Advertisment

ಮೆಟ್ರೋ ಯೆಲ್ಲೋ ಲೇನ್ ಪ್ರಯಾಣಿಕರಿಗೆ ಗುಡ್ ನ್ಯೂಸ್ : ನವಂಬರ್‌ 1 ರಿಂದ 15 ನಿಮಿಷಕ್ಕೊಂದು ಮೆಟ್ರೋ ಸಂಚಾರ

ಬೆಂಗಳೂರಿನ ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೂ ಸಂಚರಿಸುವ ಯೆಲ್ಲೋ ಲೇನ್ ನಲ್ಲಿ ನವಂಬರ್ 1 ರಿಂದ ಐದನೇ ಮೆಟ್ರೋ ಟ್ರೇನ್ ಸಂಚರಿಸಲಿದೆ. ಇದರಿಂದ ಮೆಟ್ರೋ ಟ್ರೇನ್ ಗಳ ಸಂಚಾರದ ನಡುವಿನ ಸಮಯ 15 ನಿಮಿಷಕ್ಕೆ ಇಳಿಯಲಿದೆ. ಯೆಲ್ಲೋ ಲೇನ್ ಮಾರ್ಗವು ಬೆಂಗಳೂರಿನ ಟೆಕ್ ಕಾರಿಡಾರ್ ಆಗಿದೆ.

author-image
Chandramohan
Namma metro yellow line

ಯೆಲ್ಲೋ ಲೇನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್‌

Advertisment
  • ಯೆಲ್ಲೋ ಲೇನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್‌
  • ನವಂಬರ್ 1 ರಿಂದ ಐದನೇ ಮೆಟ್ರೋ ಟ್ರೇನ್ ಸಂಚಾರಕ್ಕೆ ರೆಡಿ
  • 2 ಮೆಟ್ರೋ ಟ್ರೇನ್ ಗಳ ನಡುವಿನ ಸಂಚಾರದ ಸಮಯ 15 ನಿಮಿಷಕ್ಕೆ ಇಳಿಕೆ
  • ಬೆಂಗಳೂರಿನ ಟೆಕ್ ಕಂಪನಿಗಳ ಉದ್ಯೋಗಿಗಳಿಗೆ ಭಾರಿ ಅನುಕೂಲ!

ಕನ್ನಡ ರಾಜ್ಯೋತ್ಸವಕ್ಕೆ ಯೆಲ್ಲೋ ಲೇನ್ ಮೆಟ್ರೋ  ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್  ಗುಡ್ ನ್ಯೂಸ್ ನೀಡಿದೆ.  ಬೆಂಗಳೂರಿನ ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೂ ಯೆಲ್ಲೋ ಲೇನ್ ಮೆಟ್ರೋ ಟ್ರೇನ್ ಗಳು ಸಂಚರಿಸುತ್ತಾವೆ. ಈ ಮಾರ್ಗದಲ್ಲಿ ಸದ್ಯ ನಾಲ್ಕು ಮೆಟ್ರೋ ಟ್ರೇನ್ ಗಳು ಮಾತ್ರವೇ ಸಂಚರಿಸುತ್ತಿವೆ. ಮೆಟ್ರೋ ಟ್ರೇನ್ ಬೋಗಿಗಳ ಕೊರತೆಯಿಂದ ನಾಲ್ಕು ಮೆಟ್ರೋ ಟ್ರೇನ್ ಗಳು ಸಂಚರಿಸುತ್ತಿವೆ.  
ಈಗ ನವಂಬರ್ 1 ರಿಂದ ಐದನೇ ಮೆಟ್ರೋ ಟ್ರೇನ್ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಐದನೇ ಮೆಟ್ರೋ ರೈಲಿನ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.  ಹೀಗಾಗಿ ನವಂಬರ್ 1 ರಿಂದಲೇ ಐದನೇ ರೈಲು ಅನ್ನು ಮೆಟ್ರೋ ಹಳಿಗೆ ಇಳಿಸಲು ಬಿಎಂಆರ್‌ಸಿಎಲ್ ನಿರ್ಧಿರಿಸಿದೆ. ಈಗ ಪ್ರತಿ ಮೆಟ್ರೋ ಟ್ರೇನ್ ನಡುವಿನ ಸಮಯದ ಅಂತರ 19 ನಿಮಿಷ ಇದೆ. ಐದನೇ ಮೆಟ್ರೋ ರೈಲು ಸಂಚಾರ ಆರಂಭಿಸಿದ ಬಳಿಕ ಮೆಟ್ರೋ ಟ್ರೇನ್ ಗಳ ಸಂಚಾರದ ನಡುವಿನ ಸಮಯದ ಅಂತರ 15 ನಿಮಿಷಕ್ಕೆ ಇಳಿಯಲಿದೆ. 
ಐದನೇ ರೈಲಿನ ಸುರಕ್ಷಿತ ಪರೀಕ್ಷೆ ಮತ್ತು ತಾಂತ್ರಿಕ ಪರೀಕ್ಷೆ ಕಾರ್ಯ ಮುಗಿದಿದೆ.  ಐದನೇ ಮೆಟ್ರೋ ಟ್ರೇನ್‌  ನವೆಂಬರ್ 1 ರಂದು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.  
ಈ ವರ್ಷದ  ಆಗಸ್ಟ್ 10 ರಂದು ಪ್ರಧಾನಿ‌ ಮೋದಿ ಯೆಲ್ಲೋ  ಲೇನ್ ಮೆಟ್ರೋ ಮಾರ್ಗಕ್ಕೆ  ಚಾಲನೆ ಕೊಟ್ಟಿದ್ದರು .  ಆರಂಭದಲ್ಲಿ ಮೂರು ರೈಲುಗಳೊಂದಿಗೆ ಸಂಚಾರ ಆರಂಭಿಸಿತ್ತು .  25 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಿತ್ತು .  ಸೆಪ್ಟಂಬರ್ 10ರಂದು ನಾಲ್ಕನೇ ರೈಲು ಸೇರ್ಪಡೆಯಾಗಿತ್ತು . ಅದಾದ ನಂತರ ಪ್ರತಿ 19 ನಿಮಿಷಕ್ಕೊಮ್ಮೆ ರೈಲು ಸಂಚಾರ  ನಡೆಯುತ್ತಿತ್ತು.  ಈಗ ಐದನೇ ರೈಲು ಬೋಗಿಗಳು ಯೆಲ್ಲೋ ಲೇನ್‌  ತಲುಪಿದ್ದು ನವೆಂಬರ್ ತಿಂಗಳಿಂದ ಕಾರ್ಯಾಚರಣೆ ಮಾಡಲಿವೆ.  ಐದನೇ ರೈಲು ಸಂಚಾರಿಸಿದ್ರೆ ಪ್ರತಿ 15 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಲಿವೆ. 

Advertisment

yellow line BMRCL



ಆರ್‌.ವಿ. ರಸ್ತೆ- ಬೊಮ್ಮಸಂದ್ರ ಮಾರ್ಗವು ಟೆಕ್ ಕಾರಿಡಾರ್ ಮಾರ್ಗವಾಗಿದೆ. ಈ ಮಾರ್ಗದಲ್ಲೇ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಇವೆ. ಈ ಮಾರ್ಗದಲ್ಲೇ ಇನ್ಪೋಸಿಸ್ ಕಂಪನಿ, ಡೆಲ್ಟಾ ಕಂಪನಿ, ಬಯೋಕಾನ್ ಸೇರಿದಂತೆ ಅನೇಕ ಐ.ಟಿ. ಕಂಪನಿಗಳಿವೆ. ಬೊಮ್ಮಸಂದ್ರ ಭಾಗದಲ್ಲಿ ಗಾರ್ಮೆಂಟ್ಸ್ ಗಳೂ ಇವೆ. ಇವುಗಳ ಸಾವಿರಾರು ಉದ್ಯೋಗಿಗಳು, ಕಾರ್ಮಿಕರಿಗೆ ಈಗ ಮೆಟ್ರೋ ಟ್ರೇನ್ ಲೈಫ್ ಲೇನ್ ಆಗಲಿದೆ.  ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಳ್ಳುವುದಕ್ಕಿಂತ ಮೆಟ್ರೋ ಟ್ರೇನ್ ನಲ್ಲಿ ಕೆಲವೇ ನಿಮಿಷಗಳಲ್ಲಿ ಆಫೀಸ್ ತಲುಪಲು ಅವಕಾಶ ಇದೆ. ಆದರೇ ಆರ್‌.ವಿ. ರಸ್ತೆಯಿಂದ ಮೆಟ್ರೋ ಟ್ರೇನ್ ಗಾಗಿ 20 ನಿಮಿಷದವರೆಗೂ ಕಾಯುವ ಸಮಯ ಇನ್ನೂ ಮುಂದೆ 15 ನಿಮಿಷಕ್ಕೆ ಇಳಿಯಲಿದೆ. ಬಿಎಂಆರ್‌ಸಿಎಲ್ ಗೂ ಈ ಮಾರ್ಗದಲ್ಲಿ ಪ್ರತಿ 5 ನಿಮಿಷಕ್ಕೊಂದು ಮೆಟ್ರೋ ಟ್ರೇನ್ ಓಡಿಸುವ ಆಸೆ ಇದೆ. ಆದರೇ, ಬಿಎಂಆರ್‌ಸಿಎಲ್ ಬಳಿ ಮೆಟ್ರೋ ಟ್ರೇನ್ ಗಳು ಇಲ್ಲ. ಚೀನಾದ ಕಂಪನಿಗೂ ಮೆಟ್ರೋ ಟ್ರೇನ್ ಗಳನ್ನು ಉತ್ಪಾದಿಸಿ ಪೂರೈಸುವ ಗುತ್ತಿಗೆ ನೀಡಲಾಗಿದೆ. ಆ ಕಂಪನಿಯು ಪಶ್ಚಿಮ ಬಂಗಾಳದ ಟಿಟಾಗರ್ ನಲ್ಲಿ ಮೆಟ್ರೋ ಟ್ರೇನ್ ಗಳ ಉತ್ಪಾದನೆ ಮಾಡುತ್ತಿದೆ.  ಉತ್ಪಾದನೆ ಹೆಚ್ಚಾದಂತೆ, ಯೆಲ್ಲೋ ಲೇನ್ ಗೆ ಹೊಸ ಮೆಟ್ರೋ ಟ್ರೇನ್ ಗಳ ಸೇರ್ಪಡೆ ಆಗಲಿದೆ.  

namma metro yellow(2)




ಇನ್ನೂ ಬಿಎಂಆರ್‌ಸಿಎಲ್ ಬೆಂಗಳೂರಿನ ಬೇರೆ ಮಾರ್ಗಗಳ ಮೆಟ್ರೋ ಟ್ರೇನ್ ಗಳಿಗಾಗಿ ಬೆಂಗಳೂರಿನ ಬೆಮೆಲ್‌ ಗೆ ಗುತ್ತಿಗೆಯನ್ನು ನೀಡಿದೆ.  ಬೆಮೆಲ್ ಬೇಗ ಮೆಟ್ರೋ ಟ್ರೇನ್ ಗಳನ್ನು ಪೂರೈಸಲಿದೆ.  ಚೀನಾದ ಕಂಪನಿಗೆ ಗುತ್ತಿಗೆ ನೀಡುವ ಬದಲು ಬೆಂಗಳೂರಿನ ಬೆಮೆಲ್ ಕಂಪನಿಗೆ ಗುತ್ತಿಗೆ ನೀಡಿದ್ದರೇ, ಮೆಟ್ರೋ ಟ್ರೇನ್ ಗಳ ಕೊರತೆಯಾಗುತ್ತಿರಲಿಲ್ಲ. ಬೆಂಗಳೂರಿಗರು ಸಮಸ್ಯೆ ಎದುರಿಸಬೇಕಾಗಿರಲಿಲ್ಲ. ಆದರೇ, ಬಿಎಂಆರ್‌ಸಿಎಲ್ ಸ್ವದೇಶಿ ಕಂಪನಿಯನ್ನು ಬಿಟ್ಟು ವಿದೇಶಿ ಕಂಪನಿಗೆ ಮೆಟ್ರೋ ಬೋಗಿಗಳ  ಪೂರೈಕೆಗೆ ಗುತ್ತಿಗೆ ನೀಡಿದ್ದು ಏಕೆ ಎಂಬುದೇ ಗೊತ್ತಾಗುತ್ತಿಲ್ಲ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Metro Yellow Line
Advertisment
Advertisment
Advertisment