸೇರಿ ಹಲವರ ಹೆಸರಿದೆ..ಆ ರಾಜಕಾರಣಿ ಜೊತೆಗಿನ ವ್ಯವಹಾರವೂ ಉಲ್ಲೇಖ ಆಗಿದೆ ಎನ್ನಲಾಗಿದೆ.. ಆದ್ರೆ, ಉದ್ಯಮಿ ಸಿ.ಜೆ.ರಾಯ್ ಶಿಸ್ತಿನ ಜೀವನ ನಡೆಸ್ತಿದ್ದು ದಿನನಿತ್ಯದ ಆಗುಹೋಗುಗಳನ್ನು ಡೈರಿಯಲ್ಲಿ ಬರೀತಾ ಇದ್ರಂತೆ..  ಆದ್ರೆ ಆ ಡೈರಿಯನ್ನು ಡೆತ್​​ನೋಟ್ ಎನ್ನಲಾಗದು ಅಂತ ಎಸ್​​ಐಟಿ ಅಧಿಕಾರಿಗಳ ವಾದ ಆಗಿದೆ.. ಆ  ಡೈರಿಯಲ್ಲಿ ಯಾವುದೇ ಅಂತಿಮ ಸಂದೇಶ ಬರೆದಿಲ್ಲ..  ಹೀಗಾಗಿ ಸಾಮಾನ್ಯ ದಿನಚರಿಯನ್ನೇ ಡೆತ್​​ನೋಟ್ ಅಂತ ಪರಿಗಣಿಸಲು ಸಾಧ್ಯವಿಲ್ಲ ಅಂತ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.. ಒಟ್ಟಾರೆ, ಸಾವಿರಾರು ಕೋಟಿಯ ಒಡೆಯನಾಗಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಕಾನ್ಫಿಡೆಂಟ್ ಕಳೆದುಕೊಂಡಿದ್ದು ಮಾತ್ರ ಇನ್ನೂ ಅತಿಂದ್ರೀಯ ಎನಿಸಿದೆ..


ಅಂಕಿತಾ ಜೊತೆ ಸಂದೇಶ್, ಕ್ರೈಂಬ್ಯೂರೋ, ನ್ಯೂಸ್​​ಫಸ್ಟ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

confident group owner CJ ROY suicide CJ Roy CJ ROY NET WORTH CJ ROY DEATH NOTE SECRETS
Advertisment