/newsfirstlive-kannada/media/media_files/2025/11/06/sharanappa-kurubanal-extortion-rocket-2025-11-06-15-40-25.jpg)
ವಿದ್ಯುತ್​​​ ಗುತ್ತಿಗೆದಾರ ಶರಣಪ್ಪ ಕುರಬನಾಳ ವಿರುದ್ಧ FIR ದಾಖಲಾಗಿದೆ. ಶರಣಪ್ಪನ ವಸೂಲಿ ದಂಧೆಗೆ ಲೋಕಾಯುಕ್ತ ಅಧಿಕಾರಿಗಳು ಬ್ರೇಕ್​​ ಹಾಕಿದ್ದಾರೆ. ನ್ಯೂಸ್​ಫಸ್ಟ್​ ವರದಿ ಬೆನ್ನಲ್ಲೇ ಶರಣಪ್ಪ ಕುರಬನಾಳ ವಿರುದ್ಧ ಲೋಕಾಯುಕ್ತಕ್ಕೆ ಕಾಂಟ್ರಾಕ್ಟರ್ಸ್​ ದೂರು ನೀಡಿದ್ದರು. ನ್ಯೂಸ್​ಫಸ್ಟ್​​ ವರದಿ ಮತ್ತು ದೂರು ಪರಿಶೀಲಿಸಿ FIR ಅನ್ನು ಲೋಕಾಯುಕ್ತ ಅಧಿಕಾರಿಗಳು ದಾಖಲಿಸಿದ್ದಾರೆ. ಶರಣಪ್ಪ ಕುರಬನಾಳ ವಿರುದ್ಧ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದೆ.
FIR ಬೆನ್ನಲ್ಲೇ ಶರಣಪ್ಪನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಲು ಲೋಕಾಯುಕ್ತ ಅಧಿಕಾರಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಶರಣಪ್ಪನ ವಸೂಲಿ ದಂಧೆ ಬಗ್ಗೆ ವಿಸ್ತೃತವಾಗಿ ನ್ಯೂಸ್ ಫಸ್ಟ್ ವರದಿ ಪ್ರಸಾರ ಮಾಡಿತ್ತು.
ಸಮಾಜಸೇವೆಯ ಮುಖವಾಡ ಧರಿಸಿ, ಬೆಸ್ಕಾಂ ಅಧಿಕಾರಿಗಳಿಂದ ಶರಣಪ್ಪ ವಸೂಲಿ ಮಾಡುತ್ತಿದ್ದ. ಶರಣಪ್ಪನ ಅಸಲಿ ಮುಖವಾಡವನ್ನು ನ್ಯೂಸ್ ಫಸ್ಟ್ ಕಳಚಿಟ್ಟಿತ್ತು. ಅಕ್ಟೋಬರ್​​ 27 ಮತ್ತು ಅಕ್ಟೋಬರ್​​ 30 ರಂದು ಶರಣಪ್ಪನ ವಸೂಲಿ ದಂಧೆ ಬಗ್ಗೆ ನ್ಯೂಸ್ ಫಸ್ಟ್ ಸುದ್ದಿ ಪ್ರಸಾರ ಮಾಡಿತ್ತು.
ನ್ಯೂಸ್​ಫಸ್ಟ್​ ವರದಿ ಪ್ರಸಾರ ಆಗಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಲೋಕಾಯುಕ್ತ ಅಧಿಕಾರಿಗಳು ಆ ಬಳಿಕ ಲೋಕಾಯುಕ್ತ ಹೆಸರು ದುರ್ಬಳಕೆ ಮತ್ತು ಬೆದರಿಸಿ ಹಣ ವಸೂಲಿ ಹಿನ್ನಲೆಯಲ್ಲಿ ಆಲರ್ಟ್ ಆದರು.
ಭಾರತೀಯ ನ್ಯಾಯ ಸಂಹಿತೆ BNS 2023 (U/s-308(2), 308(3) ಅಡಿ FIR ದಾಖಲಾಗಿದೆ. ಶರಣಪ್ಪ ವಸೂಲಿ ದಂಧೆಯ ಆಡಿಯೋ, ವಿಡಿಯೋಗಳ ನೈಜತೆ ಪರಿಶೀಲನೆಯನ್ನು ಲೋಕಾಯುಕ್ತ ಅಧಿಕಾರಿಗಳು ನಡೆಸುವರು. ಆಡಿಯೋ, ವಿಡಿಯೋಗಳು ಪ್ರೂವ್ ಆದ್ರೆ ಶರಣಪ್ಪನಿಗೆ ಜೈಲೇ ಗತಿ.
BNS 2023 (U/s-308(2), 308(3) ಕಾಯ್ದೆ ಅಡಿ 2 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶ ಇದೆ. ಜೈಲು ಶಿಕ್ಷೆ ಮತ್ತು ದಂಡ ಎರಡೂ ವಿಧಿಸಲು ಅವಕಾಶ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us