ಬೆಂಗಳೂರಿಗೆ ಬಂದು ದೋಸೆ ಸವಿದ ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ : ಕರ್ನಾಟಕಕ್ಕೂ ಅಖಿಲೇಶ್ ಯಾದವ್‌ಗೂ ಇರೋ ನಂಟೇನು?

ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ಹಾಲಿ ಲೋಕಸಭಾ ಸದಸ್ಯ ಅಖಿಲೇಶ್ ಯಾದವ್ ಬೆಂಗಳೂರಿಗೆ ಭೇಟಿ ನೀಡಿ ಮಸಾಲ ದೋಸೆ ಸವಿದಿದ್ದಾರೆ. ಕರ್ನಾಟಕದ ಜೊತೆಗಿನ ಹಳೆಯ ಸಂಬಂಧವನ್ನು ಮೆಲುಕು ಹಾಕಿದ್ದಾರೆ. ಅಖಿಲೇಶ್ ಯಾದವ್‌ಗೂ ಕರ್ನಾಟಕಕ್ಕೂ ಇರೋ ನಂಟೇನು ಗೊತ್ತಾ?

author-image
Chandramohan
ex cm akhilesh yadav have dosa at Bangalore

ಬೆಂಗಳೂರಿನಲ್ಲಿ ಮಸಾಲ ದೋಸೆ ಸವಿದ ಅಖಿಲೇಶ್ ಯಾದವ್‌

Advertisment
  • ಬೆಂಗಳೂರಿನಲ್ಲಿ ಮಸಾಲ ದೋಸೆ ಸವಿದ ಅಖಿಲೇಶ್ ಯಾದವ್‌


ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದರು. ರಾಜ್ಯದ ಗೃಹ ಸಚಿವ ಡಾಕ್ಟರ್ ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿದ್ದರು. ಜೊತೆಗೆ ಕರ್ನಾಟಕದಲ್ಲಿ ಬೇರೇ ಬೇರೆ ಕಾರ್ಯಕ್ರಮಗಳಲ್ಲಿ ಅಖಿಲೇಶ್ ಯಾದವ್ ಭಾಗಿಯಾಗಿದ್ದರು. ಅಖಿಲೇಶ್ ಯಾದವ್‌ಗೂ ಕರ್ನಾಟಕಕ್ಕೂ ಮೊದಲಿನಿಂದಲೂ ನಂಟು ಇದೆ. ಅಖಿಲೇಶ್ ಯಾದವ್ ಮೈಸೂರಿನಲ್ಲಿ ಪರಿಸರ ವಿಜ್ಞಾನ  ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ. ಅಖಿಲೇಶ್ ಯಾದವ್ ಮೈಸೂರಿನಲ್ಲಿ ಓದುವಾಗ ,  ಅವರು ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಮಗ ಅನ್ನೋದು ಯಾರಿಗೂ ಗೊತ್ತಿರಲಿಲ್ಲವಂತೆ. ಆಗಾಗ್ಗೆ ಮುಲಾಯಂ ಸಿಂಗ್ ಯಾದವ್ ಮೈಸೂರಿಗೆ ಬಂದು ಅಖಿಲೇಶ್ ಯಾದವ್ ರನ್ನು ಭೇಟಿಯಾಗಿ ಹೋಗುತ್ತಿದ್ದರು.  
ಮೊನ್ನೆ ಬೆಂಗಳೂರಿಗೆ ಬಂದಿದ್ದ ಅಖಿಲೇಶ್ ಯಾದವ್ ಬೆಂಗಳೂರಿನ ಪ್ರಸಿದ್ದ ರಾಮೇಶ್ವರಂ ಕೆಫೆಗೆ ತೆರಳಿ ದೋಸೆ ಸವಿದಿದ್ದಾರೆ. ಕರ್ನಾಟಕದ ನೆನಪು, ಹಳೆಯ ಸಂಬಂಧದ ಸ್ವಾದ , ಥ್ಯಾಂಕ್ಯು ಬೆಂಗಳೂರು ಎಂದು ಅಖಿಲೇಶ್ ಯಾದವ್ ಪೋಟೋ ಸಹಿತ ಟ್ವೀಟ್ ಮಾಡಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿಯುತ್ತಿರುವ ಪೋಟೋಗಳನ್ನು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ. 

AKHILESH YADAV HAVE MASALA DOSA AT Bangalore
Advertisment