/newsfirstlive-kannada/media/media_files/2026/01/10/pink-lane-metro-trial-run-2026-01-10-13-20-40.jpg)
ಮೆಟ್ರೋ ಪಿಂಕ್ ಲೇನ್ ನಲ್ಲಿ ಟ್ರಯಲ್ ರನ್ ಆರಂಭ
ಪಿಂಕ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಪಿಂಕ್ ಲೈನ್‌ನಲ್ಲಿ ಮೆಟ್ರೋ ಟ್ರೇನ್ ಗಳ ಟ್ರಯಲ್ ಆರಂಭವಾಗಿದೆ. ಗುಲಾಬಿ ಮಾರ್ಗದಲ್ಲಿ ಕೊನೆ ಹಂತದ ಪರೀಕ್ಷೆ ನಡೆಯುತ್ತಿದೆ. ಕಾಳೇನ ಅಗ್ರಹಾರ ದಿಂದ ತಾವರೆಕೆರೆ ನಡುವಿನ ಗುಲಾಬಿ ಬಣ್ಣದ ಮೆಟ್ರೋ ಮಾರ್ಗದಲ್ಲಿ ಭಾಗಶಃ ಕಾಮಗಾರಿ ಪೂರ್ಣವಾಗಿದೆ. ಹಂತ ಹಂತವಾಗಿ ಈ ಮಾರ್ಗ ಉದ್ಘಾಟನೆಗೊಳ್ಳಲಿದೆ. ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ಪಿಂಕ್ ಲೈನ್​​ 21.25 ಕಿ.ಮೀ. ಉದ್ದ ಇದೆ. ಈ ಪೈಕಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಮೊದಲ ಹಂತದಲ್ಲಿ ಆರಂಭವಾಗಲಿದೆ. 6 ಎಲಿವೇಟೆಡ್ ಮೆಟ್ರೋ ಸ್ಟೇಷನ್​​ಗಳು ಮೇನಲ್ಲಿ ಆರಂಭವಾಗಲಿದೆ. ನವೆಂಬರ್​​ನಲ್ಲಿ ತಾವರೆಕೆರೆಯಿಂದ ನಾಗವಾರ ವರೆಗಿನ 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್​​ಗಳ ಕಾರ್ಯಾಚರಣೆ ಆರಂಭವಾಗಲಿದೆ. ಮೇ 2026 ರಲ್ಲಿ ಮೊದಲ ಹಂತದಲ್ಲಿ ಮೆಟ್ರೋ ಸಂಚಾರ ಆರಂಭ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಟ್ರೇನ್ ಗಳ ಟ್ರಯಲ್ ರನ್ ಅನ್ನು ಪಿಂಕ್ ಲೇನ್ ಮಾರ್ಗದಲ್ಲಿ ಆರಂಭಿಸಲಾಗಿದೆ.
/filters:format(webp)/newsfirstlive-kannada/media/media_files/2026/01/10/pink-lane-metro-trial-run-1-2026-01-10-13-22-22.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us