Advertisment

ಬೆಂಗಳೂರಿನ ಶಾಲಾ ಕಾಲೇಜುಗಳಲ್ಲಿ ಹುಸಿ ಬಾಂಬ್ ಬೆದರಿಕೆ ಮೇಲ್ ಕೇಸ್‌: ಆರೋಪಿ ಬಂಧಿಸಿದ ಪೊಲೀಸರು, ಆರೋಪಿ ಹಿನ್ನಲೆ ಏನು ಗೊತ್ತಾ?

ಬೆಂಗಳೂರಿನ ಶಾಲಾ ಕಾಲೇಜುಗಳಿಗೆ ಹುಸಿ ಬಾಂಬ್ ಇ ಮೇಲ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಗುಜರಾತ್ ನಲ್ಲಿದ್ದ ಆರೋಪಿ ರೇನೆ ಜೋಶಿಲಾದಳನ್ನು ಬಾಡಿ ವಾರಂಟ್ ಮೇಲೆ ಬೆಂಗಳೂರಿಗೆ ಕರೆ ತಂದಿದ್ದಾರೆ. ಈಕೆಯ ಹಿನ್ನಲೆಯೇ ರೋಚಕ.

author-image
Chandramohan
ಪ್ರೇಮ ವೈಫಲ್ಯದಿಂದ ಪ್ರೇಮಿ ವಿರುದ್ಧ ಸೇಡು.. ತನಿಖೆ ವೇಳೆ ಅಸಲಿ ವಿಚಾರ ತಿಳಿದು ಬೆಚ್ಚಿಬಿದ್ದ ಪೊಲೀಸರು

ರೇನೆ ಜೋಶಿಲಾದ ಬಂಧಿಸಿ ಬೆಂಗಳೂರಿಗೆ ಕರೆ ತಂದ ಪೊಲೀಸರು!

Advertisment
  • ರೇನೆ ಜೋಶಿಲಾದ ಬಂಧಿಸಿ ಬೆಂಗಳೂರಿಗೆ ಕರೆ ತಂದ ಪೊಲೀಸರು!
  • ರೇನೆ ಜೋಶಿಲಾದ ವಿರುದ್ಧ ಬೆಂಗಳೂರಿನಲ್ಲಿ 7 ಕೇಸ್ ದಾಖಲು
  • ಬೆಂಗಳೂರಿನ ಶಾಲಾ ಕಾಲೇಜುಗಳಿಗೆ ಹುಸಿ ಬಾಂಬ್ ಮೇಲ್ ಮಾಡಿದ್ದ ಖತರನಾಕ್ ಲೇಡಿ

ಬೆಂಗಳೂರಿನ ಶಾಲಾ ಕಾಲೇಜುಗಳಿಗೆ ಹುಸಿ ಬಾಂಬ್ ಇ ಮೇಲ್ ಮಾಡುತ್ತಿದ್ದ ಮಹಿಳೆಯನ್ನು  ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಈ ಹಿಂದೆ ಗುಜರಾತ್ ರಾಜ್ಯದ ಅನೇಕ ಸ್ಥಳಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇ ಮೇಲ್ ಮಾಡಿದ್ದಳು. ಆಕೆಯನ್ನು ಈ ಹಿಂದೆಯೇ  ಗುಜರಾತ್ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದರು. ಈಗ ಗುಜರಾತ್ ಪೊಲೀಸರಿಂದ ಬಾಡಿ ವಾರೆಂಟ್ ಮೇಲೆ ಆರೋಪಿ ಮಹಿಳೆ ರೇನೆ ಜೋಶಿಲಾದಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ರೇನೆ ಜೋಶಿಲಾದ , ಚೆನ್ನೈನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದರು. ಆದರೇ, ಕಂಪನಿಯಲ್ಲಿ ಓರ್ವ ಸಹೋದ್ಯೋಗಿಯನ್ನು ಪ್ರೀತಿಸುತ್ತಿದ್ದರು. ಆ ಸಹೋದ್ಯೋಗಿ ಈಕೆಯ ಪ್ರೀತಿಯನ್ನು ತಿರಸ್ಕರಿಸಿ, ಬೇರೊಬ್ಬರನ್ನು ವಿವಾಹವಾಗಿದ್ದರು. ಈ ಸಿಟ್ಟಿಗೆ ತನ್ನ ಒನ್ ಸೈಡ್ ಪ್ರೀತಿಯ ಲವ್ವರ್ ನನ್ನು ಕಾನೂನು ಸಂಕಷ್ಟದಲ್ಲಿ ಸಿಲುಕಿಸಲು ಆತನ ಹೆಸರಿನಲ್ಲೇ ಇ ಮೇಲ್ ಐ.ಡಿ. ಕ್ರಿಯೇಟ್ ಮಾಡಿ ಬಾಂಬ್ ಬೆದರಿಕೆ ಮೇಲ್ ಗಳನ್ನು ಕಳಿಸುತ್ತಿದ್ದಳು.  ಕರ್ನಾಟಕ, ಗುಜರಾತ್, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ಕಳಿಸಿದ್ದಳು. 
ಬೆಂಗಳೂರಿನ ಶಾಲೆಗಳಿಗೂ ಬಾಂಬ್ ಬೆದರಿಕೆಯ ಇ ಮೇಲ್ ಕಳಿಸಿದ್ದಳು. ಜೂನ್ 14 ರಂದು   ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಗೆ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಈ ಬಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಆ ಕೇಸ್ ಅನ್ನು  ಉತ್ತರ ವಿಭಾಗ ಸೈಬರ್ ಪೊಲೀಸ್ ಠಾಣೆಗೆ  ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವರ್ಗಾವಣೆ ಮಾಡಿದ್ದರು. ರೇನೆ ಜೋಶಿಲಾದ  VPN ,ಇಂಟರನೆಟ್ ಬಳಕೆ ಮಾಡಿ ಇ ಮೇಲ್ ಮಾಡುತ್ತಿದ್ದಳು. 
ಗೇಟ್ ಕೋಡ್‌ ಎಂಬ ಅಪ್ಲಿಕೇಶನ್ ವರ್ಚೂಲ್ ಮೊಬೈಲ್ ನಂಬರ್ ಪಡೆದುಕೊಂಡಿದ್ದ ರೇನೇ ಜೋಶಿಲಾದ , ಅದರ ಮೂಲಕ  ಸುಮಾರು ಆರರಿಂದ ಏಳು ವಾಟ್ಸಪ್ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದಳು. 
ವಿಚಾರಣೆ ವೇಳೆ ಬೆಂಗಳೂರಿನ ಕಲಾಸಿಪಾಳ್ಯ  ಪೊಲೀಸ್ ಠಾಣೆಯ ಕೇಸ್ ಸೇರಿದಂತೆ ಇತರೆ ಆರು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.  ಆರೋಪಿ ರೇನೆ ಜೋಶಿಲಾದ  ವಿರುದ್ದ ಗುಜರಾತ್, ಮೈಸೂರು, ತಮಿಳುನಾಡಿನ ಚೆನ್ನೈ ‌ನಲ್ಲಿ ಕೂಡ ಹುಸಿ ಬಾಂಬ್ ಬೆದರಿಕೆ ಪ್ರಕರಣ ದಾಖಲಾಗಿವೆ.  ರೇನೆ ಜೋಶಿಲಾದ  ರೋಬೋಟಿಕ್ ಇಂಜಿನಿಯರ್ ಆಗಿರುವುದು ವಿಶೇಷ. ಆದರೇ, ತನ್ನ  ಇಂಜಿನಿಯರಿಂಗ್ ಜ್ಞಾನವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿದರೇ, ಇಡೀ ದೇಶವೇ ಮೆಚ್ಚುತ್ತಿತ್ತು. ಆದರೇ, ಪ್ರೀತಿಸಲು ನಿರಾಕರಿಸಿದ ಹಳೆಯ ಪ್ರೇಮಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಹೋಗಿ ತಾನೇ ಈಗ ಪೊಲೀಸರ ಬಲೆಗೆ ಬಿದ್ದು, ಜೈಲಿನ ಕಂಬಿ ಎಣಿಸುವ ಪರಿಸ್ಥಿತಿ ತಂದುಕೊಂಡಿದ್ದಾಳೆ. 
ಈ ರೇನೆ ಜೋಶಿಲಾದ ಮೂರು, ನಾಲ್ಕು ರಾಜ್ಯಗಳಲ್ಲ, ಬರೋಬ್ಬರಿ 11 ರಾಜ್ಯಗಳಲ್ಲಿ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳಿಸಿದ್ದಾಳೆ.  ಡೆಲಾಯ್ಟ್  ಕಂಪನಿಯಲ್ಲಿ  ಸೀನಿಯರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು.   ಪ್ರಭಾಕರ್ ಎಂಬಾತನನ್ನು ರೇನೆ ಜೋಶಿಲಾದ ಪ್ರೀತಿ ಮಾಡಿದ್ದಳು.  ಆದರೆ ಫೆಬ್ರವರಿಯಲ್ಲಿ ಬೇರೆಯವರೊಂದಿಗೆ ಪ್ರಭಾಕರ್ ಮದುವೆಯಾಗಿದೆ.  ಇದರಿಂದ ಗೆಳೆಯನ ಹೆಸರಲ್ಲಿ ಹುಸಿ ಬಾಂಬ್ ಮೇಲ್ ಕಳಿಸಿದ್ದಳು.  ಗುಜರಾತ್ ನಲ್ಲಿ 21 ಕಡೆ,  ಬೆಂಗಳೂರಲ್ಲಿ 6 ಕಡೆ, ಚೆನ್ನೈ, ತೆಲಂಗಾಣ,  ಪಂಜಾಬ್, ಮಧ್ಯಪ್ರದೇಶ,  ತೆಲಂಗಾಣ,  ಹರಿಯಾಣ ರಾಜ್ಯಗಳಿಗೆ ಈಕೆ  ಬಾಂಬ್ ಇಟ್ಟಿರುವುದಾಗಿ  ಬೆದರಿಕೆ ಮೇಲ್ ಕಳಿಸಿದ್ದಳು. 

Advertisment

ಪ್ರೇಮ ವೈಫಲ್ಯದಿಂದ ಪ್ರೇಮಿ ವಿರುದ್ಧ ಸೇಡು.. ತನಿಖೆ ವೇಳೆ ಅಸಲಿ ವಿಚಾರ ತಿಳಿದು ಬೆಚ್ಚಿಬಿದ್ದ ಪೊಲೀಸರು



ಅಹಮದಾಬಾದ್ ಟು ಲಂಡನ್ ಪ್ಲೇನ್ ಕ್ರ್ಯಾಶ್ ಅನ್ನು ಕೂಡ ತಾನೇ ಮಾಡಿದ್ದಾಗಿ ಅಹಮದಾಬಾದ್ ಪೊಲೀಸರು, ಆಸ್ಪತ್ರೆಗೆ ಮೇಲ್ ಮಾಡಿದ್ದಳು.  ವಿಮಾನ ಪತನದ ಬಳಿಕ ಅಹಮದಾಬಾದ್ ನ ಶಾಲೆ, ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆಯ ಮೇಲ್ ಮಾಡಿದ್ದಳು. 
 I think you know the power like we sent you email yesterday we crashed the air India plane with our farmer cm vijay roopani,we know the police would have that planr crash was a hoax and ignored it well done to our pilot.now you know we are not playing 

ಈ ರೀತಿಯಾಗಿ ಇಮೇಲ್ ಮಾಡಿದ್ದಳು ಎಂಬುದು ತನಿಖೆ ವೇಳೆ ಪತ್ತೆಯಾಗಿತ್ತು. ಈಗ ಈ ನಟೋರಿಯಸ್ ಬಾಂಬ್ ಬೆದರಿಕೆಯ ಲೇಡಿ ರೇನೆ ಜೋಶಿಲಾದಳನ್ನು ಬೆಂಗಳೂರಿಗೆ ಕರೆ ತಂದು ಬೆಂಗಳೂರಿನ ವಿವಿಧೆಡೆ ಬಂದಿದ್ದ ಬಾಂಬ್ ಬೆದರಿಕೆಯ ಇ ಮೇಲ್ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Rene joshilada arrested by Bangalore police
Advertisment
Advertisment
Advertisment