ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿರಿಂದ ಯುವತಿಗೆ ಇನ್ಸಾಟಾಗ್ರಾಮ್ ಸಂದೇಶ: ಮೊಬೈಲ್ ಹ್ಯಾಕ್ ಆಗಿದೆ ಎಂದ ಶಾಸಕ

ಬೆಂಗಳೂರಿನ ಜಯನಗರ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಅವರ ಇನ್ಸಾಟಾಗ್ರಾಮ್ ಖಾತೆಯಿಂದ ಅನುಷ್ಕಾ ನಾಗಮೋಹನ್ ಎಂಬ ಯುವತಿಗೆ ಸಂದೇಶಗಳು ರವಾನೆಯಾಗಿವೆ. ಇದರ ವಿರುದ್ಧ ಅನುಷ್ಕಾ ಕಿಡಿಕಾರಿದ್ದಾರೆ. ಆದರೇ, ತಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂದು ಶಾಸಕ ಸಿ.ಕೆ.ರಾಮಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

author-image
Chandramohan
MLA CK RAMMURTHY MESSAGE TO GIRL

ಶಾಸಕ ಸಿ.ಕೆ.ರಾಮಮೂರ್ತಿಯಿಂದ ಯುವತಿಗೆ ಮೇಸೇಜ್ ಆರೋಪ

Advertisment
  • ಶಾಸಕ ಸಿ.ಕೆ.ರಾಮಮೂರ್ತಿಯಿಂದ ಯುವತಿಗೆ ಮೇಸೇಜ್ ಆರೋಪ
  • ತಾವು ಮೇಸೇಜ್ ಮಾಡಿಲ್ಲ, ಮೊಬೈಲ್ ಹ್ಯಾಕ್ ಆಗಿದೆ ಎಂದ ಶಾಸಕ
  • ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲು ರಾಮಮೂರ್ತಿ ನಿರ್ಧಾರ

ಅನುಷ್ಕಾ ನಾಗಮೋಹನ್ ಎಂಬ ಯುವತಿಗೆ ಶಾಸಕ ಸಿ.ಕೆ.ರಾಮಮೂರ್ತಿ ಅವರಿಂದ  ಇನ್ಸಾಟಾಗ್ರಾಮ್  ಸಂದೇಶ ಬಂದಿದೆ. ಬೆಂಗಳೂರಿನ ಜಯನಗರ ಕ್ಷೇತ್ರದ ಶಾಸಕ ಸಿ.ಕೆ.ರಾಮಮೂರ್ತಿ ಅವರ  ಇನ್ಸಾಟಾಗ್ರಾಮ್  ಅಕೌಂಟ್ ನಿಂದ ಅನುಷ್ಕಾ ನಾಗಮೋಹನ್ ಎಂಬ ಯುವತಿಗೆ ಗುಡ್ ಮಾರ್ನಿಂಗ್, ಗುಡ್ ಇವನಿಂಗ್ ಸಂದೇಶಗಳು ಬಂದಿವೆ. ಇದರ ವಿರುದ್ಧ ಅನುಷ್ಕಾ ನಾಗಮೋಹನ್ ಕಿಡಿಕಾರಿದ್ದಾರೆ. ಮೇಸೇಜ್ ನಲ್ಲಿ ಕೆಲವೊಂದು ಅಶ್ಲೀಲ ಅಂಶ ಕೂಡ ಇದೆ. ಈ ಬಗ್ಗೆ ಅನುಷ್ಕಾ ನಾಗಮೋಹನ್, ಸಿ.ಕೆ.ರಾಮಮೂರ್ತಿ ಅವರ ಇನ್ಸಾಟಾಗ್ರಾಮ್ ಮೇಸೇಜ್ ಅನ್ನು ಟ್ವೀಟರ್ ನಲ್ಲಿ ಟ್ವೀಟ್ ಮಾಡಿ ಪೋಸ್ಟ್ ಮಾಡಿದ್ದಾರೆ. 
ಆದರೇ, ತಮ್ಮ ಮೊಬೈಲ್ ಹ್ಯಾಕ್ ಆಗಿದೆ. ಮೊಬೈಲ್ ಹ್ಯಾಕ್ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದು ಶಾಸಕ ಸಿ.ಕೆ.ರಾಮಮೂರ್ತಿ ಸ್ಪಷ್ಟನೆ ನೀಡಿದ್ದಾರೆ. ಬಳಿಕ ಸೈಬರ್ ಪೊಲೀಸ್ ಠಾಣೆಗೆ ಶಾಸಕ ಸಿ.ಕೆ.ರಾಮಮೂರ್ತಿ ದೂರು ನೀಡಿದ್ದಾರೆ. 
ತಮ್ಮ ಹೆಸರಿನಲ್ಲಿ ನಕಲಿ ಖಾತೆ ತೆರೆದು ಬೇರೆಯವರಿಗೆ ಮೇಸೇಜ್ ಕಳುಹಿಸುತ್ತಿದ್ದಾರೆ. ಜೊತೆಗೆ ಇನ್ಸಾಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಶಾಸಕ ಸಿ.ಕೆ.ರಾಮಮೂರ್ತಿ ತಮ್ಮ ದೂರಿನಲ್ಲಿ ಸೈಬರ್ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. 
ಇನ್ನೂ ಸಿ.ಕೆ.ರಾಮಮೂರ್ತಿ ಇನ್ಸಾಟಗ್ರಾಮ್ ಖಾತೆಯಿಂದ ಯುವತಿಯರಿಗೆ ಮೇಸೇಜ್ ಹೋಗಿರುವ ವಿಚಾರಕ್ಕೆ ಯುವ ಕಾಂಗ್ರೆಸ್ ಘಟಕ, ಶಾಸಕ ರಾಮಮೂರ್ತಿ ವಿರುದ್ಧ ವಾಗ್ದಾಳಿ ನಡೆಸಿ ಟೀಕಿಸಿದೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MLA CK RAMAMURTHY
Advertisment