/newsfirstlive-kannada/media/media_files/2026/01/03/rajivgandhi-housing-corporation-2026-01-03-13-38-41.jpg)
ಬೆಂಗಳೂರಿನ ಕೋಗಿಲು ಒತ್ತುವರಿ ತೆರವು ಪ್ರಕರಣದಲ್ಲಿ ವಲಸಿಗರ ದಾಖಲೆಗಳ ಪರಿಶೀಲನೆಯೂ ಇನ್ನೂ ಮೂರು ನಾಲ್ಕು ದಿನಗಳ ಕಾಲ ನಡೆಯಲಿದೆ. ಸೋಮವಾರದ ನಂತರವಷ್ಟೇ ಯಾರಾರಿಗೆ ಮನೆ ಕೊಡಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತೆ. ಯಾವ ಮಾನದಂಡಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎನ್ನುವ ಗೊಂದಲ ಕೂಡ ಇದೆ. ಡಿಸಿ ನೇತೃತ್ವದಲ್ಲಿ ಇನ್ನೂ ದಾಖಲೆ ಪರಿಶೀಲನೆ ಮುಂದುವರಿಯುತ್ತಿದೆ.
ಜಿಲ್ಲಾಧಿಕಾರಿ ಪ್ಲ್ಯಾಟ್ ಪಡೆಯಲು ಅರ್ಹರಿರುವವರ ಪಟ್ಟಿ ಸಿದ್ದಪಡಿಸುತ್ತಾರೆ. ನಂತರ ಸಚಿವರು ಹಾಗೂ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಆ ಪಟ್ಟಿಯನ್ನು ಹಸ್ತಾಂತರ ಮಾಡಲಾಗುತ್ತೆ. ಅರ್ಹರ ಪಟ್ಟಿ ಕೊಟ್ಟ ನಂತರ ರಾಜೀವ್ ಗಾಂಧಿ ವಸತಿ ನಿಗಮದಿಂದ ಎಲ್ಲಾ ಮಾನದಂಡಗಳ ಪುನರ್ ಪರಿಶೀಲನೆ ಕೂಡ ನಡೆಯುತ್ತೆ. ಮಾನದಂಡಗಳ ಪ್ರಕಾರ ಪಟ್ಟಿಯ ಮರುಪರಿಶೀಲನೆ ಮಾಡಲಾಗುತ್ತೆ. ಅಳೆದು ತೂಗಿ ಎರಡ್ಮೂರು ಹಂತದಲ್ಲಿ ದಾಖಲೆ ಪರಿಶೀಲನೆ ಮಾಡಲಾಗುತ್ತೆ. ಬಳಿಕ ರಾಜೀವ್ ಗಾಂಧಿ ವಸತಿ ನಿಗಮದಿಂದ ಫೈನಲ್ ಪಟ್ಟಿ ಬಿಡುಗಡೆ ಮಾಡಲಾಗುತ್ತೆ. ಸೋಮವಾರದ ನಂತರವಷ್ಟೇ ಪಟ್ಟಿ ಫೈನಲ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಜನವರಿ 5 ನೇ ತಾರೀಖಿನವರೆಗೆ ಪಟ್ಟಿ ಫೈನಲ್ ಆಗೋದು ಕಷ್ಟ ಎಂದು ರಾಜೀವ್ ಗಾಂಧಿ ವಸತಿ ನಿಗಮದ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಇನ್ನೂ ಕೋಗಿಲು ಕ್ರಾಸ್ ಪ್ರದೇಶವು ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಸಚಿವ ಕೃಷ್ಣ ಭೈರೇಗೌಡ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಇಂದು ವಿದೇಶದಿಂದ ಸಚಿವ ಕೃಷ್ಣ ಭೈರೇಗೌಡ ಬೆಂಗಳೂರಿಗೆ ಆಗಮಿಸುವರು. ಬಳಿಕ ತಮ್ಮ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಗೆ ಶಾಸಕ ಕೃಷ್ಣ ಭೈರೇಗೌಡ ಅವರೇ ಅಧ್ಯಕ್ಷರು. ಹೀಗಾಗಿ ಕೃಷ್ಣ ಭೈರೇಗೌಡ ಅವರು ತಮ್ಮ ಕ್ಷೇತ್ರದ ಆಶ್ರಯ ಸಮಿತಿಯ ಸಭೆ ನಡೆಸಿ ವಸತಿ ರಹಿತರಿಗೆ ವಸತಿ ನೀಡಲು ಜಿಲ್ಲಾಡಳಿತ ಹಾಗೂ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಶಿಫಾರಸ್ಸು ಮಾಡಬೇಕು. ಹೀಗಾಗಿ ಈ ಬಗ್ಗೆ ಕೃಷ್ಣ ಭೈರೇಗೌಡ ಅವರು ಕ್ಷೇತ್ರದ ಆಶ್ರಯ ಸಮಿತಿಯ ಸಭೆ ನಡೆಸಬೇಕು, ಬಳಿಕವಷ್ಟೇ ಕೋಗಿಲು ಲೇಔಟ್ ವಲಸಿಗರಿಗೆ ಪ್ಲ್ಯಾಟ್ ನೀಡುವ ಪ್ರಕ್ರಿಯೆಗೆ ವೇಗ ಸಿಗುತ್ತೆ.
/filters:format(webp)/newsfirstlive-kannada/media/media_files/2026/01/03/rajivgandhi-housing-corporation-1-2026-01-03-13-39-52.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us