ಬೆಂಗಳೂರು ಮಂದಿಗೆ ‘ಮಜಾ’ ಸಮಾಚಾರ.. ಸಂಜೆ ಎಂಜಾಯ್​ಗೆ GBA ಭರ್ಜರಿ ಪ್ಲಾನ್..!

ವೀಕೆಂಡ್ ಬಂದ್ರೆ ಎಲ್ಲಿಗೆ ಹೋಗೋದು ಅಂತ ಯೋಚನೆ ಮಾಡ್ತಿದೀರಾ? ನಗರದ ಟ್ರಾಫಿಕ್ ಜಂಜಾಟದಿಂದ ಬೇಸತ್ತಿದ್ದೀರಾ? ಹಾಗಾದ್ರೆ ಬೆಂಗಳೂರಿಗರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಇನ್ಮುಂದೆ ನೀವು ನಗರದ ಪ್ರಮುಖ ಕೆರೆಗಳಲ್ಲೇ ಬೋಟಿಂಗ್ (Boating) ಮಜಾ ಅನುಭವಿಸಬಹುದು!

author-image
Ganesh Kerekuli
bengaluru lake
Advertisment

ಬೆಂಗಳೂರು: ವೀಕೆಂಡ್ ಬಂದ್ರೆ ಎಲ್ಲಿಗೆ ಹೋಗೋದು ಅಂತ ಯೋಚನೆ ಮಾಡ್ತಿದೀರಾ? ನಗರದ ಟ್ರಾಫಿಕ್ ಜಂಜಾಟದಿಂದ ಬೇಸತ್ತಿದ್ದೀರಾ? ಹಾಗಾದ್ರೆ ಬೆಂಗಳೂರಿಗರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಇನ್ಮುಂದೆ ನೀವು ನಗರದ ಪ್ರಮುಖ ಕೆರೆಗಳಲ್ಲೇ ಬೋಟಿಂಗ್ (Boating) ಮಜಾ ಅನುಭವಿಸಬಹುದು!

ಹೌದು, ಕೆರೆಗಳ ನಗರಿ ಬೆಂಗಳೂರಿನಲ್ಲಿ ಕೆರೆಗಳ ನಿರ್ವಹಣೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (GBA) ಹೊಸ ಯೋಜನೆ ರೂಪಿಸಿದೆ.

ಏನಿದು ಹೊಸ ಪ್ಲಾನ್?

ನಗರದ ಒಟ್ಟು 183 ಕೆರೆಗಳ ಪೈಕಿ ಆಯ್ದ ಪ್ರಮುಖ 10 ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಜಿಬಿಎ ಪ್ರಸ್ತಾವನೆ ಸಲ್ಲಿಸಿದೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (KLCDA) ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) ಜೊತೆ ಕೈಜೋಡಿಸಿರುವ ಪಾಲಿಕೆ, ಪರಿಸರ ಸ್ನೇಹಿ ಬೋಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.

ಇದನ್ನೂ ಓದಿ: ಅಮೆರಿಕಾದಲ್ಲಿ ಕರ್ನಾಟಕದ ವಿದ್ಯಾರ್ಥಿ ನಾಪತ್ತೆ.. ಪೋಷಕರಲ್ಲಿ ಕಾಡಿದ ಆತಂಕ!

bengaluru lake (1)

ಕೆರೆಗಳ ಪುನಶ್ಚೇತನವೇ ಮುಖ್ಯ ಉದ್ದೇಶ

ಒಂದು ಕಾಲದಲ್ಲಿ ಬೆಂಗಳೂರು ಕೆರೆಗಳಿಂದಲೇ ಹೆಸರುವಾಸಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ, ಒತ್ತುವರಿ ಹಾಗೂ ತ್ಯಾಜ್ಯದಿಂದಾಗಿ ಹಲವು ಕೆರೆಗಳು ಕಲುಷಿತಗೊಂಡಿವೆ. ಹೀಗಾಗಿ, ಕೆರೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ಆರಂಭಿಸಿ, ಅದರಿಂದ ಬರುವ ಆದಾಯವನ್ನು ಕೆರೆಗಳ ನಿರ್ವಹಣೆಗೆ ಬಳಸಿಕೊಳ್ಳುವುದು ಈ ಯೋಜನೆಯ ಹಿಂದಿನ ಉದ್ದೇಶವಾಗಿದೆ.

ಬೋಟಿಂಗ್ ಸೇವೆ ಲಭ್ಯವಿರುವ ಆ 10 ಕೆರೆಗಳು ಯಾವುವು?

  • ಹಲಸೂರು ಕೆರೆ (Halasuru Lake)
  • ಮಡಿವಾಳ ಕೆರೆ (Madiwala Lake)
  • ಸ್ಯಾಂಕಿ ಕೆರೆ (Sankey Tank)
  • ಯಲಹಂಕ ಕೆರೆ (Yelahanka Lake)
  • ಕಗ್ಗದಾಸಪುರ ಕೆರೆ (Kaggadasapura Lake)
  • ನಾಯಂಡಹಳ್ಳಿ ಕೆರೆ (Nayandahalli Lake)
  • ರಾಚೇನಹಳ್ಳಿ ಕೆರೆ (Rachenahalli Lake)
  • ವೆಂಗಯ್ಯನ ಕೆರೆ (Vengaihnakere)
  • ಬೇಗೂರು ಕೆರೆ (Begur Lake)
  • ರಾಮಪುರ ಕೆರೆ (Rampura Lake)

ಈಗಾಗಲೇ ಹಲಸೂರು, ಸ್ಯಾಂಕಿ ಮತ್ತು ಮಡಿವಾಳ ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆ ಇದ್ದರೂ ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಉಳಿದ ಕೆರೆಗಳಿಗೂ ವಿಸ್ತರಿಸಲು ಜಿಬಿಎ ಮಾಸ್ಟರ್ ಪ್ಲಾನ್ ಮಾಡಿದೆ. ಈ ಯೋಜನೆ ಜಾರಿಯಾದರೆ ಬೆಂಗಳೂರಿಗರಿಗೆ ಸಂಜೆ ಸಮಯ ಕಳೆಯಲು ಹೊಸ ತಾಣಗಳು ಸಿಕ್ಕಂತಾಗುತ್ತದೆ.

ಇದನ್ನೂ ಓದಿ: ಮಹಾಶಿವರಾತ್ರಿ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Bengaluru lakes
Advertisment