/newsfirstlive-kannada/media/media_files/2026/01/03/rajivgandhi-housing-corporation-2026-01-03-13-38-41.jpg)
ವಲಸಿಗರಿಗೆ ಪ್ಲ್ಯಾಟ್ ನೀಡಲು ಮಾನದಂಡ ಸಡಿಲಿಸಲಾಗುತ್ತಾ?
ಬೆಂಗಳೂರು ಕೋಗಿಲು ಲೇಔಟ್ ನಿವಾಸಿಗಳಿಗಾಗಿ ನಿಯಮ ಬದಲಾಗುತ್ತಾ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ ಮಾನದಂಡಗಳನ್ನು ಸಡಿಲಿಕೆ ಮಾಡಲಾಗುತ್ತಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಇಷ್ಟು ದಿನ ರಾಜೀವ್ ಗಾಂಧಿ ವಸತಿ ನಿಗಮದ 15 ಮಾನದಂಡಗಳ ಅನುಸರಿಸಿಯೇ ಅರ್ಹರಿಗೆ ಮನೆ/ ಫ್ಲ್ಯಾಟ್ ಹಂಚಿಕೆ ಮಾಡಲಾಗುತ್ತಿದೆ. ಆದರೆ, ಒತ್ತುವರಿದಾರರ ಬಳಿ ಈ ಮಾನದಂಡಗಳನ್ನು ಪೂರೈಸುವ ಅಗತ್ಯ ದಾಖಲಾತಿಗಳು ಇಲ್ಲ...!
ಈ 15 ಅರ್ಹತೆಗಳು, ಮಾನದಂಡಗಳು ಇದ್ದವರನ್ನ ಮನೆ, ಪ್ಲ್ಯಾಟ್ ಆಯ್ಕೆಗೆ ಫೈನಲ್ ಮಾಡುವ ಸಾಧ್ಯತೆ ಇದೆ. ಈ ಮಾನದಂಡಗಳನ್ನ ಆಧರಿಸಿ, ನಿವೇಶನಗಳನ್ನ ಹಂಚಲು ತೀರ್ಮಾನ ಮಾಡಲಾಗಿದೆ.
ರಾಜೀವ್ ಗಾಂಧಿ ವಸತಿ ನಿಗಮದ 15 ಮಾನದಂಡಗಳೇನು?
1.ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹3.00.000/- ಮಿತಿಯೊಳಗಿರಬೇಕು
*2.ಅರ್ಜಿದಾರರು ಕನಿಷ್ಟ 5 ವರ್ಷಗಳಿಂದ ಬೆಂಗಳೂರು (ನಗರ) ಜಿಲ್ಲೆ ವ್ಯಾಪ್ತಿಯಲ್ಲಿ ವಾಸವಿರಬೇಕು
3. ವಸತಿರಹಿತ ಕುಟುಂಬವಾಗಿರಬೇಕು
4.ಆಧಾರ್ ಸಂಖ್ಯೆ ಕಡ್ಡಾಯವಾಗಿರಬೇಕು
5.ಅರ್ಜಿದಾರರು ಪಡಿತರ ಚೀಟಿಯನ್ನು ಹೊಂದಿರಬೇಕು.
6.ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿರಬೇಕು
7. ಜಾತಿ ಆಧಾರಿತ ಮೀಸಲಾತಿ ಪಡೆಯಲಿಚ್ಚಿಸುವವರಿಗೆ ಜಾತಿ ಪತ್ರ ಕಡ್ಡಾಯವಾಗಿರುತ್ತದೆ
8.ಅರ್ಜಿದಾರರರು ಚುನಾವಣಾ ಆಯೋಗದ ಗುರುತಿನ ಚೀಟಿ ಹೊಂದಿರಬೇಕು
9.ಅರ್ಜಿದಾರರು ಕಟ್ಟಡ ಕಾರ್ಮಿಕರಾಗಿದ್ದಲ್ಲಿ ಕಾರ್ಮಿಕ ಇಲಾಖೆಯ ನೋಂದಣಿ ಸಂಖ್ಯೆ ಹೊಂದಿರಬೇಕು
10.ಅರ್ಜಿದಾರರು ವಿಕಲಚೇತನರಾಗಿದ್ದಲ್ಲಿ, ಆ ಬಗ್ಗೆ ಪ್ರಮಾಣ ಪತ್ರವನ್ನು ಹೊಂದಿರಬೇಕು
ಒಟ್ಟು ಫ್ಲಾಟ್ ಗಳಲ್ಲಿ ವಿಕಲಚೇತನರಿಗೆ ಶೇ. 2 ಮೀಸಲಾತಿ ಇರುತ್ತದೆ
11. ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು
12. ಕ್ಯಾಬ್ ಡ್ರೈವರ್, ಮನೆ ಕೆಲಸದವರು, ತಳ್ಳುವ ಗಾಡಿಯಲ್ಲಿ ಮಾರುವವರು
ರಸ್ತೆ ಬದಿಯಲ್ಲಿ ಮಾರುವವರಿಗೆ ಮೊದಲ ಆದ್ಯತೆ ನೀಡಲಾಗುವುದು
13. ಪ್ರತಿ ಕುಟುಂಬಕ್ಕೆ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವಿದೆ
14. ಪ್ಲಾಟ್ ಆಯ್ಕೆಯಲ್ಲಿ ಶೇ.50 ಸಾರ್ವಜನಿಕರಿಗೆ ಶೇ.50 ಸ್ಥಳೀಯರಿಗೆ ಮೀಸಲಾತಿ ಇರುತ್ತದೆ.
15. ಫಲಾನುಭವಿಗಳ ಗೃಹ ಬ್ಯಾಂಕ್ ಸಾಲದ ಮೇಲಿನ ಬಡ್ಡಿಯಲ್ಲಿ 3% ರಿಂದ 5% ರಂತೆ
EMI ನ ಶೇಕಡ 26%ರಷ್ಟು, ಗರಿಷ್ಠ ರೂ. 3000/- ಗಳ ಮಿತಿಗೆ ಒಳಪಟ್ಟು ಸರ್ಕಾರ ಭರಿಸುವುದು
/filters:format(webp)/newsfirstlive-kannada/media/media_files/2026/01/03/rajivgandhi-housing-corporation-1-2026-01-03-13-39-52.jpg)
ಯಾವ ಮಾನದಂಡ ಪಾಲಿಸುತ್ತೆ?
ಬಹುತೇಕ ಒತ್ತುವರಿದಾರರ ಬಳಿ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಇಲ್ಲ ಎನ್ನಲಾಗಿದೆ
ಕಾರ್ಮಿಕರು, ಕೂಲಿ ಕೆಲಸ ಮಾಡೋರು ಎಂದೇಳುತ್ತಾರೆ ಅದರೆ ಡಾಕ್ಯುಮೆಂಟ್ ಇಲ್ಲ ಎನ್ನಲಾಗಿದೆ
ನಿಯಮದ ಪ್ರಕಾರ 5 ವರ್ಷ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ವಾಸ ಇರಬೇಕು
ಕೆಲವರ ಬಳಿ 5 ವರ್ಷ ವಾಸಕ್ಕೆ ಸಂಬಂಧಪಟ್ಟಂತಹ ಡಾಕ್ಯುಮೆಂಟ್ ಇಲ್ಲ
57 ಜನರ ಬಳಿ ಮಾತ್ರ ರೇಷನ್ ಕಾರ್ಡ್ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
/filters:format(webp)/newsfirstlive-kannada/media/media_files/2026/01/03/rajivgandhi-housing-corporation-2-2026-01-03-13-40-21.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us