/newsfirstlive-kannada/media/post_attachments/wp-content/uploads/2025/02/Bangalore.jpg)
ಅನಧಿಕೃತ ಕಟ್ಟಡಗಳನ್ನು ಸೀಜ್ ಮಾಡಲು ನಿರ್ಧಾರ
ಅನಧಿಕೃತ ಕಟ್ಟಡಗಳ ನಿರ್ಮಾಣದ ವಿರುದ್ಧ GBA ಸಮರ ಮುಂದುವರಿಸಿದೆ. ನೋಟೀಸ್​ ಮಾತ್ರವಲ್ಲ ಇನ್ಮುಂದೆ ಇಡೀ ಕಟ್ಟಡ ಸೀಜ್​ ಆಗಲಿದೆ. ​ ನೀವೇನಾದ್ರು ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡ್ತಿದ್ರೆ ಎಚ್ಚರ. ಜಿಬಿಎ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಖಡಕ್​ ಆದೇಶ ನೀಡಿದ್ದಾರೆ. ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಾಣವಾಗ್ತಿರುವ ಕಟ್ಟಡಗಳ ಸೀಲ್ ಮಾಡಲು ಆದೇಶ ನೀಡಲಾಗಿದೆ. ಸೀಲ್​​ ಮಾಡಿ ಕಾಮಗಾರಿಗೆ ತಡೆ ನೀಡುವಂತೆ ಸೂಚನೆ ನೀಡಲಾಗಿದೆ. ಚೀಫ್ ಕಮಿಷನರ್​​​ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಆಯಾ ನಗರ ಪಾಲಿಕೆಗಳ ಆಯುಕ್ತರು, ಉಲ್ಲಂಘನೆ ಮಾಡಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ವಿರುದ್ಧ ಶಿಸ್ತು ಕ್ರಮಕ್ಕೆ ತಂಡಗಳ ರಚನೆ ಮಾಡಿದ್ದಾರೆ. ವಿಶೇಷ ತಂಡಗಳ ರಚನೆ ಮಾಡಿ ಅನಧಿಕೃತ ಕಾಮಗಾರಿಗಳನ್ನು ಸೀಲ್​ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಉಲ್ಲಂಘನೆ ಮಾಡಿರುವ ಕಟ್ಟಡ ನಿರ್ಮಾಣವನ್ನು ಆರಂಭದಲ್ಲೇ ತಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ಸೀಲ್​ ಬಳಿಕ ನೊಟೀಸ್ ಅನ್ನು ಅಧಿಕಾರಿಗಳು ನೀಡಲಿದ್ದಾರೆ. ನೊಟೀಸ್​ ನೀಡಿ ಕಟ್ಟಡ ಡೆಮಾಲಿಶನ್​ಗೆ ಅಧಿಕಾರಿಗಳು ತಯಾರಿ ನಡೆಸುವರು.
/filters:format(webp)/newsfirstlive-kannada/media/media_files/2025/09/02/gba-2025-09-02-20-03-22.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us