/newsfirstlive-kannada/media/media_files/2025/12/03/siddaramaiah-dk-shivakumar-4-2025-12-03-09-22-51.jpg)
ಕಾರ್ಟಿಯರ್ ವಾಚ್ ಧರಿಸಿದ್ದ ಸಿಎಂ, ಡಿಸಿಎಂ!
ನಿನ್ನೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರೂ ಜೊತೆಯಾಗಿ ಬ್ರೇಕ್ ಫಾಸ್ಟ್ ಮಾಡಿದ್ದರು. ಬೆಂಗಳೂರಿನ ಸದಾಶಿವನಗರದ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಇಡ್ಲಿ, ನಾಟಿ ಕೋಳಿ ಸಾರು ಸವಿದರು.
ಡಿ.ಕೆ.ಶಿವಕುಮಾರ್ ಮನೆಗೆ ಬಂದ ಸಿಎಂ ಸಿದ್ದರಾಮಯ್ಯ ಅವರನ್ನು ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ಸ್ವಾಗತಿಸಿದ್ದರು. ಈ ವೇಳೆ ನಾಟಿ ಕೋಳಿ ಸಾರು ಬಗ್ಗೆ ಚರ್ಚೆಯಾದಂತೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಧರಿಸಿದ್ದ ವಾಚ್ ಕೂಡ ಎಲ್ಲರ ಗಮನ ಸೆಳೆಯಿತು. ಸಿಎಂ ಕೈಯಲ್ಲಿದ್ದ ವಾಚ್ ಕಾರ್ಟಿಯರ್ ಕಂಪನಿಯ ವಾಚ್. ಈ ವಾಚ್‌ನ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ ಅಂತ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಟ್ವೀಟ್ ಮಾಡಿ ಟೀಕೆ ಮಾಡಿದ್ದವು.
ಸಿಎಂ ಸಿದ್ದರಾಮಯ್ಯ ಈ ಹಿಂದೆ 2013-18ರ ಅವಧಿಯಲ್ಲಿ ಹೂಬ್ಲೇಟ್ ವಾಚ್ ಕಟ್ಟಿ ಟೀಕೆಗೆ ಗುರಿಯಾಗಿದ್ದರು. ಅದು ಬರೋಬ್ಬರಿ 70 ಲಕ್ಷ ರೂಪಾಯಿ ಮೌಲ್ಯದ ವಾಚ್. ಬಳಿಕ ಆ ವಾಚ್ ಅನ್ನು ಸರ್ಕಾರಕ್ಕೆ ನೀಡಿದ್ದರು. ಆ ವಾಚ್ ಅನ್ನು ಕ್ಯಾಬಿನೆಟ್ ಮೀಟಿಂಗ್ ಹಾಲ್ ನಲ್ಲಿ ಇಡುವ ತೀರ್ಮಾನ ಕೈಗೊಳ್ಳಲಾಗಿತ್ತು.
ಈಗ ಮತ್ತೆ ಸಿಎಂ ಸಿದ್ದರಾಮಯ್ಯ ಅವರು ಸಮಾಜವಾದಿ ಅಂತ ಹೇಳಿಕೊಳ್ಳುತ್ತಲೇ 43 ಲಕ್ಷ ರೂಪಾಯಿ ಮೌಲ್ಯದ ದುಬಾರಿ ವಾಚ್ ಕಟ್ಟಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಟೀಕಿಸಿದ್ದವು.
/filters:format(webp)/newsfirstlive-kannada/media/media_files/2025/12/03/siddaramaiah-dk-shivakumar-3-2025-12-03-09-18-43.jpg)
ಆದರೇ, ಈ ಭಾರಿ ಸಿಎಂ ಮತ್ತು ಡಿಸಿಎಂ ಇಬ್ಬರೂ ಒಂದೇ ಬ್ರ್ಯಾಂಡ್‌ನ ವಾಚ್ ಅನ್ನು ಕಟ್ಟಿದ್ದಾರೆ. ಇಬ್ಬರ ಕೈಯಲ್ಲೂ ಸ್ಯಾಂಟೋಸ್ ಕಾರ್ಟಿಯರ್ ಕಂಪನಿಯ ವಾಚ್ ಇರೋದು ನಿನ್ನೆ ಡಿಕೆ ಶಿವಕುಮಾರ್ ಮನೆಯ ಚೇರ್ ನಲ್ಲಿ ಇಬ್ಬರು ಕುಳಿತಿದ್ದಾಗ, ಪೋಟೋದಲ್ಲಿ ಕಂಡು ಬಂದಿದೆ.
ಈ ಟೀಕೆಗೆ ಈಗ ಡಿಸಿಎಂ ಡಿ.ಕೆ.ಶಿವ ಕುಮಾರ್ ಉತ್ತರ ನೀಡಿದ್ದಾರೆ. ಇದು ನನ್ನ ಸ್ವಂತ ವಾಚ್ . ನಾನು ಆಸ್ಟ್ರೇಲಿಯಾದಲ್ಲಿ ಕಳೆದ 7 ವರ್ಷದ ಹಿಂದೆ ಖರೀದಿಸಿದ್ದೆ. 25 ಲಕ್ಷ ರೂಪಾಯಿ ವಾಚ್ ಇದು . ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನನ್ನ ತಂದೆ ಬಳಿ 7ವಾಚ್ ಇತ್ತು . ನನ್ನ ವಾಚ್ ಬಗ್ಗೆ ಚುನಾವಣೆ ಅಫಿಡವಿಟ್ ನಲ್ಲೂ ಘೋಷಣೆ ಮಾಡಿಕೊಂಡಿದ್ದೇನೆ ಎಂದು ಶಿವಕುಮಾರ್ ಹೇಳಿದ್ದಾರೆ.
ಸಿಎಂ ವಾಚ್ ವಿಚಾರವಾಗಿ ಬಿಜೆಪಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಅವರಿಗೆ ಯಾವ ವಾಚ್ ಬೇಕೋ ಅದನ್ನು ಧರಿಸುವ ಹಕ್ಕಿದೆ . ಅವರ ಮಗ ಅವರಿಗೆ ಗಿಫ್ಟ್ ಮಾಡಿರಬಹುದು, ಅವರಿಗೆ ಆ ವಾಚ್ ಖರೀದಿಸುವ ಸಾಮರ್ಥ್ಯವಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/03/siddaramaiah-dk-shivakumar-2-2025-12-03-09-21-39.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us