/newsfirstlive-kannada/media/media_files/2025/12/02/bangalore-airport-pick-up-and-drop-point02-2025-12-02-15-33-09.jpg)
8 ನಿಮಿಷಕ್ಕಿಂತ ಹೆಚ್ಚು ಹೊತ್ತು ಕಾರ್ ನಿಲ್ಲಿಸಿದರೇ, ಶುಲ್ಕ ವಿಧಿಸಲು ನಿರ್ಧಾರ
ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಹೊಸ ರೂಲ್ಸ್ ಜಾರಿಗೆ ಬರುತ್ತಿದೆ.. ಏರ್ ಪೋರ್ಟ್ ನಲ್ಲಿ ಪ್ರಯಾಣಿಕರನ್ನು ಕಾರಿಗೆ ಹತ್ತಿಸಿಕೊಳ್ಳಲು ಮತ್ತು ಇಳಿಸಲು ಕೆಲವು ಕಾರ್ ಗಳು ಬಹಳ ಸಮಯ ತೆಗೆದುಕೊಳ್ಳುತ್ತಾವೆ. ಇದರಿಂದ ಏರ್ ಪೋರ್ಟ್ ಪಿಕಪ್ ಮತ್ತು ಡ್ರಾಪ್ ಪಾಯಿಂಟ್ ನಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಇದನ್ನು ತಪ್ಪಿಸಲು ತುಂಬ ಸಮಯ ವಾಹನವನ್ನು ಏರ್ ಪೋರ್ಟ್ ನ ಪಿಕಪ್ ಮತ್ತು ಡ್ರಾಪ್ ಪಾಯಿಂಟ್ ನಲ್ಲಿ ನಿಲ್ಲಿಸಿದರೇ,ದಂಡ ವಿಧಿಸುವ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.
ಏರ್ ಪೋರ್ಟ್ ನಲ್ಲಿ ಪಿಕ್ ಅಪ್ ಅಂಡ್ ಡ್ರಾಪ್ ಗೆ ಬರುವ ವಾಹನಗಳಿಗೆ ನಿರ್ದಿಷ್ಟ ಸಮಯ ನಿಗದಿ ಮಾಡಲಾಗಿದೆ. ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ವಾಹನ ನಿಲ್ಲಿಸಿದ್ರೆ ದಂಡ ವಿಧಿಸಲಾಗುತ್ತೆ. ಡಿಸೆಂಬರ್ 8ನೇ ತಾರೀಖಿನಿಂದ ಹೊಸ ನಿಯಮ ಜಾರಿಯಾಗಲಿದೆ. ಪಿಕಪ್ ವಾಹನಗಳು ವಿಮಾನ ನಿಲ್ದಾಣದಲ್ಲಿ ಗರಿಷ್ಠ 8 ನಿಮಿಷ ನಿಲ್ಲಿಸಬಹುದು. ಅದನ್ನು ಮೀರಿದ ಎಲ್ಲಾ ವಾಹನ ಬಳಕೆದಾರರಿಗೆ 8-13 ನಿಮಿಷಗಳ ಕಾಲ ಉಳಿಯಲು ರೂ.150/- ಶುಲ್ಕ ವಿಧಿಸಲಾಗುತ್ತೆ. 13-18 ನಿಮಿಷಗಳಿಗೆ ರೂ.300/- ಶುಲ್ಕ ವಿಧಿಸಲಾಗುತ್ತದೆ. 18 ನಿಮಿಷಗಳಿಗಿಂತ ಹೆಚ್ಚು ಕಾಲ ವಾಹನ ನಿಲ್ಲಿಸಿದರೆ ಹತ್ತಿರದ ಪೊಲೀಸ್ ಠಾಣೆಗೆ ಟೋಯಿಂಗ್ ಮಾಡಲಾಗುತ್ತದೆ.
ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಕ್ಯಾಬ್‌ಗಳು ನಿಗದಿಪಡಿಸಿದ ಪಾರ್ಕಿಂಗ್ ವಲಯಗಳಲ್ಲಿ ಮಾತ್ರ ಕಾಯಬೇಕು. 10 ನಿಮಿಷಗಳ ಕಾಲ ಮಾತ್ರ ಉಚಿತ ಪಾರ್ಕಿಂಗ್ ಮಾಡಬಹುದು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಹೇಳಿದೆ.
/filters:format(webp)/newsfirstlive-kannada/media/media_files/2025/12/02/bangalore-airport-pick-up-and-drop-point-2025-12-02-15-34-41.jpg)
ಪಿಕಪ್ ಮತ್ತು ಡ್ರಾಪ್ ಬರುವ ವಾಹನಗಳಿಂದ ಟ್ರಾಫಿಕ್ ಸಮಸ್ಯೆ ಹಿನ್ನೆಲೆಯಲ್ಲಿ ಈ ಹೊಸ ನಿಯಮ ಜಾರಿಗೊಳಿಸಲಾಗುತ್ತಿದೆ. ಏರ್ ಪೋರ್ಟ್ ಟರ್ಮಿನಲ್ 1 & 2ರ ಬಳಿ ವಾಹನ ದಟ್ಟಣೆ ಉಂಟಾಗುತ್ತಿದೆ. ಖಾಸಗಿ ವಾಹನಗಳು ಹೆಚ್ಚು ಸಮಯ ಪಾರ್ಕಿಂಗ್ ಮಾಡುತ್ತಿದ್ದಾರೆ. ಕ್ಯಾಬ್ ಗಳು ಸಹ ನಿಯಮ ಉಲ್ಲಂಘನೆ ಮಾಡುತ್ತಿವೆ. ಹೀಗಾಗಿ, ಏರ್ ಪೋರ್ಟ್ ಬಳಿ ಟ್ರಾಫಿಕ್ ಕಂಟ್ರೋಲ್ ಮಾಡುವ ಉದ್ದೇಶ ಹಾಗೂ ಅನಧಿಕೃತ ಪಾರ್ಕಿಂಗ್ ತಡೆಗಟ್ಟುವ ಕಾರಣದಿಂದ ದಂಡ ಅಸ್ತ್ರ ಪ್ರಯೋಗ ಮಾಡಲು ಕೆಐಎಎಲ್ ನಿರ್ಧರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us