/newsfirstlive-kannada/media/media_files/2026/01/03/chitrasanthe-tomorrow-at-bangalore-1-2026-01-03-12-31-17.jpg)
ನಾಳೆ ಬೆಂಗಳೂರಿನಲ್ಲಿ ಚಿತ್ರಸಂತೆ ಆಯೋಜನೆ
ನಾಳೆ ಬೆಂಗಳೂರಿನಲ್ಲಿ 23ನೇ ಚಿತ್ರಸಂತೆ ನಡೆಯಲಿದೆ. ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಈ ಚಿತ್ರಸಂತೆಯನ್ನು ಆಯೋಜಿಸಿದೆ. ಪ್ರತಿ ವರ್ಷ ಕರ್ನಾಟಕ ಚಿತ್ರಕಲಾ ಪರಿಷತ್ ಚಿತ್ರಸಂತೆಯನ್ನು ಆಯೋಜಿಸುತ್ತಿದೆ. ವರ್ಷದ ಮೊದಲ ಭಾನುವಾರ ಚಿತ್ರಸಂತೆ ಆಯೋಜನೆ ಮಾಡಲಾಗುತ್ತಿದೆ. ನಾಳೆ ಚಿತ್ರಸಂತೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡುವರು. 2003ರಲ್ಲಿ ಆರಂಭವಾದ ಚಿತ್ರಸಂತೆ ಇಂದಿಗೂ ಮುಂದುವರಿದುಕೊಂಡು ಬಂದಿದೆ. ನಾಳೆ ಬೆಳಗ್ಗೆ 8 ರಿಂದ ರಾತ್ರಿ 8 ರ ವರೆಗೆ ಚಿತ್ರಸಂತೆಯನ್ನು ಆಯೋಜನೆ ಮಾಡಲಾಗಿದೆ.
ಬೆಂಗಳೂರಿನ ಶಿವಾನಂದ ವೃತ್ತದಿಂದ ವಿಂಡ್ಸರ್ ಮ್ಯಾನರ್ ಹೊಟೇಲ್ ವರೆಗಿನ ರಸ್ತೆಗಳಲ್ಲಿ ಕಲಾಕೃತಿ ಅನಾವರಣ ಮಾಡಲಾಗುತ್ತೆ. ಚಿತ್ರಸಂತೆಗೆ ಬರುವವರಿಗೆ ಮೆಟ್ರೋ ಫೀಡರ್ ಬಸ್ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ನಿಲ್ದಾಣ, ಮೆಜೆಸ್ಟಿಕ್, ಮಂತ್ರಿ ಮಾಲ್ ನಿಂದ, ಶಿವಾಜಿನಗರದಿಂದ ಫೀಡರ್ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಪರಿಸರಕ್ಕೆ ಸಂಬಂಧಿಸಿದಂತೆ ಚಿತ್ರ ಸಂತೆ ಆಯೋಜನೆ ಮಾಡಲಾಗಿದೆ. 1530 ಪ್ರದರ್ಶಕರಿಗೆ ಈ ಬಾರಿ ಚಿತ್ರಸಂತೆಯಲ್ಲಿ ಭಾಗವಹಿಸಲು ಅವಕಾಶ ಮಾಡಲಾಗಿದೆ. 18 ವರ್ಷದಿಂದ 80 ವರ್ಷ ವಯಸ್ಸಿನವರು ಸಂತೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಮೈಸೂರು ಮತ್ತು ತಂಜಾವೂರು ಶೈಲಿಯ ಪರಂಪರೆ, ರಾಜಸ್ಥಾನಿ, ಮಧುಬನಿ ಶೈಲಿಯ ಕಲಾಕೃತಿಗಳ ಅನಾವರಣ ಮಾಡಲಾಗುತ್ತೆ. ಪ್ರಸಿದ್ಧ ಕಾರ್ಟೂನಿಸ್ಟ್ ಗಳ ಪ್ರದರ್ಶನವೂ ಇರಲಿದೆ. ಸ್ಥಳದಲ್ಲೇ ಚಿತ್ರ ಬಿಡಿಸುವ ಕಲಾವಿದರೂ ಭಾಗವಹಿಸಲಿದ್ದಾರೆ. ಈ ಬಾರಿಯ ಚಿತ್ರಸಂತೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಆಸಕ್ತರು ಭಾಗವಹಿಸುವ ಸಾಧ್ಯತೆ ಇದೆ.
ವರ್ಚುವಲ್ ಆರ್ಟ್ ಗ್ಯಾಲರಿ ಮೂಲಕವೂ ಆನ್ ಲೈನ್ ನಲ್ಲಿ ವೀಕ್ಷಣೆ ಮಾಡಬಹುದು
https://www.ckpvirtualartworld.in ನಲ್ಲಿ ವೀಕ್ಷಿಸಬಹುದು ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಹೇಳಿದೆ.
/filters:format(webp)/newsfirstlive-kannada/media/media_files/2026/01/03/chitrasanthe-tomorrow-at-bangalore-2026-01-03-12-30-39.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us