ಇನ್ಮೇಲೆ ವಿಡಿಯೋ ಬೇಕಾ ಅಂದ್ರೆ ಹುಷಾರ್.. ಇವ್ರ ಗತಿ ಏನಾಗಿದೆ ನೋಡಿ..!

ಬೆಳೆಯುವ ಸಿರಿ ಮೊಳಕೆಯಲ್ಲೇ ಅಂತಾರೆ. ಆದ್ರೆ ಇತ್ತೀಚೆಗೆ ಅದ್ಯಾಕೋ ಓದೋ ಮಕ್ಕಳು ಅಡ್ಡದಾರಿ ಹಿಡಿತಿದ್ದಾರೆ. ಅಶ್ಲೀಲ ವಿಡಿಯೋಗಳನ್ನ ಬಿಟ್ಟು 19 min , 40 min, 55 min ಅಂತ ಪ್ರಮೋಟ್​​ ಮಾಡ್ತಾಯಿದ್ದವ್ರರಿಗೆ ತಕ್ಕ ಪಾಠ ಕಲಿಸೋಕೆ ಪೊಲೀಸರು ಮುಂದಾಗಿದ್ದಾರೆ.

author-image
Ganesh Kerekuli
bengaluru case
Advertisment

ಬೆಳೆಯುವ ಸಿರಿ ಮೊಳಕೆಯಲ್ಲೇ ಅಂತಾರೆ. ಆದ್ರೆ ಇತ್ತೀಚೆಗೆ ಅದ್ಯಾಕೋ ಓದೋ ಮಕ್ಕಳು ಅಡ್ಡದಾರಿ ಹಿಡಿತಿದ್ದಾರೆ.  ಮೀಸೆನೇ ಮುಖದ ಮೇಲೆ ಸರಿಯಾಗಿ ಚಿಗುರಿರೋದಿಲ್ಲಾ ಅಂತದ್ರಲ್ಲಿ ಸೋಶಿಯಲ್​ ಮಿಡಿಯಾದಲ್ಲಿ ಪೋರ್ನ್​ ವಿಡಿಯೋ ಶೇರ್​ ಮಾಡ್ತಿದ್ದಾರೆ. ಆದ್ರೀಗ ಅಶ್ಲೀಲ ವಿಡಿಯೋಗಳನ್ನ ಬಿಟ್ಟು 19 min , 40 min, 55 min ಅಂತ ಪ್ರಮೋಟ್​​ ಮಾಡ್ತಾಯಿದ್ದವ್ರರಿಗೆ ತಕ್ಕ ಪಾಠ ಕಲಿಸೋಕೆ ಪೊಲೀಸರು ಮುಂದಾಗಿದ್ದಾರೆ. 

ವಿಡಿಯೋ ಬೇಕಾದ್ರೆ ಕಾಮೆಂಟ್, ಡಿಎಂ ಮಾಡಿ ಅಂದಿದ್ಕೆ FIR

ಸೋಶಿಯಲ್​ ಮಿಡಿಯಾ ಅಂದ್ರೆ ಬರೀ 18+ ಮಾತ್ರ ಬಳಸೋದಿಲ್ಲಾ ಇತ್ತೀಚೆಗೆ ಪ್ರೈಮರಿ ಸ್ಕೂಲ್​ ಮಕ್ಕಳೂ ಬಳಸ್ತಾರೆ. ಆದ್ರೆ, ಇಂತ ಹೊತ್ತಲ್ಲಿ ಹೀಗೆ ಅಶ್ಲೀಲ ವಿಡಿಯೋ ಪ್ರಮೋಟ್ ಮಾಡೋದು. ಫುಲ್​ ವಿಡಿಯೋ   ಬೇಕಾದ್ರೆ ಕಾಮೆಂಟ್, ಡಿಎಂ ಮಾಡಿ ಅನ್ನೋದು ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಪರಿಣಾಮ ಬೀಳುತ್ತೆ. ಅಲ್ಲದೇ ಸುಲಭವಾಗಿ ಕೆಟ್ಟ ದಾರಿ ಹಿಡಿಯುವಂತೆ ಮಾಡುತ್ತೆ. ಹೀಗಾಗಿ ಖಾಸಗಿ ದೂರಿನ ಆಧಾರದ ಮೇಲೆ ಸೆಂಟ್ರಲ್ ಸೆನ್ ಠಾಣೆಯಲ್ಲಿ FIR ದಾಖಲಾಗಿದೆ. 

ವಿಡಿಯೋ ಬೇಕಾ ಅಂದ್ರೆ ಬೀಳುತ್ತೆ FIR

  • ಸ್ಕ್ರೀನ್ ಶಾಟ್​​ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡೋ ಆರೋಪಿಗಳು
  • ವಿಡಿಯೋ ಬೇಕಿದ್ರೆ ಕಮೆಂಟ್, ಡೈರೆಕ್ಟ್ ಮೆಸೇಜ್ ಮಾಡಿ ಅಂತ ಪೋಸ್ಟ್
  • ಲಿಂಕ್ ಇನ್ ಬಯೋ ಎಂದು link ಅಪ್ಲೋಡ್ ಮಾಡ್ತಿದ್ದ ಆರೋಪಿಗಳು
  • ಈ ಪೋಸ್ಟ್​​ನಿಂದ ಜನ ಅಶ್ಲೀಲ ವೆಬ್​​ಸೈಟ್​ ಕಡೆ ಗಮನ ವಹಿಸುತ್ತಿದ್ದಾರೆ
  • ಅಪ್ಲೋಡ್ ಆದ ಲಿಂಕ್ ನೇರವಾಗಿ ಅಶ್ಲೀಲ ವೆಬ್​​ಸೈಟ್​ಗೆ ಸಂಪರ್ಕಿಸುತ್ತೆ
  • ಸೋಶಿಯಲ್ ಮೀಡಿಯಾವನ್ನ ಎಲ್ಲಾ ವಯೋಮಾನದವರು ಬಳಸ್ತಿದ್ದಾರೆ
  • ಕುತೂಹಲಕ್ಕಾದರೂ ಕೆಲವರು ಆ ಲಿಂಕ್​ಗಳು ಓಪನ್ ಮಾಡಿ ನೋಡ್ತಾರೆ
  • ಮಕ್ಕಳು ಸೇರಿದಂತೆ ಹಲವರು ಅಶ್ಲೀಲ ವೆಬ್​ಸೈಟ್​​ಗೆ ಅಟ್ರ್ಯಾಕ್ಟ್ ಆಗ್ತಿದ್ದಾರೆ
  • ಈ ಕಾರಣದಿಂದ ಪೋಸ್ಟ್ ಮಾಡೋರ ವಿರುದ್ಧ ಕ್ರಮಕ್ಕಾಗಿ FIR ದಾಖಲು
  • ಇನ್​ಸ್ಟಾ, ಫೇಸ್​ಬುಕ್, ಯೂಟ್ಯೂಬ್​ನಲ್ಲಿ ವಿಡಿಯೋ ಪೋಸ್ಟ್ ಮಾಡ್ತಿದ್ದಾರೆ
  • ಖಾಸಗಿ ದೂರಿನ ಆಧಾರದ ಮೇಲೆ ಸೆಂಟ್ರಲ್ ಸೆನ್ ಠಾಣೆಯಲ್ಲಿ ಎಫ್​ಐಆರ್​
  • ಒಟ್ಟು 28 ಖಾತೆಗಳ ಮೇಲೆ ಎಫ್ಐಆರ್ ದಾಖಲಿಸಿ ಪೊಲೀಸರಿಂದ ತನಿಖೆ

ಅದೇನೇ ಹೇಳಿ ತಮ್ಮ ಫಾಲೋವರ್ಸ್​ ಜಾಸ್ತಿ ಮಾಡಿಕೊಳ್ಳೋದಕ್ಕೆ 19min, 40 min & 55 min ವಿಡಿಯೋ ಅಂತ ಅಶ್ಲೀಲ ವಿಡಿಯೋ ಪ್ರಮೋಟ್ ಮಾಡ್ತಿದ್ದ ಇಂತಹ ಖದೀಮರಿಗೆ ತಕ್ಕ ಶಾಸ್ತಿ ಆಗಬೇಕಿದೆ. ಕೋತಿ ತಾನು ಕೆಡೋದಲ್ಲದೆ ವನ ಕೆಡಸ್ತು ಅನ್ನೋ ಹಾಗೇ ಯಾವತ್ತು ಆಗಬಾರದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru News
Advertisment