/newsfirstlive-kannada/media/media_files/2026/02/22/dhruvanat-2026-02-22-09-40-54.jpg)
ಬೆಂಗಳೂರು: ನ್ಯೂಸ್​ಫಸ್ಟ್, ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯದ ಸಹಕಾರದ ಜೊತೆಯಲ್ಲಿ​ ಆಯೋಜಿಸಿರುವ ಕರ್ನಾಟಕದ ಅತಿ ದೊಡ್ಡ ಎಲೆಕ್ಟ್ರಿಕ್​​ ವಾಹನಗಳ ಎಕ್ಸ್​ಪೋ ‘ಇವಿ ರೆಡಿ’ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
/filters:format(webp)/newsfirstlive-kannada/media/media_files/2026/02/22/dhruvanat-1-2026-02-22-09-41-09.jpg)
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿರುವ ಎಕ್ಸ್​ಪೋಗೆ ಮೊದಲ ದಿನ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಸಾವಿರಾರು ಜನ ಆಗಮಿಸಿ, ಎಕ್ಸ್​ಪೋನಲ್ಲಿ ಭಾಗಿಯಾಗಿರುವ 40ಕ್ಕೂ ಹೆಚ್ಚು ಬ್ರಾಂಡ್​ಗಳಿಂದ ತಮಗೆ ಬೇಕಿರುವ ಮಾಹಿತಿಯನ್ನ ಪಡೆದರು.
ಇದನ್ನೂ ಓದಿ: ಡೋನಾಲ್ಡ್ ಟ್ರಂಪ್‌ಗೆ ಗಾರ್ಡ್ ಸ್ಟೈಲ್ ಸೆಲ್ಯೂಟ್ ಹೊಡೆದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ : ಪಾಕಿಸ್ತಾನಕ್ಕೆ ಮುಜುಗರ
/filters:format(webp)/newsfirstlive-kannada/media/media_files/2026/02/22/dhruvanat-2-2026-02-22-09-41-22.jpg)
ಹಾಗೇ ಟೆಸ್ಟ್ ಡ್ರೈವ್ ಕೂಡ ಮಾಡಿದ್ದಾರೆ. ಎಕ್ಸ್​ಪೋನಲ್ಲಿ, ಎಲೆಕ್ಟ್ರಿಕ್ ಸ್ಕೂಟರ್​​, ಬೈಕ್​​, ಆಟೋ ​​ಕಾರುಗಳಿಂದ ಹಿಡಿದು ಬಸ್, ಟ್ರಕ್, ಟ್ರಾಕ್ಟರ್‌ಗಳವರೆಗೆ ಎಲ್ಲವೂ ಒಂದೇ ವೇದಿಕೆಯಲ್ಲಿ ಲಭ್ಯವಿದ್ದು ಪ್ರತಿಷ್ಠಿತ ಇವಿ ಬ್ರ್ಯಾಂಡ್​​ಗಳೆಲ್ಲ ಭಾಗಿಯಾಗಿವೆ.
ಇಂದು ಎರಡನೇ ದಿನ ಭಾನುವಾರವಾದ್ದರಿಂದ ಇನ್ನೂ ಹೆಚ್ಚಿನ ಜನರು ಎಕ್ಸ್​ಪೋಗೆ ಆಗಮಿಸುವ ನಿರೀಕ್ಷೆ ಇದೆ. ಇಂದು ಮತ್ತು ನಾಳೆ ಕೂಡ ಎಕ್ಸ್​​ಪೋ ಇರಲಿದ್ದು ನೀವೂ ಆಗಮಿಸಿ ಇವಿ ವಾಹನಗಳ ಬಗ್ಗೆ ಮಾಹಿತಿ ಪಡೆಯಿರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us