/newsfirstlive-kannada/media/media_files/2025/11/08/if-not-given-garbage-gba-plans-to-fine-them-1-2025-11-08-14-28-57.jpg)
ಬೆಂಗಳೂರಿನಲ್ಲಿ ಪಾಲಿಕೆ ಟ್ರಕ್‌ಗೆ ಕಸ ನೀಡದವರಿಗೆ ದಂಡ ವಿಧಿಸಲು ನಿರ್ಧಾರ
ಬೆಂಗಳೂರಿನಲ್ಲಿ ರಸ್ತೆ ಬದಿ ಕಸ ಎಸೆದವರನ್ನು ಈಗಾಗಲೇ ಗ್ರೇಟರ್ ಬೆಂಗಳೂರು ಅಥಾರಿಟಿ ಅಧಿಕಾರಿಗಳು ಪತ್ತೆ ಹಚ್ಚಿ ಅವರ ಮನೆ ಮುಂದೆ ಅದೇ ಕಸವನ್ನು ಸುರಿದಿದ್ದಾರೆ. ಈಗ ಜನರ ಮನೆಯ ಮುಂದೆ ಕಸ ಸುರಿಯುವುದನ್ನು ನಿಲ್ಲಿಸಲು ಗ್ರೇಟರ್ ಬೆಂಗಳೂರು ಅಥಾರಿಟಿ ನಿರ್ಧರಿಸಿದೆ.
ಕಸ ಸುರಿಯುವುದಕ್ಕೆ ಪೌರ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಕಸ ಎತ್ತುವುದರ ಜೊತೆಗೆ ಈ ಕಸ ಸುರಿಯುವ ಕೆಲಸವನ್ನು ಮಾಡಬೇಕು. ಬಳಿಕ ಮನೆ ಮಾಲೀಕರು ದಂಡ ಕಟ್ಟಿದ ಬಳಿಕ ಆ ಕಸವನ್ನು ನಾವೇ ಎತ್ತಿ ಟ್ರಕ್ ಗೆ ಹಾಕಬೇಕು. ಇದು ಡಬಲ್ ಕೆಲಸ ಆಗುತ್ತೆ . ಹೀಗೆ ಕಸ ಸುರಿಯುವುದು ಬೇಡ ಅಂತ ಬೆಂಗಳೂರು ಜನರು ಹಾಗೂ ಪೌರ ಕಾರ್ಮಿಕರು ವಿರೋಧಿಸಿದ್ದರು.
ಇದರಿಂದಾಗಿ ಈಗ ಗ್ರೇಟರ್ ಬೆಂಗಳೂರು ಅಥಾರಿಟಿ ಪ್ರತಿ ನಿತ್ಯ ಕಸ ಕೊಡದೇ ಇರುವವರನ್ನು ಪತ್ತೆ ಹಚ್ಚಿ ಅಂಥವರಿಗೆ ದಂಡ ವಿಧಿಸಲು ನಿರ್ಧರಿಸಿದೆ. ಮನೆಯ ಕಸವನ್ನು ಬೆಳಿಗ್ಗೆ ಬಂದ ಜಿಬಿಎ ಟ್ರಕ್‌ಗೆ ಕೊಡದೇ ಇದ್ದರೇ ಅಂಥವರಿಗೆ ದಂಡ ವಿಧಿಸಲಾಗುತ್ತೆ. ಗ್ರೇಟರ್ ಬೆಂಗಳೂರು ಅಥಾರಿಟಿಯ ಟ್ರಕ್‌ಗೆ ಕಸ ಕೊಡದವರು ಅದನ್ನು ಬೇರೆಡೆ ತೆಗೆದುಕೊಂಡು ಹೋಗಿ ಎಸೆಯುತ್ತಾರೆ ಎಂದೇ ಅರ್ಥ. ಹೀಗಾಗಿ ಕಸ ಕೊಡದೇ ಇದ್ದರೇ, ದಂಡದ ಅಸ್ತ್ರ ಪ್ರಯೋಗಿಸಲು ಜಿಬಿಎ ನಿರ್ಧರಿಸಿದೆ.
ಮನೆಯ ಕಸವನ್ನು ಕಡ್ಡಾಯವಾಗಿ ನೀಡಲೇಬೇಕೆಂದು ಜನರಿಗೆ ಜಿಬಿಎ ತಾಕೀತು ಮಾಡಿದೆ.
/filters:format(webp)/newsfirstlive-kannada/media/media_files/2025/11/08/if-not-given-garbage-gba-plans-to-fine-them-2025-11-08-14-29-39.jpg)
ಅದು ಒಣ ಕಸ.. ಹಸಿ ಕಸ ಅಂತ ಬೇರ್ಪಡಿಸಿ ಕೊಡಬೇಕು. ಯಾರು ಕಸವನ್ನು ಮನೆಯಿಂದ ಕೊಡಲ್ಲ ಎಂಬುದರ ಮೇಲೂ ಜಿಬಿಎ ನಿಗಾ ಇಡಲಿದೆ. ಕಸ ಕೊಡಲಿಲ್ಲ ಅಂದರೇ, ಕಾನೂನು ಪ್ರಕಾರ ಕ್ರಮದ ಜೊತೆಗೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಗುತ್ತಿದೆ. ನಮ್ಮ ಮನೆಯಲ್ಲಿ ಕಸ ಇಲ್ಲ ಎನ್ನುವುದನ್ನು ದೃಢಪಡಿಸಿದರೇ, ಮಾತ್ರವೇ ದಂಡದಿಂದ ಮುಕ್ತಿ ಸಿಗಲಿದೆ ಎಂದು ಗ್ರೇಟರ್ ಬೆಂಗಳೂರು ಅಥಾರಿಟಿ ಅಧಿಕಾರಿಗಳು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us