ಸಿ.ಜೆ.ರಾಯ್ ಸಾವಿನ ಎಕ್ಸ್ ಕ್ಲ್ಯೂಸಿವ್ ಮಾಹಿತಿ : ಡೆತ್ ನೋಟ್ ಬರೆದಿಟ್ಟಿರುವ ಸಿ.ಜೆ.ರಾಯ್‌!

ಕಾನ್ಪಿಡೆಂಟ್ ಗ್ರೂಪ್ ಚೇರ್ ಮೆನ್ ಸಿ.ಜೆ.ರಾಯ್ ಸಾವಿನ ಎಕ್ಸ್ ಕ್ಲ್ಯೂಸಿವ್ ಮಾಹಿತಿ ನ್ಯೂಸ್ ಫಸ್ಟ್ ಗೆ ಲಭ್ಯವಾಗಿದೆ. ಸಿ.ಜೆ.ರಾಯ್ ಧೀಡೀರನೇ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ. ಇದರಲ್ಲಿ ಸಿ.ಜೆ.ರಾಯ್ ಆತ್ಮಹತ್ಯೆಯ ಸೀಕ್ರೆಟ್ ಗಳೂ ಇವೆ.

author-image
Chandramohan
cj roy (1)

ಡೆತ್ ನೋಟ್ ಬರೆದಿಟ್ಟಿರುವ ಸಿ.ಜೆ.ರಾಯ್

Advertisment
  • ಡೆತ್ ನೋಟ್ ಬರೆದಿಟ್ಟಿರುವ ಸಿ.ಜೆ.ರಾಯ್
  • ಡೆತ್ ನೋಟ್ ನಲ್ಲಿ ಸಾವಿನ ಕಾರಣ, ಬ್ಯುಸಿನೆಸ್ ಸಂಕಷ್ಟದ ಉಲ್ಲೇಖ
  • ಡೆತ್ ನೋಟ್ ನಲ್ಲಿ ಸಿ.ಜೆ.ರಾಯ್ ಹೇಳಿದ್ದೇನು?


ಮೊನ್ನೆ ಬೆಂಗಳೂರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕಾನ್ಪಿಡೆಂಟ್ ಗ್ರೂಪ್ ಚೇರ್ ಮೆನ್ ಸಿ.ಜೆ.ರಾಯ್ ಡೆತ್ ನೋಟ್ ಬರೆದಿಟ್ಟಿರುವ ಅಂಶ ಈಗ ಬೆಳಕಿಗೆ ಬಂದಿದೆ.  ಸಿ.ಜೆ.ರಾಯ್ ಡೆತ್ ನೋಟ್‌ ಅಂಶಗಳು ಎಕ್ಸ್ ಕ್ಲೂಸಿವ್ ಆಗಿ ನ್ಯೂಸ್ ಫಸ್ಟ್ ಗೆ ಲಭ್ಯವಾಗಿವೆ.  ಡೆತ್ ನೋಟ್ ನಲ್ಲಿ ಸಿ.ಜೆ.ರಾಯ್ ಆತ್ಮಹತ್ಯೆಯ ರಹಸ್ಯ ಅಡಗಿದೆ.  
ಡೆತ್ ನೋಟ್ ನಲ್ಲಿರುವ ಅಂಶಗಳು ಸಾವಿನ ರಹಸ್ಯವನ್ನು ಬಯಲಿಗೆ ಎಳೆಯಲು ಪೊಲೀಸರಿಗೂ ಸಹಕಾರಿಯಾಗಿವೆ. ಹಾಗಾದರೇ, ಡೆತ್ ನೋಟ್ ನಲ್ಲಿ ಸಿ.ಜೆ.ರಾಯ್ ಏನು ಬರೆದಿದ್ದಾರೆ ಅಂತ ನೋಡಿದರೇ, ಸಿ.ಜೆ.ರಾಯ್ ಅನೇಕ ಅಂಶಗಳನ್ನು ಡೆತ್ ನೋಟ್ ನಲ್ಲಿ  ಬರೆದಿದ್ದಾರೆ. 

ಮೊದಲನೇಯದಾಗಿ ತಮ್ಮ ಡೆತ್ ನೋಟ್ ನಲ್ಲಿ ಸಿ.ಜೆ.ರಾಯ್ ಆತ್ಮಹತ್ಯೆಗೆ ಶರಣಾಗುತ್ತಿರುವುದಕ್ಕೆ ತಮ್ಮ ಕುಟುಂಬಸ್ಥರಿಗೆ ಕ್ಷಮೆ ಕೇಳಿದ್ದಾರೆ.  ನಾನು EXTREEME STEP ತೆಗೆದುಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ. ನನ್ನನ್ನು ಕ್ಷಮಿಸಿ ಎಂದು ಕುಟುಂಬಸ್ಥರಿಂದ ಕ್ಷಮೆ ಕೇಳಿದ್ದಾರೆ. ಜೊತೆಗೆ ತಮಗೆ ಯಾಱರಿಂದ ಎಷ್ಟೆಷ್ಟು ಹಣ ಬರಬೇಕು ಎಂಬ ವಿವರವನ್ನು ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಇನ್ನೂ ತಮ್ಮ ಸಾವಿನ ನಂತರ ತಮ್ಮ ವ್ಯವಹಾರವನ್ನು ಯಾರು ನೋಡಿಕೊಳ್ಳಬೇಕು ಎಂಬುದನ್ನು ಉಲ್ಲೇಖಿಸಿದ್ದಾರೆ. ತಮ್ಮ ಉದ್ಯಮ, ವ್ಯವಹಾರದ ಉತ್ತರಾಧಿಕಾರಿಗಳು ಯಾರಾಗಬೇಕು ಎಂಬುದನ್ನು ಸ್ಪಷ್ಟವಾಗಿ  ಉಲ್ಲೇಖಿಸಿದ್ದಾರೆ. ಈ ಹಿಂದಿನಿಂದಲೂ ಕಾನ್ಪಿಡೆಂಟ್ ಗ್ರೂಪ್ ಜೊತೆ ಇದ್ದವರನ್ನು ಯಾವುದೇ ಕಾರಣಕ್ಕೂ ಇನ್ನೂ ಮುಂದೆ ಕೈ ಬಿಡಬಾರದು. ಅವರನ್ನು ಜೊತೆಯಲ್ಲೇ ಇಟ್ಟುಕೊಳ್ಳಬೇಕು. ಅವರೆಲ್ಲಾ ನಂಬಿಕಸ್ಥ ವ್ಯಕ್ತಿಗಳು ಎಂದು ಡೆತ್ ನೋಟ್ ನಲ್ಲಿ ಸಿ.ಜೆ.ರಾಯ್ ಉಲ್ಲೇಖಿಸಿದ್ದಾರೆ.  


ಸಿ.ಜೆ.ರಾಯ್ ಸಾವಿನ ಕೇಸ್ ತನಿಖೆಗೆ ನೇಮಕವಾಗಿರುವ ಎಸ್‌ಐಟಿ ಅಧಿಕಾರಿಗಳು ಈಗ ಡೆತ್ ನೋಟ್ ಅನ್ನು ಪರಿಶೀಲಿಸುತ್ತಿದ್ದಾರೆ.  ಇದರ ಆಧಾರದ ಮೇಲೆ ಸಿ.ಜೆ.ರಾಯ್ ಪತ್ನಿ, ಮಕ್ಕಳಿಂದ ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. 


ಈ ಹಿಂದೆಯೂ ಕೆಲವೊಮ್ಮೆ ತಮಗೆ ಸಾವು ಎದುರಾದರೇ, ತಾವು ಯಾಱರಿಗೆ ಎಷ್ಟು ಹಣ ಕೊಟ್ಟಿದ್ದೇನೆ ಎಂಬ ಮಾಹಿತಿಯನ್ನು ತಮ್ಮ ಪತ್ನಿಗೆ ಸಿ.ಜೆ.ರಾಯ್ ನೀಡಿದ್ದಾರಂತೆ. ಇದನ್ನು ಇತ್ತೀಚೆಗೆ ಯೂ ಟ್ಯೂಬ್ ಸಂದರ್ಶನದಲ್ಲೂ ಸಿ.ಜೆ.ರಾಯ್ ಹೇಳಿಕೊಂಡಿದ್ದರು.  ಹೀಗಾಗಿ ಸಿ.ಜೆ.ರಾಯ್ ಹಣಕಾಸಿನ ವಿವರ, ಬ್ಯುಸಿನೆಸ್ ಸೀಕ್ರೆಟ್ ಗಳು ಹೆಚ್ಚಾಗಿ ಅವರ ಪತ್ನಿಗೆ ತಿಳಿದಿದೆ. ಹೀಗಾಗಿ ಅಂತ್ಯಸಂಸ್ಕಾರ ಮುಗಿದ ಬಳಿಕ ಸಿ.ಜೆ.ರಾಯ್ ಪತ್ನಿಯಿಂದ ಹೆಚ್ಚಿನ ವಿವರಗಳನ್ನು ಎಸ್‌ಐಟಿ ಅಧಿಕಾರಿಗಳು ಪಡೆಯಲು ಸಜ್ಜಾಗಿದ್ದಾರೆ.

SIT Formed to investigate cj roy death case

ಎಸ್‌ಐಟಿ ಮುಖ್ಯಸ್ಥ ವಂಶಿಕೃಷ್ಣ ಹಾಗೂ ಡಿಸಿಪಿ ಲೋಕೇಶ್ ಜಗಲಾಸರ್‌ ರಿಂದ ಕೇಸ್ ತನಿಖೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CJ Roy CJ ROY NET WORTH CJ ROY DEATH NOTE SECRETS
Advertisment