/newsfirstlive-kannada/media/media_files/2025/09/09/darshan-6-2025-09-09-11-51-10.jpg)
ನನಗೆ ಇಲ್ಲಿ ಬದುಕಲು ಆಗುತ್ತಿಲ್ಲ. ಸ್ವಲ್ಪ ಪಾ*ಸನ್ ಕೊಡಿ ಎಂದು ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಬಳ್ಳಾರಿ ಜೈಲು ಶಿಫ್ಟ್ ಹಾಗೂ ಹಾಸಿಗೆ ದಿಂಬಿಗಾಗಿ ಸಲ್ಲಿಸಿದ್ದ ಅರ್ಜಿ ಸಂಬಂಧ ಇವತ್ತು 64ನೇ ಸಿಟಿ ಸಿವಿಲ್ ಕೋರ್ಟ್ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಪವಿತ್ರ ಗೌಡ, ದರ್ಶನ್ ಸೇರಿ 7 ಆರೋಪಿಗಳನ್ನು ವಿಡಿಯೋ ಕಾನ್ಫೆರನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲಾಯಿತು.
ವಿಚಾರಣೆ ವೇಳೆ ಬ್ಲಾಕ್ ಟಿ-ಶರ್ಟ್ ಧರಿಸಿ ಹಿಂದೆ ಕೈಕಟ್ಟಿ ದರ್ಶನ್ ನಿಂತಿದ್ದರು. ಈ ವೇಳೆ ಸ್ವಲ್ವ ನನಗೆ ಪಾ*ಸನ್ ಕೊಡಿ. ಬಿಸಿಲು ನೋಡಿ ತುಂಬಾ ದಿನ ಆಯಿತು. ಬಟ್ಟೆ ವಾಸನೆ ಬರ್ತಿದೆ. ಬದುಕಲು ಆಗುತ್ತಿಲ್ಲ ಇಲ್ಲಿ. ನನಗೆ ಒಬ್ಬನಿಗೆ ಪಾ*ಸನ್ ಕೊಡಿ ಸಾಕು ಬೇರೆ ಯಾರಿಗೂ ಬೇಡ ಎಂದು ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದಾರೆ.
ದರ್ಶನ್ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು.. ಇಲ್ಲ. ಅದೆಲ್ಲ ಆಗೋದಿಲ್ಲ. ಜೈಲಿನ ಅಧಿಕಾರಿಗಳಿಗೆ ಸೂಚನೆ ಕೊಡ್ತಿವಿ ಎಂದು ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿದರು. ಜೊತೆಗೆ ಬಳ್ಳಾರಿ ಜೈಲಿಗೆ ಶಿಫ್ಟ್ ಕುರಿತ ವಿಚಾರಣೆಯನ್ನ ಮಧ್ಯಾಹ್ನ 3 ಗಂಟೆಗೆ ಮತ್ತೆ ನಡೆಸೋದಾಗಿ ತಿಳಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ