/newsfirstlive-kannada/media/media_files/2025/08/31/wine-2025-08-31-09-20-47.jpg)
ಬೆಂಗಳೂರಿನ ಕೆಲವು ನಗರಗಳಲ್ಲಿ ಇಂದು ಮದ್ಯ ಮಾರಾಟ ನಿಷೇಧ ಹೇರಲಾಗಿದೆ. ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಸಿಎಲ್ -4 ಸಿಎಲ್-6 ಪರವಾನಗಿ ಹೊರತು ಪಡಿಸಿ ಎಲ್ಲ ಬಾರ್-ರೆಸ್ಟೋರೆಂಟ್, ವೈನ್ ಶಾಪ್, ಪಬ್ ಎಂಎಸ್ ಐಎಲ್ ಮಳಿಗೆ ಬಂದ್ ಇರಲಿದೆ.
ಎಲ್ಲೆಲ್ಲಿ ಮದ್ಯ ಸಿಗಲ್ಲ..?
ಆರ್ಟಿ ನಗರ, ಜೆಸಿ ನಗರ, ಸಂಜಯ್ ನಗರ, ಹೆಬ್ಬಾಳ, ಕೆಜಿ ಹಳ್ಳಿ, ಡಿಜೆಹಳ್ಳಿ, ಗೋವಿಂದಪುರ, ಭಾರತೀನಗರ, ಪುಲಕೇಶಿನಗರ, ಹಲಸೂರು, ಯಲಹಂಕ, ಕಮರ್ಷಿಯಲ್ ಸ್ಟ್ರೀಟ್, ಕೊಡಿಗೆಹಳ್ಳಿ, ವಿದ್ಯಾರಣ್ಯಪುರ, ಹೆಬ್ಬಗೋಡಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಇನ್ನು ಸೆಪ್ಟೆಂಬರ್ 14ರ ಬೆಳಗ್ಗೆ 6ಗಂಟೆಯಿಂದ ಸೆ.15ರ ಬೆಳಗ್ಗೆ 6 ಗಂಟೆವರೆಗೆ ಕಾಮಾಕ್ಷಿಪಾಳ್ಯ ಹಾಗೂ ವಿಜಯನಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ:ಬಿಡಿಎನಲ್ಲಿ ಬದಲಾವಣೆ ಪರ್ವ.. ಮಾಸ್ಟರ್ ಪ್ಲಾನ್ 2041, ಏನಿದು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ