/newsfirstlive-kannada/media/media_files/2025/12/06/bangalore-jail-warden-arrest-2025-12-06-12-48-44.jpg)
ಜೈಲು ವಾರ್ಡನ್ ರಾಹುಲ್ ಪಾಟೀಲ್ ಬಂಧನ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ವಾರ್ಡನ್ ರಾಹುಲ್ ಪಾಟೀಲ್ ಎಂಬಾತನನ್ನು ಬಂಧಿಸಲಾಗಿದೆ.
ರಾಹುಲ್ ಪಾಟೀಲ್ ಬಳಿ ಸಿಗರೇಟ್ ಮತ್ತು ನಿಷೇಧಿತ ಮಾದಕ ವಸ್ತು ಪತ್ತೆ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಲಾಗಿದೆ. ಕಾರಾಗೃಹ ಅಧೀಕ್ಷಕ ಪರಮೇಶ್ ದೂರು ಆಧರಿಸಿ ಅರೆಸ್ಟ್… ಮಾಡಲಾಗಿದೆ. ಸಿಬ್ಬಂದಿ ತಪಾಸಣೆ ವೇಳೆ ರಾಹುಲ್ ಪಾಟೀಲ್ ಬಳಿ ಸಿಗರೇಟ್ ಪ್ಯಾಕೆಟ್, ಮಾದಕ ವಸ್ತು ಪತ್ತೆಯಾಗಿತ್ತು. 60 ಗ್ರಾಂ ನಿಷೇಧಿತ ತೆಳುವಾದ ಪೇಪರ್ ಮಾದರಿಯ ಮಾದಕ ವಸ್ತು ಪತ್ತೆಯಾಗಿತ್ತು. … ಕಳೆದ ಡಿಸೆಂಬರ್ 4 ರಂದು ಸಂಜೆ ಜೈಲಿನ ಎಂಟ್ರಿ ಭಾಗದ ಬಳಿ ತಪಾಸಣೆ ವೇಳೆ ಪತ್ತೆಯಾಗಿತ್ತು. ಕೂಡಲೇ ಜೈಲಿನ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2018 ರಲ್ಲಿ ವಾರ್ಡನ್ ಆಗಿ ರಾಹುಲ್ ಪಾಟೀಲ್ ಕಾರಾಗೃಹ ಇಲಾಖೆಗೆ ಸೇರ್ಪಡೆಯಾಗಿದ್ದ. ಈ ಹಿಂದೆ ಬೆಳಗಾವಿ ಕಾರಾಗೃಹದಲ್ಲಿ ಸೇವೆ…ಸಲ್ಲಿಸಿದ್ದ. ಈ ವರ್ಷದ ಜುಲೈನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸೇವೆ ಸಲ್ಲಿಸುತ್ತಿದ್ದ. ಆದರೇ, ಇದೀಗ ತಾನು ಸೇವೆ ಸಲ್ಲಿಸುತ್ತಿದ್ದ ಜೈಲಿಗೆ ಆರೋಪಿಯಾಗಿ ಸೇರ್ಪಡೆಯಾಗುವಂತೆ ಪರಿಸ್ಥಿತಿಯನ್ನು ರಾಹುಲ್ ಪಾಟೀಲ್ ತಂದುಕೊಂಡಿದ್ದಾನೆ. ತನ್ನ ಸ್ವಯಂಕೃತ ಅಪರಾಧದಿಂದ ಜೈಲು ವಾರ್ಡನ್ ರಾಹುಲ್ ಪಾಟೀಲ್ ಬೇಲ್ ಸಿಗುವವರೆಗೂ ಪರಪ್ಪನ ಅಗ್ರಹಾರ ಜೈಲು ವಾಸಿಯಾಗುತ್ತಿದ್ದಾನೆ.
/filters:format(webp)/newsfirstlive-kannada/media/media_files/2025/08/22/bangalore-central-jail-2025-08-22-18-16-58.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us