/newsfirstlive-kannada/media/media_files/2025/11/18/road-side-parking-vehicles-will-be-auctioned-2025-11-18-15-44-00.jpg)
ರಸ್ತೆ ಬದಿ ಅನಧಿಕೃತ ನಿಲ್ಲಿಸಿದ ವಾಹನಗಳ ಹರಾಜು!
ಬೆಂಗಳೂರಿನಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ತಿಂಗಳುಗಟ್ಟಲೆ ವಾಹನ ನಿಲ್ಲಿಸಿದ್ದೀರಾ ಎಚ್ಚರ..! ನಿಮ್ಮ ವಾಹನಗಳ ಟೋಯಿಂಗ್ ಗೆ ಗ್ರೇಟರ್ ಬೆಂಗಳೂರು ಅಥಾರಿಟಿ ಮುಂದಾಗಿದೆ. ಅನಧಿಕೃತವಾಗಿ ತಿಂಗಳುಗಟ್ಟಲೇ ಒಂದೇ ಜಾಗದಲ್ಲಿ ನಿಂತ ವಾಹನಗಳ ವಿರುದ್ಧ ಜಿಬಿಎ ಕ್ರಮ ಕೈಗೊಳ್ಳಲಿದೆ. ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ಟೋಯಿಂಗ್ ಮಾಡಲು ಜಿಬಿಎ ನಿರ್ಧರಿಸಿದೆ. ಟೋಯಿಂಗ್ ಆದ ವಾಹನಗಳನ್ನು ಪೊಲೀಸರ ಜೊತೆ ಸೇರಿ ಹರಾಜು ಹಾಕಲಾಗುತ್ತೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವೇ ವಾಹನಗಳನ್ನು ಹರಾಜು ಹಾಕುತ್ತೆ. ರಸ್ತೆ ಬದಿ ವಾಹನ ನಿಲ್ಲಿಸಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಳವಾಗಿದೆ. ಹೀಗಾಗಿ ಸಂಚಾರ ಪೊಲೀಸ್ ಇಲಾಖೆ ಜೊತೆ ಒಗ್ಗೂಡಿ ಟೋಯಿಂಗ್ ಮಾಡಲು ನಿರ್ಧಾರ ಮಾಡಲಾಗಿದೆ. ನಂತರ ವಾಹನಗಳನ್ನ ಹರಾಜು ಹಾಕಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಟ್ರಾಫಿಕ್ ಸಮಸ್ಯೆ ಸರಿದೂಗಿಸಲು ಜಿಬಿಎ ಹೊಸ ಅಸ್ತ್ರ ಪ್ರಯೋಗಿಸುತ್ತಿದೆ. ಅನಧಿಕೃತವಾಗಿ ತಿಂಗಳುಗಟ್ಟಲೇ ಒಂದೇ ಜಾಗದಲ್ಲಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ರು ಸಾರ್ವಜನಿಕರು ಕೇರ್ ಮಾಡದೇ ರಸ್ತೆಯಲ್ಲೇ ವಾಹನ ನಿಲ್ಲಿಸಿದ್ದಾರೆ. ಜಿಬಿಎ ಅಧಿಕಾರಿಗಳ ಮನವಿಗೆ ಸಾರ್ವಜನಿಕರು ತಲೆಕೆಡಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ವಾಹನಗಳ ಟೋಯಿಂಗ್ ಗೆ ತೀರ್ಮಾನ ಮಾಡಲಾಗಿದೆ. ಇದರಿಂದ ಟ್ರಾಫಿಕ್ ಸಮಸ್ಯೆ ತುಸು ಸರಿಯಾಗಬಹುದು ಅಂತ ಅಧಿಕಾರಿಗಳಲ್ಲಿ ಭರವಸೆ ಇದೆ. ಆಯಾ ಪಾಲಿಕೆ ವ್ಯಾಪ್ತಿಗಳಲ್ಲಿ ನಿಂತ ವಾಹನಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳು ಹರಾಜು ಹಾಕುವರು.
/filters:format(webp)/newsfirstlive-kannada/media/media_files/2025/11/18/road-side-parking-vehicles-will-be-auctioned02-2025-11-18-15-47-07.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us