ಇಂದಿನಿಂದ ಕೆಎಂಎಫ್ ನಂದಿನಿ ತುಪ್ಪ ವಿದೇಶಗಳಿಗೆ ರಫ್ತು ! ಸಪ್ತಸಾಗರದಾಚೆವರೆಗೂ ವಿಸ್ತರಿಸಿದ ನಂದಿನಿ ತುಪ್ಪದ ಘಮಲು!

ಕೆಎಂಎಫ್‌ನ ನಂದಿನಿ ತುಪ್ಪ ಇಂದಿನಿಂದ ಸಪ್ತಸಾಗರದಾಚೆಯ ಗಡಿ ದಾಟಿ ಹೋಗಲಿದೆ. ಕೆಎಂಎಫ್ ತುಪ್ಪಕ್ಕೆ ಇದೀಗ ವಿದೇಶಗಳಲ್ಲೂ ಭಾರಿ ಬೇಡಿಕೆ ಬಂದಿದೆ. ಹೀಗಾಗಿ ಈಗ ಮೊದಲ ಹಂತದಲ್ಲಿ ಸೌದಿ ಅರೇಬಿಯಾ, ಅಮೆರಿಕಾ, ಆಸ್ಟ್ರೇಲಿಯಾಕ್ಕೆ ಇಂದಿನಿಂದ ನಂದಿನಿ ತುಪ್ಪ ರಫ್ತು ಮಾಡಲಾಗುತ್ತಿದೆ.

author-image
Chandramohan
KMF GHEE EXPORTED TO FOREIGN COUNTRY

ನಂದಿನಿ ತುಪ್ಪವನ್ನು ವಿದೇಶಕ್ಕೆ ರಫ್ತು ಮಾಡಲು ಚಾಲನೆ ನೀಡಿದ ಸಿಎಂ

Advertisment
  • ನಂದಿನಿ ತುಪ್ಪವನ್ನು ವಿದೇಶಕ್ಕೆ ರಫ್ತು ಮಾಡಲು ಚಾಲನೆ ನೀಡಿದ ಸಿಎಂ
  • ಸೌದಿ ಅರೇಬಿಯಾ, ಅಮೆರಿಕಾ, ಆಸ್ಟ್ರೇಲಿಯಾ ದೇಶಗಳಿಗೆ ನಂದಿನಿ ತುಪ್ಪ ರಫ್ತು


ಕೆಎಂಎಫ್‌ನ  ನಂದಿನಿ ತುಪ್ಪಕ್ಕೆ ವಿದೇಶಗಳಲ್ಲೂ 'ಫುಲ್ ಡಿಮ್ಯಾಂಡ್..! ಬಂದಿದೆ.  ನಂದಿನಿ ತುಪ್ಪವನ್ನು ಈಗ ಕೆಎಂಎಫ್  ವಿದೇಶಕ್ಕೆ ರಫ್ತು ಮಾಡುತ್ತಿದೆ.  ಜಾಗತಿಕ ಮಟ್ಟದಲ್ಲಿ ನಂದಿನಿ ತುಪ್ಪ ವಿಸ್ತರಿಸಲು ಕೆಎಂಎಫ್ ಪ್ಲಾನ್ ಮಾಡಿದೆ .  ಈಗಾಗಲೇ ನೆರೆ ರಾಜ್ಯಗಳ ಮಾರುಕಟ್ಟೆಯಲ್ಲಿ   ನಂದಿನಿ ತುಪ್ಪ  ಪ್ರಾಬಲ್ಯ ಸಾಧಿಸಿದೆ.  ಇದೀಗ ಸಪ್ತ ಸಾಗರದಾಚೆಯ  ಸೌದಿ ಅರೇಬಿಯಾ  ಅಮೆರಿಕ, ಆಸ್ಟ್ರೇಲಿಯಾಗೆ ನಂದಿನಿ ತುಪ್ಪ ರಫ್ತು  ಮಾಡಲಾಗುತ್ತಿದೆ.   ಇಂದಿನಿಂದ ಕೆಎಂಎಫ್ ನಂದಿನಿ ತುಪ್ಪ ವಿದೇಶಕ್ಕೆ ಮಾರಾಟ ಮಾಡಲಾಗುತ್ತಿದೆ.  ಈಗಾಗಲೇ ಹಲವೆಡೆ ಮನೆ ಮಾತಾಗಿರುವ ನಂದಿನಿ ಹಾಲು, ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲು ಕೂಡ  ಪ್ಲ್ಯಾನ್ ಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ ಸೌದಿ  ಅರೇಬಿಯಾ, ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ   ಮೂರು ದೇಶಗಳಿಗೆ 15 ಟನ್ ತುಪ್ಪ ಸಪ್ಲೈಗೆ  ಕೆಎಂಎಫ್ ಇಂದು ಚಾಲನೆ ನೀಡಿದೆ. ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿದೇಶಗಳಿಗೆ ಸಾಗಿಸುವ  ತುಪ್ಪದ ವಾಹನಕ್ಕೆ ಚಾಲನೆ ನೀಡಿದ್ದರು.  ಇಂದಿನಿಂದಲೇ ವಿದೇಶದಲ್ಲೂ ಕೆಎಂಎಫ್ ನಂದಿನಿ ಘಮಲು ಶುರುವಾಗಲಿದೆ.  ಇವತ್ತಿನಿಂದ ನಂದಿನಿ ತುಪ್ಪ  ಜಾಗತಿಕ ಪ್ರಯಾಣ ಮಾಡಲಿದೆ.  ಮೂರು ದೇಶಗಳ ನಂದಿನಿ ತುಪ್ಪ ಮಾರಾಟಕ್ಕೆ ಸಿಎಂ ಸಿದ್ದರಾಮಯ್ಯ, ಪಶುಸಂಗೋಪನಾ ಖಾತೆ ಸಚಿವ ಎಂ.ವೆಂಕಟೇಶ್ ಹಾಗೂ ಕೆಎಂಎಫ್ ಎಂ.ಡಿ. ಶಿವಸ್ವಾಮಿ  ಚಾಲನೆ ನೀಡಿದ್ದಾರೆ. 

KMF GHEE EXPORTED TO FOREIGN COUNTRY (1)

KMF GHEE EXPORTED TO FOREIGN COUNTRY
Advertisment