ಸೊಸೆಯ ಸೌಂದರ್ಯ ವರ್ಣನೆಯ ಜೊತೆಗೆ ಲೈಂಗಿಕ ಕಿರುಕುಳ ಕೊಟ್ಟ ಮಾವ! : ಲಿಫ್ಟ್ ನಲ್ಲಿ ಮಾವನಿಂದ ಸೊಸೆಯ ಅಲಿಂಗನ!

ಬೆಂಗಳೂರಿನಲ್ಲೊಂದು ವಿಚಿತ್ರ ಕೇಸ್ ದಾಖಲಾಗಿದೆ. ಮಾವನೇ ತನ್ನ ಸೊಸೆಯ ಸೌಂದರ್ಯ ವರ್ಣನೆ ಮಾಡಿ ಪತ್ರ ಬರೆದಿದ್ದಾನೆ. ಜೊತೆಗೆ ಸೊಸೆಗೆ ಮಾವನೇ ಲೈಂಗಿಕ ಕಿರುಕುಳ ನೀಡಿದ್ದಾನೆ. ಲಿಫ್ಟ್ ನಲ್ಲಿ ಸೊಸೆ ಒಂಟಿಯಾಗಿ ಸಿಕ್ಕಾಗ ಅಲಿಂಗನ ಮಾಡಿದ್ದಾನೆ. ಕಾಮುಕ ಮಾವನ ವಿರುದ್ಧ ರೊಚ್ಚಿಗೆದ್ದ ಸೊಸೆ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

author-image
Chandramohan
Father in law harasses daughter in law
Advertisment

ಮಗನ ಕೊಟ್ಟ ಮಾವ ತಂದೆಗೆ ಸಮಾನ ಅಂತಾರೆ. ಆದ್ರೆ, ಇಲ್ಲೊಬ್ಬ ಪಾಪಿ ಮಾವ ಮಗಳ ವಯಸ್ಸಿನ ಸೊಸೆಯ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಶಾಕಿಂಗ್​ ಅಂದ್ರೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಫೌಂಡರ್ ಅಂತೆ ಆರೋಪಿ. ಜೊತೆಗೆ ಕೊಲೆ ಬೆದರಿಕೆಯ ಆರೋಪವೂ ಮಾವನ ಮೇಲಿದೆ. 
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತಾರೆ. ಅಮ್ಮನ ಮನೆ ಬಿಟ್ಟು ಗಂಡನ ಮನೆ ಸೇರೋ ಹೆಣ್ಣು ಮಕ್ಕಳಿಗೆ ಅತ್ತೆ ಮಾವನೇ ತಂದೆ ತಾಯಿ. ಆದ್ರೆ, ಇಲ್ಲಿ ತಂದೆಯ ಸ್ಥಾನದಲ್ಲಿರೋ ಮಾವನ ಕಾಡೋ ಕೀಚಕನಾಗಿದ್ದಾನೆ ಅನ್ನೋ ಗಂಭಿರ ಆರೋಪ ಕೇಳಿ ಬಂದಿದೆ. ಹೌದು, ಪರಿತಷ್ಠಿತ ಶಿಕ್ಷಣ ಸಂಸ್ಥೆಯ ಫೌಂಡರ್ ಆಗಿರುವ ಆರೋಪಿ ತನ್ನ ಸ್ವಂತ ಮಗನ ಹೆಂಡತಿಗೇನೇ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಕೂಡ ಮತ್ತೊಂದು ಶಾಲೆಯ ಪ್ರಾಂಶುಪಾಲೆಯಾಗಿದ್ದಾರೆ. 

ಕಾಮುಕ ಮಾವ!
ಸೊಸೆ ಸೌಂದರ್ಯದ ಬಗ್ಗೆ ಪತ್ರ ಬರೆಯುತ್ತಿದ್ದನಂತೆ ಮಾವ
ಪತ್ರ ಬರೆದು ತಂದು, ಆಕೆಯ ಮುಂದೆಯೇ ಅದನ್ನ ಓದ್ತಿದ್ದ
ನಂತರ ಆ ಪತ್ರವನ್ನ ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದನಂತೆ
ಮನೆಯಲ್ಲೂ ಸೊಸೆ ಒಬ್ಬಳೇ ಇದ್ದಾಗ ಆಕೆಗೆ ಕಿರುಕುಳ
ಸುಂದರವಾಗಿದ್ದೀಯಾ.. ನನ್ನ ಆಸೆ ಈಡೇರಿಸು ಅಂತ ಪೀಡಿಸ್ತಿದ್ದ
ಬಲವಂತವಾಗಿ ಬಟ್ಟೆ ತೆಗೆಯೋಕೆ ಯತ್ನಿಸಿ, ಹಲ್ಲೆಯ ಆರೋಪ
ಶಾಲೆಯ ಕ್ಯಾಬಿನ್​ನಲ್ಲೂ ಲೈಂಗಿಕ ಕಿರುಕುಳ ಕೊಟ್ಟಿರುವ ಆರೋಪ
ತಡೆಯೋಕೆ ಆಗದೆ ತನ್ನ ಪತಿಗೆ ಎಲ್ಲವನ್ನ ವಿವರಿಸಿದ್ದ ಮಹಿಳೆ
ಮಗನೂ ತನ್ನ ತಂದೆಗೆ ಬೈದು ಬುದ್ಧಿ ಹೇಳಿದ್ದ.. ಆದ್ರೂ ಮತ್ತೆ ಕಿರುಕುಳ
ಲಿಫ್ಟ್​​ನಲ್ಲಿ ಮತ್ತೆ ಬಲವಂತಪಡಿಸಿ ಕಿರುಕುಳ ಹಿನ್ನೆಲೆ ಈಗ ದೂರು
6 ಬಿಎನ್​ಎಸ್​ ಸೆಕ್ಷನ್​ಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣ

(ಸೊಸೆ ಸೌಂದರ್ಯದ ಬಗ್ಗೆ ಮಾವ ಆಗಾಗ ಪತ್ರ ಬರೆಯುತ್ತಿದ್ದನಂತೆ. ಪತ್ರ ಬರೆದು ತಂದು, ಸಂತ್ರಸ್ತೆ ಮುಂದೆಯೇ ಅದನ್ನ ಓದ್ತಿದ್ದನಂತೆ. ನಂತರ ಆ ಪತ್ರವನ್ನ ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದನಂತೆ. ಮನೆಯಲ್ಲೂ ಸೊಸೆ ಒಬ್ಬಳೇ ಇದ್ದಾಗ ಆಕೆಗೆ ಕಿರುಕುಳ ನೀಡುತ್ತಿದ್ದನಂತೆ ಮಾವ. ಸುಂದರವಾಗಿದ್ದೀಯಾ.. ನನ್ನ ಆಸೆ ಈಡೇರಿಸು ಅಂತ ಪೀಡಿಸ್ತಿದ್ದನಂತೆ. ಬಲವಂತವಾಗಿ ಬಟ್ಟೆ ತೆಗೆಯೋಕೆ ಯತ್ನಿಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಶಾಲೆಯ ಕ್ಯಾಬಿನ್​ನಲ್ಲೂ ಲೈಂಗಿಕ ಕಿರುಕುಳ ಕೊಟ್ಟಿರುವ ಆರೋಪವೂ ಇದೆ. ತಡೆಯೋಕೆ ಆಗದೆ ತನ್ನ ಪತಿಗೆ ಎಲ್ಲವನ್ನ ಸಂತ್ರಸ್ತ ಮಹಿಳೆ ವಿವರಿಸಿದ್ದರಂತೆ. ಈ ವೇಳೆ ಮಗನೂ ತನ್ನ ತಂದೆಗೆ ಬೈದು ಬುದ್ಧಿ ಹೇಳಿದ್ದನಂತೆ. ಆದ್ರೂ ಮತ್ತೆ ಮಾವ ಕಿರುಕುಳ ನೀಡಿದ್ದಾನೆ. ಲಿಫ್ಟ್​​ನಲ್ಲಿ ಮತ್ತೆ ಬಲವಂತಪಡಿಸಿ ಕಿರುಕುಳ ನೀಡಿದ್ದನಂತೆ. ಈ ಹಿನ್ನೆಲೆ ಇನ್ನು ಸಹಿಸೋದಕ್ಕೆ ಆಗಲ್ಲ ಅಂತ ಸಂತ್ರಸ್ತೆ ದೂರು ನೀಡಿದ್ದಾರೆ. 6 ಬಿಎನ್​ಎಸ್​ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.)


ಹಾಗಿದ್ರೆ ಕೆಟ್ಟ ಮನಸ್ಥಿತಿಯ ಮಾವನ ಮೇಲೆ ಯಾವೆಲ್ಲಾ ಸೆಕ್ಷನ್​ ದಾಖಲಾಗಿದೆ ಅಂತ ನೊಡೋದಾದ್ರೆ. 

ಯಾವ್ಯಾವ ಸೆಕ್ಷನ್?
BNS 115(2) ಉದ್ದೇಶಪೂರ್ವಕ ಹಲ್ಲೆ 
BNS 351 ವ್ಯಕ್ತಿಯ ಘನತೆಗೆ ಹಾನಿ, ಭಯ ಹುಟ್ಟಿಸುವುದು 
BNS 76 ಮಹಿಳೆ ಮೇಲೆ ಹಲ್ಲೆ, ಬಲವಂತವಾಗಿ ಬೆತ್ತಲಾಗಲು ಒತ್ತಾಯ
BNS 75  ಬಲವಂತವಾಗಿ ಜನನಾಂಗ ತೋರಿಸುವುದು, ಅಶ್ಲೀಲ ಕೃತ್ಯದಲ್ಲಿ ಭಾಗಿ
BNS 79 ಮಹಿಳೆ ಖಾಸಗಿತನಕ್ಕೆ ಧಕ್ಕೆ, ಅವಮಾನಿಸುವುದು 
BNS 74 ಮಹಿಳೆ ಮೇಲೆ ಹಲ್ಲೆ, ಆಕೆಯ ನಮ್ರತೆಗೆ ಧಕ್ಕೆ

ಸದ್ಯ ಸಂತ್ರಸ್ತ ಸೊಸೆ ದೂರಿನ ಆಧಾರದ ಮೇಲೆ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾಮಿ ಮಾವನ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಳ್ತಾರೆ ಕಾದುನೋಡಬೇಕಿದೆ. 

Father in law harasses daughter in law (1)



ಸಂದೇಶ್​, ನ್ಯೂಸ್​ಫಸ್ಟ್​ ಬೆಂಗಳೂರು 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Father in law harasses daughter in law
Advertisment