/newsfirstlive-kannada/media/media_files/2025/12/05/flight-ticket-rise-2025-12-05-16-43-50.jpg)
ಇಂಡಿಗೋ ಎಫೆಕ್ಟ್ , ಭಾರಿ ಏರಿಕೆಯಾದ ಏರ್ ಟಿಕೆಟ್ ದರ!
ಇಂಡಿಗೋ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿವೆ. ಇಂದು ಕೂಡ 600 ವಿಮಾನಗಳ ಸಂಚಾರ ರದ್ದಾಗಿದೆ. ಇದರಿಂದಾಗಿ ಪರಿಸ್ಥಿತಿಯ ಲಾಭ ಪಡೆದು ಬೇರೆ ವಿಮಾನಯಾನ ಸಂಸ್ಥೆಗಳು ಭರ್ಜರಿ ಲಾಭ ಮಾಡಿಕೊಳ್ಳಲು ಹೊರಟಿವೆ. ಇದರಿಂದ ವಿಮಾನ ಪ್ರಯಾಣಿಕರ ಜೇಬಿಗೆ ಭಾರಿ ಹೊಡೆತ ಬಿದ್ದಿದೆ. ಇಂಡಿಗೋ ನಮ್ಮ ದೇಶದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆ. ಇಂಡಿಗೋ ವಿಮಾನ ಸಂಚಾರ ರದ್ದಾಗುತ್ತಿರುವುದರಿಂದ ಪ್ರಯಾಣಿಕರು ಏರ್ ಪೋರ್ಟ್ ಗಳಲ್ಲಿ ಪರದಾಡುತ್ತಿದ್ದಾರೆ. ಬೇರೆ ವಿಮಾನಯಾನ ಸಂಸ್ಥೆಗಳ ವಿಮಾನದಲ್ಲಿ ಪ್ರಯಾಣಿಸಲು ದುಬಾರಿ ದರ ತೆರಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಪ್ರಯಾಣಿಕರಿದ್ದಾರೆ. ವಿಮಾನ ಟಿಕೆಟ್ ದರ ಈಗ ಪ್ರಯಾಣಿಕರಲ್ಲಿ ಕಣ್ಣೀರು ತರಿಸುತ್ತಿದೆ.
ಶುಕ್ರವಾರ, ಪ್ರಮುಖ ನಗರಗಳಿಗೆ 700 ಕ್ಕೂ ಹೆಚ್ಚು ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಿದಾಗ, ವಿಮಾನ ಕಂಪನಿಗಳು, ಪ್ರಯಾಣಿಕರನ್ನು ದಿಗ್ಭ್ರಮೆಗೊಳಿಸುವ ದರಗಳನ್ನು ನಿಗದಿಪಡಿಸಿವೆ. ನವದೆಹಲಿ-ಚೆನ್ನೈ ಏಕಮುಖ ಟಿಕೆಟ್ ₹65,985 ಕ್ಕೆ ಏರಿತು, ಆದರೆ ಭಾರತದ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾದ ನವದೆಹಲಿ-ಮುಂಬೈ ಮಾರ್ಗವು ಒಂದೇ ಪ್ರಯಾಣಕ್ಕೆ ₹38,676 ಕ್ಕೆ ಏರಿತು. ದೆಹಲಿ-ಕೋಲ್ಕತ್ತಾ ಮಾರ್ಗವು ಸಹ ರೂ38,699 ದಾಟಿದೆ. ಕೇವಲ ಬೆರಳೆಣಿಕೆಯಷ್ಟು ಸೀಟುಗಳು ಮಾತ್ರ ಉಳಿದಿವೆ.
ಇನ್ನೂ ನಾಳೆ ಸಂಜೆ 7.30 ಕ್ಕೆ ಬೆಂಗಳೂರಿನಿಂದ ದೆಹಲಿಗೆ ಹೋಗುವ ಏರ್ ಇಂಡಿಯಾ ವಿಮಾನದ ಟಿಕೆಟ್ ದರ 33,838 ರೂಪಾಯಿಗೆ ಏರಿಕೆಯಾಗಿದೆ.
ಇನ್ನೂ ಭಾನುವಾರ ( ಡಿಸೆಂಬರ್ 7, 2025 ) ಬೆಂಗಳೂರಿನಿಂದ ದೆಹಲಿಗೆ ತೆರಳುವ ವಿಮಾನಗಳ ಟಿಕೆಟ್ ದರ ಕನಿಷ್ಠ 23 ಸಾವಿರದಿಂದ ಪ್ರಾರಂಭವಾಗಿ ಗರಿಷ್ಠ 45 ಸಾವಿರ ರೂಪಾಯಿವರೆಗೂ ದರ ಇವೆ.
/filters:format(webp)/newsfirstlive-kannada/media/media_files/2025/12/05/flight-ticket-rise03-2025-12-05-16-45-13.jpg)
ಇಂಡಿಗೋ ದೆಹಲಿ ಮತ್ತು ಚೆನ್ನೈನಿಂದ ಮಧ್ಯರಾತ್ರಿಯವರೆಗೆ ತನ್ನ ಎಲ್ಲಾ ದೇಶೀಯ ನಿರ್ಗಮನಗಳನ್ನು ಸ್ಥಗಿತಗೊಳಿಸಿದ ನಂತರ ಸಾವಿರಾರು ಪ್ರಯಾಣಿಕರು ಪರ್ಯಾಯಗಳಿಗಾಗಿ ಪರದಾಡುತ್ತಿರುವ ಸಮಯದಲ್ಲಿ ಹಠಾತ್ ವಿಮಾನ ಪ್ರಯಾಣ ದರ ಏರಿಕೆಯಾಗಿದೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯು ತನ್ನ ಸಾಮರ್ಥ್ಯದ ಒಂದು ಭಾಗದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿರುವುದರಿಂದ ಬೇರೆ ವಿಮಾನಯಾನ ಕಂಪನಿಗಳ ವಿಮಾನಗಳ ಟಿಕೆಟ್ ಗೆ ಭಾರಿ ಬೇಡಿಕೆ ಬಂದಿದೆ.
ಡಿಸೆಂಬರ್ 5 ಮತ್ತು 6 ರಂದು ಏರ್ ಲೈನ್ಸ್ ಗಳು ಕೊನೆಯ ಕ್ಷಣದಲ್ಲಿ ಆಘಾತಕಾರಿ ಬೆಲೆಗಳನ್ನು ಪ್ರದರ್ಶಿಸಿದವು. ಚೆನ್ನೈಗೆ ಕೆಲವು ಮಲ್ಟಿ-ಸ್ಟಾಪ್ ಆಯ್ಕೆಗಳು ₹71,000 ಕ್ಕಿಂತ ಹೆಚ್ಚು ಬೆಲೆಯನ್ನು ಹೊಂದಿದ್ದವು. ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ "ಎರಡು ಬಾರಿ ಶಿಕ್ಷೆಗೆ ಒಳಗಾಗುತ್ತಿದ್ದಾರೆ" ಎಂದು ದೂರಿದರು, ಮೊದಲು ರದ್ದತಿಯಿಂದ, ನಂತರ ಕೈಗೆಟುಕಲಾಗದ ದರಗಳಿಂದ, ರೈಲುಗಳು ಸಹ ಸಂಪೂರ್ಣವಾಗಿ ಬುಕ್ ಆಗಿರುವುದರಿಂದ ಏನು ಮಾಡಲಾಗದ ಸ್ಥಿತಿಯಲ್ಲಿ ಪ್ರಯಾಣಿಕರಿದ್ದಾರೆ.
/filters:format(webp)/newsfirstlive-kannada/media/media_files/2025/12/05/flight-ticket-rise-1-2025-12-05-16-45-35.jpg)
ವಿಮಾನಯಾನ ಸಂಸ್ಥೆಗಳು ಬಿಕ್ಕಟ್ಟಿನ ಲಾಭವನ್ನು ಪಡೆಯದಂತೆ ಖಚಿತಪಡಿಸಿಕೊಳ್ಳಲು ವಿಮಾನ ದರಗಳನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲು ನಾಗರಿಕ ವಿಮಾನಯಾನ ಸಚಿವರು ಈಗಾಗಲೇ ಡಿಜಿಸಿಎಗೆ ನಿರ್ದೇಶನ ನೀಡಿದ್ದಾರೆ. ಆದರೇ, ಡಿಜಿಸಿಎ ನಿಯಂತ್ರಣ ವ್ಯವಸ್ಥೆಗೂ ವಾಸ್ತವವಾಗಿ ಇರುವ ಟಿಕೆಟ್ ದರಗಳಿಗೂ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಏರ್ ಪೋರ್ಟ್ ಗಳಲ್ಲಿ ಸಿಲುಕಿರುವ ಪ್ರಯಾಣಿಕರು ಬೇರೆ ಏರ್ ಲೈನ್ಸ್ ಗಳ ಟಿಕೆಟ್ ಬುಕ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us