/newsfirstlive-kannada/media/media_files/2025/09/22/drsudhakar-wife-2025-09-22-09-29-02.jpg)
ಡಾ.ಕೆ.ಸುಧಾಕರ್ ಹಾಗೂ ಪತ್ನಿ ಡಾ.ಪ್ರೀತಿ ಸುಧಾಕರ್
ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಹಾಲಿ ಸಂಸದ ಡಾ. ಕೆ ಸುಧಾಕರ್ ಪತ್ನಿ ಡಾ. ಪ್ರೀತಿ ಸುಧಾಕರ್​ಗೆ ಸೈಬರ್​ ಖದೀಮರು ವಂಚಿಸಿದ್ದಾರೆ. ಆರ್​ಬಿಐ ರೂಲ್ಸ್ ಪರಿಶೀಲನೆ ಮಾಡಿ 45 ನಿಮಿಷದಲ್ಲಿ ಹಣ ವಾಪಸ್​​ ಹಾಕೋದಾಗಿ ಹೇಳಿಕೊಂಡು, ವಂಚಕರು 14 ಲಕ್ಷ ರೂಪಾಯಿ ಅನ್ನು ಪ್ರೀತಿ ಅವರಿಂದ ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚನೆ ಎಸಗಿದ್ದಾರೆ.
ಆಗಿದ್ದೇನು?
ಹಾಲಿ ಸಂಸದ ಡಾ.ಕೆ ಸುಧಾಕರ್ ಪತ್ನಿ ಡಾ. ಪ್ರೀತಿ ಸುಧಾಕರ್​ಗೆ ಆಗಸ್ಟ್​​ 26 ರ ಬೆಳಗ್ಗೆ 9.30ಕ್ಕೆ ಸೈಬರ್​ ವಂಚಕರು ಕರೆ ಮಾಡಿದ್ದಾರೆ. ಈ ವೇಳೆ ಖದೀಮರು ನಾವು ಮುಂಬೈ ಸೈಬರ್ ಡಿಪಾರ್ಟ್ಮೆಂಟ್ ನಿಂದ ಮಾತನಾಡ್ತಿರೋದು. ನಿಮ್ಮ ದಾಖಲೆಗಳನ್ನ ಸದ್ಭತ್ ಖಾನ್ ಎಂಬ ಅಪರಿಚಿತ ಬಳಸಿಕೊಂಡಿದ್ದಾನೆ. ಅಲ್ಲದೇ ನಿಮ್ಮ ಹೆಸರಲ್ಲಿ ಕ್ರೆಡಿಟ್ ಕಾರ್ಡ್ ಮಾಡಿಸಿ ಆಕ್ರಮವಾಗಿ ಟ್ರಾನ್ಸಾಕ್ಷನ್ ನಡೆಸಿದ್ದಾನೆ ಅಂತ ಹೇಳಿದ್ದಾರೆ.
ಸದ್ಬತ್ ಖಾನ್​ನ ಅರೆಸ್ಟ್ ಮಾಡಲಾಗಿದ್ದು, ಆತನ ಹೇಳಿಕೆಯಲ್ಲಿ ನಿಮ್ಮ ಹೆಸರಿನ ದಾಖಲೆಯಿದೆ ಎಂದು ಹೇಳಿದ್ದಾರೆ. ನಿಮ್ಮ ದಾಖಲೆ ಹಾಗೂ ವೈಯಕ್ತಿಕ ದಾಖಲೆಗಳನ್ನು ರದ್ದು ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ನಿಮ್ಮ ಅಕೌಂಟ್ ಆಕ್ರಮ ಆಗಿದ್ದು ಹಣ ಹಾಕಿ ಎಂದು ಬೆದರಿಕೆ ಹಾಕಿದ್ದಾರೆ. ಇಷ್ಟಾದ ಬಳಿಕ ಸೈಬರ್​ ವಂಚಕರು ಆರ್​ಬಿಐ ರೂಲ್ಸ್ ಪರಿಶೀಲನೆ ಮಾಡಿ, 45 ನಿಮಿಷದಲ್ಲಿ ಹಣ ವಾಪಸ್ ಹಾಕೋದಾಗಿ ಹೇಳಿದ್ದಾರೆ, ನಮ್ಮ ಬ್ಯಾಂಕ್ ಖಾತೆಗೆ 14 ಲಕ್ಷ ರೂಪಾಯಿ ವರ್ಗಾವಣೆ ಮಾಡಿ ಎಂದು ಹೇಳಿದ್ದಾರೆ. ಇದನ್ನು ನಂಬಿ ಪ್ರೀತಿ ಸುಧಾಕರ್, ಸೈಬರ್ ವಂಚಕರು ಹೇಳಿದ ಬ್ಯಾಂಕ್ ಖಾತೆಗೆ 14 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ.
ಹಣವನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ, ನಂತರ ಪ್ರೀತಿ ಅವರಿಗೆ ವಂಚನೆಯಾಗಿರೋದು ದೃಢವಾಗಿದೆ. ಸದ್ಯ ಡಾ. ಪ್ರೀತಿ ಸುಧಾಕರ್ ದೂರಿನ ಮೇರೆಗೆ ಬೆಂಗಳೂರಿನ ಸೈಬರ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.
GST 2.0 ದೇಶದಾದ್ಯಂತ ಜಾರಿ.. ಯಾವ ವಸ್ತುವಿನಿಂದ ಎಷ್ಟು ರೂಪಾಯಿ ಉಳಿತಾಯ ಆಗಲಿದೆ..?