/newsfirstlive-kannada/media/media_files/2025/12/13/kiran-hebbar-threaten-dcm-dks-2025-12-13-14-50-19.jpg)
ಕಿರಣ್ ಹೆಬ್ಬಾರ್ ವರ್ಸಸ್ ಡಿಸಿಎಂ ಡಿಕೆಶಿ
ಅಪಾರ್ಟ್ ಮೆಂಟ್ ಅಸೋಸಿಯೇಷನ್ ಖಜಾಂಚಿ ಕಿರಣ್ ಹೆಬ್ಬಾರ್ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಖಜಾಂಚಿ ಕಿರಣ್ ಹೆಬ್ಬಾರ್ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಸಾರ್ವಜನಿಕವಾಗಿ ಸಿಡಿದೆದ್ದು ಮಾತನಾಡಿದ್ದಾರೆ.
ನನ್ನನ್ನು ಹೆದರಿಸಲು ಬರಬೇಡಿ.. ನಾನು ಯಾವನಿಗೂ ಹೆದರಲ್ಲ. ಕಿರಣ್ ಹೆಬ್ಬಾರ್ ಎನ್ನುವವರು ಪತ್ರ ಬರೆದಿದ್ದಾರೆ. ಕೆಲವರಿಗೆ ನಾನು ಯಾರು ಅನ್ನೋದೇ ಗೊತ್ತಿಲ್ಲ. ಆತ ಕಾಂಗ್ರೆಸ್ ಸರ್ಕಾರ ಕೆಲಸ ಮಾಡಿಲ್ಲ ಅಂತಾ ವಾರ್ನ್ ಮಾಡಿ ಪತ್ರ ಬರೆದಿದ್ದಾನೆ. ಬೇಸಿಕ್ ಕಾಮನ್ ಸೆನ್ಸ್ ಇಟ್ಕೊಂಡು ನನ್ನ ಹತ್ತಿರ ಡೀಲ್ ಮಾಡಬೇಕು. ನನಗೆ ವಾರ್ನ್ ಮಾಡೋದು, ಎಚ್ಚರಿಕೆ ಕೊಡೋದು ನಡೆಯಲ್ಲ . ಪ್ರಧಾನಿ, ಹೋಂ ಮಿನಿಸ್ಟರ್ ಗೆ ಹೆದರದೇ ಜೈಲಿಗೆ ಹೋದವನು ನಾನು. ಇವನು ಯಾರು ಹೆಬ್ಬಾರ್ ಗೆ ಹೆದರುತ್ತೀನಾ? ನಿಮ್ಮ ವಾರ್ನಿಂಗ್ ಗೆ ನಾವು ಹೆದರಲ್ಲ. ನಿಮಗೆ ಸರ್ವೀಸ್ ಗೆ ಮಾಡಿದ್ರೆ ನಾಲ್ಕು ವೋಟ್ ಬರುತ್ತೆ ಅಂತ ನಾವು ಕೆಲಸ ಮಾಡಿಲ್ಲವೇ. ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಂಡಿಲ್ವಾ? ಈ ಸರ್ಕಾರವನ್ನ ಹೆದರಿಸೋಕೆ ಬರಬೇಡಿ. ನಿಮ್ಮ ಸಮಸ್ಯೆ ಹೇಳಿಕೊಳ್ಳಿ, ನಿಮ್ಮ ಕೆಲಸ ಮಾಡಿಸಿಕೊಳ್ಳಿ.
ಬಿಜೆಪಿಗೆ ಹೆಚ್ಚು ವೋಟು ಬೆಂಗಳೂರಿನಲ್ಲಿ ತಾನೇ ಕೊಟ್ಟಿದ್ದು ? ಭ್ರಮೆ ಬೇಡ..ಬೆದರಿಕೆ ಹಾಕೋದು ನಮ್ಮ ಸರ್ಕಾರದ ವಿರುದ್ಧ ನಡೆಯಲ್ಲ . ನಾನು ನೇರ ದಿಟ್ಟವಾಗಿ ಮಾತಾನಾಡ್ತೀನಿ. ಬೇಜಾರ್ ಮಾಡಿಕೊಳ್ಳಬೇಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಾನು ನೇರವಾಗಿ, ದಿಟ್ಟವಾಗಿ ಮಾತಾಡಿದ್ದೇನೆ. ಏನು ಬೇಜಾರ್ ಮಾಡಿಕೊಳ್ಳುವ ಅಗತ್ಯ ಇಲ್ಲ..ನಾನು ತುಂಬಾ ಕಟುವಾಗಿ ಮಾತನಾಡಿದ್ದರೂ, ಮನಸ್ಪೂರ್ತಿಯಿಂದ ಕೆಲಸ ಮಾಡುತ್ತೇನೆ. ಯಾಕೆ ನಾವು ಗ್ಯಾರಂಟಿಗಳನ್ನ ಕೊಟ್ಟಿಲ್ಲವೇ? ಎಲ್ಲಾ ರಾಜ್ಯಗಳಲ್ಲೂ ನಮ್ಮ ಗ್ಯಾರಂಟಿಗಳದ್ದೇ ಮಾತು. ಯಾರು ಯಾರನ್ನೋ ಹೆದರಿಸಿದಂತೆ ನನ್ನತ್ರ ನಡೆಯಲ್ಲ. ನಾವೀರೋದೇ ನಿಮ್ಮ ಸೇವೆ ಮಾಡುವುದಕ್ಕಾಗಿ. ಅವನ್ಯಾರೋ ಹೆಬ್ಬಾರ್ ಅಂತೆ, ನನಗೆ ವಾರ್ನ್ ಕೊಡೋಕೆ ಮುನ್ನ ಹುಷಾರ್ . ನಿಮ್ಮನ್ನ ಈ ಸಭೆಗೆ ಕರೆಯಬೇಕು ಅಂತ ಯಾವ ನಿಯಮವೂ ಇಲ್ಲ . ಆದರೂ ನಿಮ್ಮನ್ನೆಲ್ಲಾ ಕರೆದು ಈಗ ಮಾತನಾಡುತ್ತಿದ್ದೇವೆ . ನಮ್ಮ ಗ್ಯಾರಂಟಿ ನಿಮಗೆ ತಲುಪಿಲ್ಲವೇ..? ನಮ್ಮ ಗ್ಯಾರಂಟಿ ಯೋಜನೆಗಳನ್ನ ಬಿಜೆಪಿ ತನ್ನ ರಾಜ್ಯಗಳಲ್ಲಿ ಜಾರಿ ಮಾಡುತ್ತಿದ್ದಾರೆ . ಇದನ್ನೆಲ್ಲಾ ನೀವು ಮೊದಲು ತಿಳಿದುಕೊಳ್ಳಿ, ಎಲ್ಲರನ್ನೂ ನಾವು ದೂಷಣೆ ಮಾಡುತ್ತಿಲ್ಲ. ನನ್ನ ಮೇಲೆ ವಿಶ್ವಾಸ ಇಟ್ಟು, ನೀವೆಲ್ಲಾ ಬಂದಿದ್ದೀರಿ . ನಾನು ಸಾವಿರಾರು ಅಪಾರ್ಟ್ಮೆಂಟ್ ಕಟ್ಟಿದ್ದೇನೆ, ಜಾಗ ಕೊಟ್ಟಿದ್ದೇನೆ. ನಮ್ಮ ಅಧಿಕಾರಿಗಳು ನಿಮಗೆ ಸಹಕರಿಸಲ್ಲ ಅಂದರೆ ಏನು ಮಾಡ್ತೀರಾ? ನಾವು ಸಹಾಯ ಮಾಡಿದ್ರು... ನನ್ನ ತಮ್ಮನ್ನ ಸೋಲಿಸಿದ್ದೀರಿ. ಅಪಾರ್ಟ್ ಮೆಂಟ್ ನಿವಾಸಿಗಳಿಗೆ ತುಂಬಾ ಕೆಲಸ ಮಾಡಿದ್ರು , ನೀವು ಕೈ ಹಿಡಿಯಲಿಲ್ಲ, ಸೋಲಿಸಿದ್ದೀರಿ. ನನ್ನ ತಮ್ಮನನ್ನು ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಲಕ್ಷದಲ್ಲಿ ಸೋಲಿಸಿದ್ದೀರಿ. ಆಗ ನೀವು ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ . ಆಗ ನನಗೆ ಅನ್ನಿಸಿತ್ತು, ಸುಮ್ಮನೆ ಯಾಕೆ ನಿಮಗೆಲ್ಲ ಸಹಾಯ ಮಾಡಬೇಕು ಎಂದು ಅನ್ನಿಸಿತ್ತು. ಆದರೆ ಕಳೆದ ಚುನಾವಣೆ ವೇಳೆ ನಾವು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದೇವೆ. ಹೀಗಾಗಿ ಈ ಅಪಾರ್ಟ್ ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ಕಾಯ್ದೆ ಚರ್ಚೆಗೆ ಕರೆಸಿದ್ದೇವೆ . ಎಲ್ಲವನ್ನು ಸಮಗ್ರವಾಗಿ ಚರ್ಚೆ ಮಾಡಿ, ವಿಧೇಯಕ ಮಂಡನೆ ಮಾಡಬೇಕಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/11/04/dk-shivakumar-2025-11-04-23-05-56.jpg)
ಇನ್ನೂ ಡಿ.ಕೆ.ಶಿವಕುಮಾರ್ ಅವರ ಮಾತುಗಳಿಗೆ ಸಂಬಂಧಿಸಿದಂತೆ ನ್ಯೂಸ್ ಫಸ್ಟ್ ಗೆ ಜೊತೆಗೆ ಕಿರಣ್ ಹೆಬ್ಬಾರ್ ಮಾತನಾಡಿದ್ದಾರೆ. ನಾನು ಡಿಕೆಶಿ ಅವರಿಗೆ ಯಾವುದೇ ರೀತಿಯ ಬೆದರಿಕೆ ಹಾಕಿಲ್ಲ . ಅಪಾರ್ಟ್ ಮೆಂಟ್ ಫೆಡರೇಶನ್ ವತಿಯಿಂದ ಒಂದಷ್ಟು ಆಗ್ರಹ ಮಾಡಿದ್ದೇನೆ . ಅಪಾರ್ಟ್ಮೆಂಟ್ ವಿಧೇಯಕ ಏಕೆ ವಿಳಂಬ ಆಯ್ತು ಅಂತ ಪ್ರಶ್ನೆ ಮಾಡಿದ್ದೇನೆ. ಪಾಲಿಕೆ ಚುನಾವಣೆ ಏಕೆ ನಿಧಾನ ಆಗಿದೆ ಅಂತ ಪ್ರಶ್ನೆ ಮಾಡಿದ್ದೇನೆ . ಈ ವಿಚಾರವನ್ನು ಡಿಕೆಶಿ ಅವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ . ಇನ್ನು ಮುಂದಕ್ಕೂ ಕೂಡ ನಮ್ಮ ಬೇಡಿಕೆಗಳಿಗೆ ಡಿಸಿಎಂ ಅವರು ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ. ನಾನೊಬ್ಬ ಕಾಮನ್ ಮ್ಯಾನ್. ಅವರೊಬ್ಬರು ಡಿಸಿಎಂ. ನಾನು ಜನರ ಪರವಾಗಿ ಮಾತಾಡಿದ್ದೇನೆ ಅಷ್ಟೇ ಎಂದು ಕಿರಣ್ ಹೆಬ್ಬಾರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us