/newsfirstlive-kannada/media/media_files/2025/12/24/bengaluru-wife-2025-12-24-09-14-34.jpg)
ಬೆಂಗಳೂರು: ಪತಿಯೇ ಪತ್ನಿಯನ್ನು ಶೂಟ್​ ಮಾಡಿ ಜೀವ ತೆಗೆದ ಘಟನೆ ಬೆಂಗಳೂರಲ್ಲಿ ನಡೆದಿದೆ. ಬಸವೇಶ್ವರನಗರದ ವೆಸ್ಟ್ ಇನ್ ಹೋಟೆಲ್ ಬಳಿ ಕೃತ್ಯ ನಡೆದಿದೆ.
ಕೌಟುಂಬ ಕಲಹ ಹಿನ್ನೆಲೆಯಲ್ಲಿ ಪತಿ ಬಾಲ ಮುರುಗನ್ ಹಾಗೂ ಪತ್ನಿ ಭುವನೇಶ್ವರಿ ನಡುವೆ ಡಿವೋರ್ಸ್ ಕೇಸ್ ನಡೆಯುತ್ತಿತ್ತು. ನಿನ್ನೆ ಸಂಜೆ 6.30ರ ವೇಳೆಯಲ್ಲಿ ಕೋರ್ಟ್ ಕೇಸ್ ಮುಗಿಸಿಕೊಂಡು ಭುವನೇಶ್ವರಿ ಬರುತ್ತಿದ್ದ ವೇಳೆ ಪತಿ ಬಾಲ ಮುರುಗನ್ ಎದುರಾಗಿದ್ದ. ಇಬ್ಬರ ನಡುವೆ​ ಜಗಳ ತಾರಕಕ್ಕೇರಿ ಪತ್ನಿಗೆ ಶೂಟ್​ ಮಾಡಿದ ಬಾಲಮುರುಗನ್ ಬಳಿಕ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ತಮಿಳುನಾಡು ಮೂಲದ ದಂಪತಿ ಇವರಾಗಿದ್ದು ಬಾಲ ಮುರುಗನ್ ವೃತ್ತಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದಾನೆ. ಇನ್ನು ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿಯಾಗಿದ್ದರು. ನಾಲ್ಕು ಬಾರಿ ಪತ್ನಿಯ ಮೇಲೆ ಗುಂಡು ಹಾರಿಸಿದ್ದಾನೆ. 2 ಗುಂಡು ತಲೆಗೆ ಹಾಗೂ 2 ಗುಂಡು ಕೈಗೆ ತಗುಲಿದೆ, ಪಿಸ್ತೂಲ್​ಗೆ ಲೈಸೆನ್ಸ್ ಇದ್ಯಾ, ಇಲ್ವಾ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us