/newsfirstlive-kannada/media/media_files/2025/12/04/baby-and-venkateshan-suicide-and-murder-2025-12-04-14-12-15.jpg)
ಪತ್ನಿ ಬೇಬಿ ಹಾಗೂ ಪತಿ ವೆಂಕಟೇಶನ್ ಸಾವು
ಬೆಂಗಳೂರಿನಲ್ಲಿ ವೃದ್ದ ಪತ್ನಿಯನ್ನ ಕೊಂದು ವೃದ್ದ ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೆಂಕಟೇಶನ್ (65) ಪತ್ನಿ ಬೇಬಿ(60) ಯನ್ನ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ವೃದ್ಧ. ಬಿಎಂ ಟಿಸಿ ಡ್ರೈವರ್ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದ ವೆಂಕಟೇಶನ್, ವೃದ್ದ ಪತ್ನಿ ಜೊತೆಗೆ ವಾಸ ಇದ್ದರು.
ವೃದ್ದ ಪತ್ನಿ ಬೇಬಿಗೆ ಸ್ಟ್ರೋಕ್ ಹೊಡೆದು ಹಾಸಿಗೆ ಹಿಡಿದಿದ್ದರು. ಇಬ್ಬರಿಗೂ ಸಣ್ಣಪುಟ್ಟ ವಿಚಾರಗಳಿಗೆ ಆಗಾಗ ಜಗಳ ಆಗುತ್ತಿತ್ತು. ಇಬ್ಬರು ಮಕ್ಕಳಿದ್ದು ಅವರು ಹೊರಗಡೆ ಹೋದಾಗ ವೃದ್ಧ ದಂಪತಿ ಜಗಳ ಮಾಡಿಕೊಳ್ಳುತ್ತಿದ್ದರು. ಗಲಾಟೆ ವಿಕೋಪಕ್ಕೆ ಹೋಗಿ ಪತ್ನಿಯನ್ನು ವೆಂಕಟೇಶನ್ ಕೊಲೆ ಮಾಡಿದ್ದಾರೆ.
ಬಟ್ಟೆ ಒಣಗಿ ಹಾಕುವ ಹಗ್ಗವನ್ನು ಪತ್ನಿಯ ಕತ್ತು ಸುತ್ತಿ ಕೊಲೆ ಮಾಡಲಾಗಿದೆ. ನಂತರ ಅದೇ ಹಗ್ಗದಲ್ಲಿ ತಾನೂ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
/filters:format(webp)/newsfirstlive-kannada/media/media_files/2025/12/04/subramanya-pura-police-station-2025-12-04-14-14-00.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us