/newsfirstlive-kannada/media/media_files/2025/12/12/basavanagudi-police-station-limits-firing-2025-12-12-16-07-53.jpg)
ಉದ್ಯಮಿ ರಾಜಗೋಪಾಲ್ ಮೇಲೆ ಫೈರಿಂಗ್
ಬೆಂಗಳೂರಿನಲ್ಲಿ ಉದ್ಯಮಿಯ ಮೇಲೆ ಏರ್ ಗನ್ ನಿಂದ ಫೈರಿಂಗ್ ನಡೆದಿದೆ. ಬಸವನಗುಡಿಯ ಕೃಷ್ಣರಾವ್ ಪಾರ್ಕ್ ನಲ್ಲಿ ಘಟನೆ ನಡೆದಿದ್ದು, ನರ್ತಕಿ ಹಾಗೂ ಕಾರ್ಗಿಲ್ ಬಾರ್ ನ ಮಾಲೀಕ ರಾಜಗೋಪಾಲ್ ಮೇಲೆ ಫೈರಿಂಗ್…ಮಾಡಲಾಗಿದೆ. ಇದರಿಂದ ರಾಜಗೋಪಾಲ್ ಅವರ ಕತ್ತಿನ ಭಾಗಕ್ಕೆ ಗಾಯವಾಗಿದೆ. ಡಿಸೆಂಬರ್10ರ ರಾತ್ರಿ 8:30ರ ಸುಮಾರಿಗೆ ಘಟನೆ ನಡೆದಿದೆ. ಗಾಯಗೊಂಡ ಉದ್ಯಮಿ ರಾಜಗೋಪಾಲ್ ಜಯನಗರದ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಬಸವನಗುಡಿ ಪೊಲೀಸರು ಕೇಸ್‌ನ ತನಿಖೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಯಾವುದೇ ವ್ಯಕ್ತಿಗಳ ಮೇಲೆ ಅನುಮಾನವಿಲ್ಲ, ಯಾವ ಬೆದರಿಕೆ ಕರೆಯೂ ಬಂದಿಲ್ಲ,ಯಾಕಾಗಿ ಫೈರಿಂಗ್ ಆಯ್ತು? ಯಾವ ಕಾರಣಕ್ಕೆ ಫೈರಿಂಗ್ ಮಾಡಿದ್ರು..? ಗೊತ್ತಿಲ್ಲ ಎಂದು ಉದ್ಯಮಿ ರಾಜಗೋಪಾಲ್ ಹೇಳಿದ್ದಾರೆ. ಫೈರಿಂಗ್ ಸಂಬಂಧ ನಿನ್ನೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. …ಸದ್ಯ ಬಸವನಗುಡಿ ಪೊಲೀಸರಿಂದ ಏರ್ ಗನ್ ಶೂಟರ್ ಗಾಗಿ ಹುಡುಕಾಟ ನಡೆಯುತ್ತಿದೆ.
ದೂರುದಾರರು ನೀಡಿರುವ ಮಾಹಿತಿ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಏರ್ ಗನ್ ನಿಂದ ಫೈರ್ ಆಗಿದೆ ಅಂಥ ದೂರುದಾರ ರಾಜಗೋಪಾಲ್ ಮಾಹಿತಿ ನೀಡಿದ್ದಾರೆ. ಅದು ಏರ್ ಗನ್ ಹೌದೋ ಅಲ್ಲವೋ ಅನ್ನೋ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಸಿಸಿಬಿ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಉದ್ಯಮಿ ರಾಜಗೋಪಾಲ್ ದಾಖಲಾಗಿರೋ ಆಸ್ಪತ್ರೆಗೆ ಬಸವನಗುಡಿ ಠಾಣೆ ಇನ್ಸ್ ಪೆಕ್ಟರ್ ಸವಿತಾ ಹಾಗೂ ಸಿಸಿಬಿ ಇನ್ಸ್ ಪೆಕ್ಟರ್ ಗಳ ತಂಡ ಭೇಟಿ…ನೀಡಿದೆ. ಗಾಯಾಳು ಉದ್ಯಮಿ ರಾಜಗೋಪಾಲ್ ರಿಂದ ಮಾಹಿತಿಯನ್ನು ಪೊಲೀಸರು ಪಡೆದಿದ್ದಾರೆ. ಯಾರಾದ್ರೂ ಹತ್ಯೆಗೆ ಸಂಚು ರೂಪಿಸಿದ್ರಾ ಎಂಬ ಬಗ್ಗೆ ತನಿಖೆ…ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ ಟಾರ್ಗೆಟ್ ಮಾಡಿ ಹೊಡೆದಿರೋ ಬಗ್ಗೆ ಪೊಲೀಸರಿಂದ ಅನುಮಾನ ವ್ಯಕ್ತವಾಗುತ್ತಿದೆ. ಸದ್ಯ ಬಸವನಗುಡಿ ಹಾಗೂ ಸಿಸಿಬಿ ತಂಡದಿಂದ ತನಿಖೆ ನಡೆಯುತ್ತಿದೆ. …
ಕೋಟ್ಯಾಂತರ ರೂಪಾಯಿ ಬ್ಯುಸಿನೆಸ್ ಹೊಂದಿರೋ ಉದ್ಯಮಿ ರಾಜಗೋಪಾಲ್, ನರ್ತಕಿ ಬಾರ್, ಮೆಜೆಸ್ಟಿಕ್ ಸುತ್ತಮುತ್ತ ಅಂಗಡಿಗಳನ್ನು ಬಾಡಿಗೆಗೆ ಕೊಟ್ಟಿದ್ರು. ಬಸವನಗುಡಿ ಕೃಷ್ಣರಾವ್ ಪಾರ್ಕ್ ಗೆ ಸ್ನೇಹಿತರ ಭೇಟಿಯಾಗಲು ರಾಜ್ ಗೋಪಾಲ್ ಬಂದಿದ್ದರು. ಈ ವೇಳೆ ಪಾರ್ಕ್ ನಲ್ಲಿ ವಾಕ್ ಮಾಡುತ್ತಿರುವಾಗಲೇ ಗನ್ ಫೈರ್ ಆಗಿದೆ. ಕತ್ತಿನ ಭಾಗಕ್ಕೆ ಹೇಗೆ ಬಿತ್ತು ಎಂಬ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ರೇಣುಕಾ ಯಲ್ಲಮ್ಮ ಟೆಂಪಲ್ ಪಕ್ಕದ ಪಾರ್ಕ್ ಒಳಗಿನ ರಸ್ತೆ ಬಳಿ ಘಟನೆ ನಡೆದಿದೆ. ರಸ್ತೆಯಲ್ಲಿ ನಿಂತು ಫೈರ್ ಮಾಡಿದ್ರಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us