/newsfirstlive-kannada/media/media_files/2025/12/23/hdk-letter-to-ashiwni-vaishnaw-2025-12-23-14-23-14.jpg)
ಕುಮಾರಸ್ವಾಮಿ ಅವರಿಂದ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ ಬರೆದು ಒತ್ತಾಯ
ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಮಂಗಳೂರು ಮೂಲಕ ಗೋವಾದ ಮಡಗಾಂವ್‌ಗೆ ವಂದೇ ಭಾರತ್ ಟ್ರೇನ್ ಸಂಚಾರ ಆರಂಭಿಸುವಂತೆ ಕೇಂದ್ರದ ಉಕ್ಕು ಮತ್ತು ಭಾರಿ ಕೈಗಾರಿಕೆ ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ರೈಲ್ವೇ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಕರ್ನಾಟಕ-ಗೋವಾದಲ್ಲಿ ಈಗಾಗಲೇ ರೈಲ್ವೇ ಲೈನ್ ವಿದ್ಯುದ್ದೀಕರಣ ಯಶಸ್ವಿಯಾಗಿ ನಡೆದಿದೆ. ಹೀಗಾಗಿ ಈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ಸೇವೆಯನ್ನು ಆರಂಭಿಸುವುದು ಸೂಕ್ತ. ಬೆಂಗಳೂರು- ಕರ್ನಾಟಕದ ಕರಾವಳಿ ತೀರ ಪ್ರದೇಶ ಹಾಗೂ ಗೋವಾದ ಮಧ್ಯೆ ಹೈ ಸ್ಪೀಡ್ ರೈಲು ಸಂಪರ್ಕಕ್ಕಾಗಿ ಜನರ ಆಸೆ, ಆಕಾಂಕ್ಷೆಯಿಂದ ಕಾಯುತ್ತಿದ್ದಾರೆ.
ಹೀಗಾಗಿ ಬೆಂಗಳೂರಿನಿಂದ ಹಾಸನ, ಮಂಗಳೂರು ಜಂಕ್ಷನ್, ಉಡುಪಿ, ಕಾರವಾರ ಮೂಲಕ ಗೋವಾದ ಮಡಗಾಂವ್ ವರೆಗೂ ವಂದೇ ಭಾರತ್ ಎಕ್ಸ್ ಪ್ರೆಸ್ ಸೇವೆ ಆರಂಭಿಸಬೇಕೆಂದು ಕುಮಾರಸ್ವಾಮಿ ಅವರು ಕೇಂದ್ರದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಮಾರ್ಗವು ಹೆಚ್ಚಿನ ಸಂಖ್ಯೆಯ ವೈವಿಧ್ಯಮಯ ಪ್ರಯಾಣಿಕರನ್ನು ಹೊಂದಿದೆ. ಪ್ರವಾಸಿಗರು, ಯಾತ್ರಾರ್ಥಿಗಳು, ಶಿಕ್ಷಣ, ವೃತ್ತಿಪರರು ಸೇರಿದಂತೆ ವೈವಿಧ್ಯಮಯ ಪ್ರಯಾಣಿಕರನ್ನು ಹೊಂದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಮಾರ್ಗದ ರೈಲ್ವೇ ಸಂಪರ್ಕವು ಐಟಿ ರಾಜಧಾನಿ ಬೆಂಗಳೂರು ಅನ್ನು ಕಮರ್ಷಿಯಲ್ ಬಂದರು, ಕರ್ನಾಟಕದ ಕರಾವಳಿ ತೀರದ ಪ್ರವಾಸಿ ಸ್ಥಳಗಳು ಹಾಗೂ ಗೋವಾದ ಜೊತೆ ಸಂಪರ್ಕವನ್ನು ಬಲಪಡಿಸುತ್ತದೆ.
ಬೆಂಗಳೂರು- ಗೋವಾದ ಮಡಗಾಂವ್ ನಡುವಿನ ವಂದೇ ಭಾರತ್ ರೈಲು ಸಂಪರ್ಕದ ಪ್ರಸ್ತಾವವನ್ನು ಪರಿಗಣಿಸಿ, ನೈಋತ್ಯ ರೈಲ್ವೇ ಅಧಿಕಾರಿಗಳಿಗೆ ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ಕೊಡಬೇಕೆಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ವಂದೇ ಭಾರತ್ ಟ್ರೇನ್ ಸೇವೆ ಆರಂಭಿಸಿದರೇ, ಪ್ರಯಾಣಿಕರ ಬೇಡಿಕೆಯನ್ನು ಈಡೇರಿಸಿದಂತಾಗಲಿದ್ದು, , ಪ್ರಾದೇಶಿಕ ಆರ್ಥಿಕ ಚಟುವಟಿಕೆಗೆ ಉತ್ತೇಜನ ಸಿಗಲಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ, ಅಂತರ್ ರಾಜ್ಯ ಸಂಪರ್ಕ ಸಿಗಲಿದೆ. ಈ ಮೂಲಕ ಕೇಂದ್ರ ಸರ್ಕಾರದ ದೂರದೃಷ್ಟಿಯಾದ ಸಮಗ್ರ, ದಕ್ಷ ಮತ್ತು ಆಧುನಿಕ ರೈಲು ನೆಟ್ ವರ್ಕ್ ಅನ್ನು ಬೆಂಬಲಿಸಿದಂತೆ ಆಗುತ್ತೆ ಎಂದು ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/23/hdk-letter-to-ashiwni-vaishnaw-1-2025-12-23-14-26-18.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us