Advertisment

ಸಾಲ ಮಾಡಿ ಹಣ ಕಟ್ಟಿದ್ರೂ ಸಿಗಲೇ ಇಲ್ಲ ಗೃಹಭಾಗ್ಯ! : ರಾಜೀವ್ ಗಾಂಧಿ ವಸತಿ ನಿಗಮದ ವಿರುದ್ಧ ಸಿಡಿದೆದ್ದ ಫಲಾನುಭವಿಗಳು

ರಾಜೀವ್ ಗಾಂಧಿ ವಸತಿ ನಿಗಮದ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಪ್ಲ್ಯಾಟ್ ಪಡೆಯಲು ಜನರು ನಿಗಮಕ್ಕೆ ಹಣ ಕೊಟ್ಟಿದ್ದಾರೆ. ನಿವೇಶನ, ಪ್ಲ್ಯಾಟ್ ನೀಡುವುದಾಗಿ ರಾಜೀವ್ ಗಾಂಧಿ ವಸತಿ ನಿಗಮ ಹೇಳಿತ್ತು. ಆದರೇ, 3-4 ವರ್ಷ ಕಳೆದರೂ, ನಿವೇಶನ, ಪ್ಲ್ಯಾಟ್ ನೀಡಿಲ್ಲ. ಹೀಗಾಗಿ ಜನರು ಪ್ರತಿಭಟನೆ ನಡೆಸಿದ್ದಾರೆ.

author-image
Chandramohan
demanding for Housing board site and house
Advertisment
  • 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಹಣ ಕಟ್ಟಿದ್ದ ಜನರು
  • 3-4 ವರ್ಷ ಕಳೆದರೂ, ಸಿಗದ ಪ್ಲ್ಯಾಟ್, ನಿವೇಶನ
  • ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ

ಸ್ವಂತ ಮನೆ ಮಾಡ್ಬೇಕು ಅನ್ನೋದು ಅವ್ರೆಲ್ಲರ ಕನಸಾಗಿತ್ತು.. ಸಾಲಸೋಲ ಮಾಡಿ ಲಕ್ಷ ಲಕ್ಷ ಹಣ ಕಟ್ಟಿದ್ರು. ಇನ್ನೇನೂ ಫ್ಲ್ಯಾಟ್ ರೆಡಿಯಾಗುತ್ತೆ, ಕೊಟ್ಟೇ ಬಿಡ್ತಾರೆ ಅಂತ ಕಾಯ್ತಿದ್ದವರಿಗೆ ಮನೆನೂ ಇಲ್ಲ, ಕಾಸೂ ಇಲ್ಲ... ತಾಳ್ಮೆ ಕಳೆದುಕೊಂಡವರು ಇವತ್ತು ರಾಜೀವ್ ಗಾಂಧಿ ವಸತಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ರು. ಈ ಕುರಿತು ಒಂದು ವರದಿ ಇಲ್ಲಿದೆ...

Advertisment

ಸಾಲ ಮಾಡಿ ಹಣ ಕಟ್ಟಿದ್ರೂ ಸಿಗಲೇ ಇಲ್ಲ ಗೃಹಭಾಗ್ಯ..!

ರಾಜೀವ್ ಗಾಂಧಿ ವಸತಿ ನಿಗಮದ ವಿರುದ್ಧ ಸಿಡಿದೆದ್ದ ಫಲಾನುಭವಿಗಳು

ಕಚೇರಿಯ ಮುಂದೆ ಪ್ರತಿಭಟನೆ..! ಕಚೇರಿಗೆ ನುಗ್ಗಿ ಆಕ್ರೋಶ..!

ಇವರೆಲ್ಲಾ,  ರಾಜೀವ್ ಗಾಂಧಿ ವಸತಿ ನಿಗಮದ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಮನೆಗಾಗಿ ಅರ್ಜಿ ಸಲ್ಲಿಸಿದವ್ರು.  ಮನೆ ಸಿಗುತ್ತೆ ಅನ್ನೋ ಭರವಸೆಯಿಂದ ಸಾಲಸೋಲ ಮಾಡಿ ಹಣ ಕಟ್ಟಿದ್ದಾರೆ... ಆ ಕಡೆ ಫ್ಲ್ಯಾಟ್ ಗಳು ರೆಡಿ ಇದೆ.. ಆದ್ರೆ, ಫ್ಲ್ಯಾಟ್ ಹಂಚಿಕೆ ಮಾತ್ರ ಆಗ್ತಿಲ್ಲ... ಹಾಗಾಗಿ, ಕಾದು ಕಾದು ರೊಚ್ಚಿಗೆದ್ದ ಅರ್ಜಿದಾರರು ಇಂದು ಬೆಂಗಳೂರಿನ ಕೆಜಿ ರಸ್ತೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ರು... ಮನೆ ಕೊಡುವ ತನಕ ಇಲ್ಲಿಂದ ಹೋಗಲ್ಲ ಅಂತ ಪಟ್ಟು ಹಿಡಿದರು.
ದಾಸನಪುರ ಸಮೀಪದ ಪಿಳ್ಳಹಳ್ಳಿ, ಮಹಾದೇವಪುರದ ಬಿದರಹಳ್ಳಿ, ಆನೇಕಲ್‌ ನ ಗೂಳಿಮಂಗಳ ಬಳಿಯಿದ್ದ ನಿವೇಶನಗಳಿಗೆ ಮೂರ್ನಾಲ್ಕು ವರ್ಷಗಳ ಹಿಂದೆ ಅರ್ಜಿ  ಸಲ್ಲಿಸಿ, ಪೂರ್ತಿ ಹಣ ಕಟ್ಟಿದ್ರೂ ನಿವೇಶನಗಳನ್ನ ನೀಡಿಲ್ಲ. 1BHK ನಿವೇಶನಕ್ಕೆ ಏಳುವರೆ ಲಕ್ಷ ಹಣ ಕಟ್ಟಿದ್ರೂ ಇದೀಗ ಅಧಿಕಾರಿಗಳು ಮನೆಗಳನ್ನ ನೀಡಿಲ್ಲ. ತಾಳ್ಮೆ ಕಳೆದುಕೊಂಡ ಅಜಿದಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ, ಕಚೇರಿಗೆ ನುಗ್ಗಿದ್ರು. ಪೊಲೀಸರೊಂದಿಗೆ ವಾಗ್ವಾದ ನಡೆದು, ಮನವೊಲಿಕೆಯ ಬಳಿಕ ಕಚೇರಿಯಿಂದ ಹೊರ ಬಂದ್ರು. ಕೆಲಕಾಲ ಹೈಡ್ರಾಮವೇ ನಡೆಯಿತು..
ಪ್ರತಿಭಟನೆಯ ವೇಳೆ ಓರ್ವ ಮಹಿಳೆ ಕಣ್ಣೀರು ಹಾಕಿದ್ರು.  ಮತ್ತೊಬ್ಬರು ಮನೆ ಸಿಕ್ಕಿಲ್ಲ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ತೇನೆ ಅಂತ ಎಚ್ಚರಿಕೆ‌ ಕೊಟ್ಟರು. ವಯಸ್ಸಾದವರು, ಆಟೋ ಚಾಲಕರು ಹೀಗೆ ಬಡ ವರ್ಗದವರೇ ಹಣ ಹೊಂದಿಸಿ ಕನಸಿನ ಮನೆ ತೊಗೊಬೇಕು ಅಂತ ಅಂದುಕೊಂಡವ್ರಿಗೆ ಮನೆಯೂ ಇಲ್ಲ. ಕಟ್ಟಿದ ಹಣವೂ ಸಿಗದೇ ಪರದಾಡ್ತಿದ್ದಾರೆ.
ಸ್ವಂತ ಮನೆ ಇಲ್ಲದವರಿಗಾಗಿಯೇ ಒಂದು ಲಕ್ಷ ಬಹುಮಹಡಿ ಯೋಜನೆ ತಂದಿದ್ದಾರೆ... ದುಡ್ಡು ಕಟ್ಟಿಸಿಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಮನೆ ನೀಡಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ.. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣಕ್ಕೆ ನಿವೇಶನಗಳನ್ನ ನೀಡುವ ಪ್ರಯತ್ನ ಮಾಡಬೇಕಿದೆ..

ಭರತ್ ಕೃಷ್ಣಪ್ಪ
ನ್ಯೂಸ್ ಫಸ್ಟ್ 
ಬೆಂಗಳೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Housing Demand
Advertisment
Advertisment
Advertisment