/newsfirstlive-kannada/media/media_files/2026/01/28/gba-e-khatha-2026-01-28-17-45-53.jpg)
ಬೆಂಗಳೂರಿಗರು ಆಸ್ತಿಗಳ ಇ ಖಾತಾ ಪಡೆಯೋದು ಹೇಗೆ ಗೊತ್ತಾ?
ಬೆಂಗಳೂರಿನ ಆಸ್ತಿದಾರರಿಗೆ ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇ–ಖಾತಾ ವಿಚಾರದಲ್ಲಿ ಮಹತ್ವದ ಅಪ್ಡೇಟ್​​ ಒಂದು ನೀಡಿದೆ. ಇಷ್ಟು ದಿನ ಇ–ಖಾತಾ ಪಡೆಯಲು ಆಸ್ತಿದಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಆ ಸಮಸ್ಯೆಗೆ ಪರಿಹಾರವಾಗಿ ಹೊಸ ನಿಯಮ ಜಾರಿಗೆ ತರಲಾಗಿದೆ. ಈ ನಿಯಮ ಈಗಾಗಲೇ ಜಾರಿಗೆ ಬಂದಿದ್ದು, ನೀವು ಮನೆಯಲ್ಲೇ ಕೂತು ಇ ಖಾತಾ ಪಡೀಬಹುದು.
ಮೊದಲಿಗೆ ಸರ್ಕಾರದ ಉದ್ದೇಶ ಏನು ಅಂತಾ ನೋಡೋದಾದ್ರೆ..!
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿ ಮಾರಾಟ ಮತ್ತು ಖರೀದಿಯಲ್ಲಿ ಭಾರೀ ಮೋಸ ನಡೆಯುತ್ತಿದೆ. ಈ ಮೋಸವನ್ನು ತಡೆಯುವುದು, ಪ್ರಾಪರ್ಟಿ ಟ್ಯಾಕ್ಸ್ ವ್ಯಾಪ್ತಿಗೆ ಬಾರದ ಆಸ್ತಿಗಳನ್ನು ತೆರಿಗೆ ಜಾಲಕ್ಕೆ ತರುವ ಉದ್ದೇಶಗಳಿಂದ ಇ–ಖಾತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈಗ ಆಸ್ತಿದಾರರು ಕಚೇರಿಗಳಿಗೆ ಅಲೆಯದೇ, ಮನೆಯಲ್ಲೇ ಕುಳಿತು ಇ–ಖಾತಾ ಪಡೆಯುವ ಅವಕಾಶ ದೊರೆತಿದೆ.
ಇ–ಖಾತಾ ಪಡೆಯಲು ಮಾಲೀಕರ ಭಾವಚಿತ್ರ ಮತ್ತು ಆಧಾರ್, ಆಸ್ತಿ ತೆರಿಗೆ ಎಸ್‌ಎಎಸ್ ಚಲನ್ ಸಂಖ್ಯೆ, ನೋಂದಾಯಿತ ಕ್ರಯಪತ್ರ ಸಂಖ್ಯೆ, ವಿದ್ಯುತ್ ಆರ್‌ಆರ್ ಸಂಖ್ಯೆ, ಆಸ್ತಿಯ ಫೋಟೋ, ಇಸಿ ದಾಖಲೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಇದರಿಂದ ಸಾರ್ವಜನಿಕರ ಆಸ್ತಿ ದಾಖಲೆಗಳು ಇನ್ನಷ್ಟು ಸುರಕ್ಷಿತವಾಗಲಿವೆ ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.
ಕರ್ನಾಟಕ ಸರ್ಕಾರ ಮೊದಲು ಬೆಂಗಳೂರಿನಲ್ಲಿ ಆರಂಭಿಸಿದ್ದ ಇ–ಖಾತಾ ಯೋಜನೆಯನ್ನು ಈಗ ರಾಜ್ಯದಾದ್ಯಂತ ವಿಸ್ತರಿಸಲಾಗಿದೆ. ನಗರಾಭಿವೃದ್ಧಿ ಸಚಿವ ಸುರೇಶ್ ಬಿ.ಎಸ್ ಅವರ ಮಾಹಿತಿ ಪ್ರಕಾರ, 45 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಕರಡು ದಾಖಲೆಗಳನ್ನು ಇ–ಆಸ್ತಿ ತಂತ್ರಾಂಶದಲ್ಲಿ ಪ್ರಕಟಿಸಲಾಗಿದೆ.
www.eaasthi.karnataka.gov.in ವೆಬ್‌ಸೈಟ್ ಮೂಲಕ ದಾಖಲೆ ಪರಿಶೀಲನೆ, ತಿದ್ದುಪಡಿ ಅರ್ಜಿ ಸಲ್ಲಿಕೆ ಮತ್ತು ಆನ್‌ಲೈನ್ ಶುಲ್ಕ ಪಾವತಿ ಮಾಡಬಹುದು. ಕೆ–1 ಕೇಂದ್ರಗಳಲ್ಲೂ ಈ ಸೇವೆ ಲಭ್ಯವಿದೆ.
ಇತ್ತ ಕಾವೇರಿ 2.0 ಮತ್ತು ಇ–ಸ್ವತ್ತು ತಂತ್ರಾಂಶಗಳ ನಡುವಿನ ತಾಂತ್ರಿಕ ಸಮಸ್ಯೆಗಳನ್ನು ಈಗಾಗಲೇ ಸರಿಪಡಿಸಲಾಗಿದೆ. ವಿಭಾಗಪತ್ರ ಮತ್ತು ದಾನಪತ್ರಗಳ ನೋಂದಣಿ ಎಂದಿನಂತೆ ನಡೆಯುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಇ–ಖಾತಾ ವಿಚಾರದಲ್ಲಿ ಬೆಂಗಳೂರು ಆಸ್ತಿದಾರರು ಎದುರಿಸುತ್ತಿದ್ದ ದೊಡ್ಡ ಸಮಸ್ಯೆಗೆ ಇದೀಗ ಸರ್ಕಾರ ಸ್ಪಷ್ಟ ಪರಿಹಾರ ನೀಡಿದೆ.
/filters:format(webp)/newsfirstlive-kannada/media/media_files/2026/01/28/gba-e-khatha-1-2026-01-28-17-47-05.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us